Shubhashaya News

ಭ್ರಷ್ಟಾಚಾರ ಧ್ವನಿಯೆತ್ತುವ ಶಾಸಕ ಪಾಟೀಲರ ಕ್ಷೇತ್ರದಲ್ಲೇ ಅದೋಗತಿ: ವಾಲಿ  

ಭ್ರಷ್ಟಾಚಾರ ಮುಕ್ತ ಆಳಂದಕ್ಕೆ ಮಹೇಶ್ವರಿ ಚಾಲನೆ   

ಆಳಂದ: ರಾಜ್ಯ ಹೆದ್ದಾರಿಯಾದ ಮುನ್ನೊಳ್ಳಿ ಮಾರ್ಗದ ರಸ್ತೆ ದುರಸ್ಥಿಯ ಸ್ಥಳದಿಂದ ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ಅವರು ತಮ್ಮ ಫೇಸ್ ಬುಕ್ ಪುಟದ ಲೈವ್ ಮೂಲಕ ಮಾತನಾಡಿದರು.

ಆಳಂದ: ಭ್ರಷ್ಟಾಚಾರ ಧ್ವನಿಯೆತ್ತುವ ಶಾಸಕ ಬಿ.ಆರ್. ಪಾಟೀಲರ ಕ್ಷೇತ್ರದಲ್ಲೇ ಪರಿಸ್ಥಿತಿ ಅದೋಗತಿಗೆ ಹೋಗಿದ್ದು, ಅಧಿಕಾರಿಗಳ ವರ್ಗಾವಣೆ, ಕಳಪೆಮಟ್ಟದ ರಸ್ತೆಯಿಂದ ಕೋಟ್ಯಂತರ ಲೂಟಿ, ಶಾಲೆಗಳಲ್ಲಿ ಅವ್ಯವಸ್ಥೆ ಗ್ರಾಪಂಗಳಲ್ಲಿ ಹಸ್ತಕ್ಷೇಪ, ಭ್ರಷ್ಟಾಚಾರಕ್ಕೆ ಕುಮಕ್ಕು, ಸೋಹದರನ ಪುತ್ರನ ಕಾರೋಬಾರ ಇದು ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ, ಇದರ ವಿರುದ್ಧ ಹೋರಾಟ ಮುಂದುವರೆಸಲಾಗಿದೆ, ಜನ ಎಚ್ಚೇತ್ತುಕೊಳ್ಳುತ್ತಿದ್ದಾರೆ ಎಂದು ಜೆಡಿ(ಎಸ್), ನಾಯಕಿ ಮಹೇಶ್ವರಿ ಎಸ್.ವಾಲಿ ಅವರು ಗುಡಗಿದರು.

ಜೆಡಿಎಸ್ ಪಕ್ಷದಿಂದ ತಮ್ಮ ನೇತೃತ್ವದಲ್ಲಿ ಬುಧವಾರದಿಂದ ಕೈಗೊಂಡ ಭ್ರμÁ್ಟಚಾರ ಮುಕ್ತ ಆಳಂದ ಆಂದೋಲನ ಭಾಗವಾಗಿ ತಾಲೂಕಿನ ಗ್ರಾಮೀಣ ಪ್ರದೇ±ಗಳಿಗೆ ಸರಣಿ ಭೇಟಿ ನೀಡಿದ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಗುರುವಾರ ಬಹಿರಂಗ ಮಾತನಾಡಿದರು.

ಪಡಸಾವಳಿ ಗ್ರಾಮದಲ್ಲಿ ಕೆಕೆಆರ್‍ಡಿಬಿ ಅನುದಾನದ 1 ಕೋಟಿ ರೂಪಾಯಿ ವೆಚ್ಚದಲ್ಲಿ 1ಕಿ.ಮೀ ರಸ್ತೆ ಮುಂದುವರೆದ ಕಾಮಗಾರಿಯ ತಿಂಗಳಲ್ಲೇ ರಸ್ತೆ ಕುಸಿದುಹೋಗಿದ್ದು, ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ಗ್ರಾಮಸ್ಥರೊಂದಿಗೆ ಗುರುವಾರ ಸ್ಥಳ ವೀಕ್ಷಿಸಿ ಅವರು ಹೇಳಿದರು.

ತಾಲೂಕಿನ ತಡಕಲ್-ಮುನ್ನೋಳಿ ಮಾರ್ಗದ ರಾಜ್ಯ ಹೆದ್ದಾರಿ 13ರ ಸುಲೇಪೇಟ್‍ನಿಂದ ಉಮರ್ಗಾ ಮಾರ್ಗದ ಮುನವಳ್ಳಿಯವರೆಗಿನ ಸುಮಾರು 5-6 ಕಿಲೋಮೀಟರ್ ರಸ್ತೆಯ ವಾಹನ ಸಂಚಾರಕ್ಕೆ ಬಾರದ ದುಸ್ಥಿತಿಗೆ  ಕಾಂಗ್ರೆಸ್ ಶಾಸಕ ಪಾಟೀಲ್‍ರಿಗೆ ತೀಕ್ಷ್ಣ ಸವಾಲು ಹಾಕಿದರು.

