Shubhashaya News

ಸಂವಿಧಾನ ರಕ್ಷಣೆ, ಸಾಮಾಜಿಕ ನ್ಯಾಯಕ್ಕೆ ಕಮ್ಯುನಿಸ್ಟ್ ಪಕ್ಷದ ಕರೆ

ಆಳಂದನಲ್ಲಿ ಸಿಪಿಐ ರಾಜ್ಯ ಸಮ್ಮೇಳನ ಲೋಗೋ ಬಿಡುಗಡೆ

ಆಳಂದ: ಪಟ್ಟಣದಲ್ಲಿ ನಡೆದ ಸಿಪಿಐ ಸಮ್ಮೇಳನದಲ್ಲಿ ಪಕ್ಷದ ಧ್ವಜಾರೋಹಣವನ್ನು ಹಿರಿಯ ಕಾ. ಪದ್ಮಾಕರ್ ಜಾನಿಬ ನೆರವೇರಿಸಿದರು.

ಆಳಂದ: ಕಲಬುರಗಿಯಲ್ಲಿ ಅಗಸ್ಟ್ 30ರಿಂದ ಮೂರುದಿನಗಳ ನಡೆಯುವ ರಾಜ್ಯ ಸಮ್ಮೇಳನದ ಲೋಗೋವನ್ನು ಪಟ್ಟಣದಲ್ಲಿ ನಡೆದ ಸಿಪಿಐ ಸಮ್ಮೇಳನದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ. ಅಮಜದ್ ಅವರು ಬಿಡುಡೆಗೊಳಿಸಿದರು. ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡಿಯಾಳ, ಮಹೇಶ ರಾಠೋಡ ಮೌಲಾ ಮುಲ್ಲಾ ಇತರರು ಇದ್ದರು.
ಆಳಂದ್: ಪಟ್ಟಣದ ಪೆÇಲೀಸ್ ಠಾಣೆಯ ಬಳಿಯ ಶಾಹಿದ್ ಫಂಕ್ಷನ್ ಹಾಲ್‍ನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ತಾಲೂಕ ಸಮ್ಮೇಳನ ಬುಧವಾರ ಜರುಗಿತು.
ಸಿಪಿಐ ರಾಜ್ಯ ಕಾರ್ಯದರ್ಶಿ ಕಾ|| ಬಿ. ಅಮ್ಜದ್ ಅವರು ಸಮ್ಮೇಳನವನ್ನು ಉದ್ಘಾಟಿಸಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಿಪಿಐನ ಪಾತ್ರವನ್ನು ಶ್ಲಾಘಿಸಿದ ಅವರು, “ಸಿಪಿಐ ಭಾರತದ ಸ್ವತಂತ್ರ್ಯ ಪೂರ್ವದ ಪ್ರಥಮ ರಾಜಕೀಯ ಪಕ್ಷವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿತು. ನಮ್ಮ ಬಾವುಟ ಕೆಂಪು, ಏಕತೆ ಮತ್ತು ಶೋಷಣೆ ವಿರುದ್ಧದ ಹೋರಾಟದ ಸಂಕೇತವಾಗಿದೆ,” ಎಂದು ಹೇಳಿದರು.
ಬಂಡವಾಳಶಾಹಿ ಧೋರಣೆಗಳು ಬಡವರನ್ನು, ರೈತರನ್ನು ಶೋಷಣೆಗೊಳಪಡಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಯಂತಹ ಪಕ್ಷಗಳು ಸಂವಿಧಾನಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡುತ್ತಿವೆ ಎಂದು ಟೀಕಿಸಿದರು.
“ಕಮ್ಯುನಿಸ್ಟ್ ಪಕ್ಷ