ಕಾಂಗ್ರೆಸ್ ಕಾರ್ಯಕರ್ತರು ಹಿಂದಿನ ಬಿಜೆಪಿ ಶಾಸಕÀರ ಆಡಳಿತದಲ್ಲಿ ಈ ರಸ್ತೆಯ ದುರ್ಬಲತೆಯ ಬಗ್ಗೆ ವಿಡಿಯೋ ವೈರಲ್ ಮಾಡಿ ಪ್ರಚಾರ ಮಾಡಿದ್ದರು ಈಗ ಅವರದ್ದೇ ಶಾಸಕರು ಅಧಿಕಾರದಲ್ಲಿದ್ದಾರೆ ಏಕೆ ರಸ್ತೆ ಮಾಡಿಕೊಳ್ಳುತ್ತಿಲ್ಲ ಈಗೆಲ್ಲಿದ್ದಿರಾ ಎಂದು ಪ್ರಶ್ನಿಸಿದ್ದಾರೆ.

ಹಿಂದೆ ಧ್ವನಿಎತ್ತಿದವರು ಈಗ ಮೌನವಗಿದ್ದಾರೆ. “ರಸ್ತೆಯ ದುಸ್ಥಿತಿಯ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮಾತನಾಡುವುದಿಲ್ಲವೇಕೆ? ಶಾಸಕ ಬಿಆರ್ ಪಾಟೀಲ್ ಈ ಬಗ್ಗೆ ಚಕಾರ ಎತ್ತದಿರುವುದು ಯಾಕೆ?” ಎಂದ ಅವರು, ಈ ಗ್ರಾಮೀಣ ರಸ್ತೆಯ ದುಸ್ಥಿತಿಯಿಂದ ಸ್ಥಳೀಯ ಜನರಿಗೆ ಸಂಚಾರದಲ್ಲಿ ತೊಂದರೆಯಾಗುತ್ತಿದ್ದು, ರೈತರು ಮತ್ತು ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗಿದೆ ತಾಲೂಕಿನಲ್ಲಿ ಇಂಥ ಹಲವು ರಸ್ತೆಗಳಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ. ಹಲವಡೆ ರಸ್ತೆ ನಿರ್ಮಾಣ ವಿಲ್ಲದಕ್ಕೆ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂದ ಆಕ್ರೋಶ ವ್ಯಕ್ತಪಡಿಸಿದರು.

ಹಲವಡೆ ಭೇಟಿ: ತಮ್ಮ ಕಾರ್ಯಕರ್ತರೊಂದಿಗೆ ಮುನ್ನೊಳ್ಳಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ವಾಲಿ ಅವರು, ಇಲ್ಲಿನ ಅಂಗನವಾಡಿ ಕೇಂದ್ರ ಸೇರಿ 10 ಗ್ರಾಮಗಳಲ್ಲಿನ ಅಂಗನವಾಡಿ ವಿದ್ಯುತ್‍ಕರಣ ಮಾಡದೆ ಪ್ರತಿ ಕೇಂದ್ರದಿಂದ 50 ಸಾವಿರ ರೂಪಾಯಿ ಸುಳ್ಳು ಬಿಲ್ ಎತ್ತಿಹಾಕಿದ್ದಾರೆ. ಕೇಂದ್ರಗಳಿಗೆ ಇಲಾಖೆಯಿಂದಲೇ ಹಾಲಿನಪುಡಿ ಪೌಷ್ಠಿಕ ಆಹಾರ ವಿತರಣೆ ಸಮಪರ್ಕವಾಗಿ ವಿತರಣೆ ಆಗುತ್ತಿಲ್ಲ ಎಂದು ದೂರಿದರು.

ಬಿಜಲಿಗುಂಡ ತಾಂಡಾದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಮಹೇಶ್ವರಿ ವಾಲಿ ಅವರು, ಶಾಲಾ ದುರಸ್ಥಿಗೆ ಬಂದ 2ಲಕ್ಷ ರೂಪಾಯಿ ಹಣವನ್ನು ಕಾಮಗಾರಿ ಮಾಡದೆ ಎತ್ತಿಹಾಕಿದ್ದಾರೆ. ಇಂಥ ದುರಸ್ಥಿ ಹೆಸರಿನಲ್ಲಿ 8 ಶಾಲೆಗಳಲ್ಲಿ ಹಣ ಎತ್ತಿಹಾಕಿದ್ದಾರೆ ಎಂದು ದೂರಿದರು.

ತೀರ್ಥ ತಾಂಡಾದ ರಸ್ತೆ ಕೈಗೊಂಡು ಮೂರು ತಿಂಗಳಲ್ಲೇ ಸಂಪೂರ್ಣ ಹಾಳಾಗಿದೆ. 1.20ಕೋಟಿ ರೂಪಾಯಿ ಹಾಳಾಗಿದೆ ಶಾಸಕರ ಅಭಿವೃದ್ಧಿ  ನಿರ್ಲಕ್ಷ್ಯವನ್ನು ಖಂಡಿಸಿರುವ ಅವರು, ತಕ್ಷಣವೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಜೊತೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.

Comments are closed.

Don`t copy text!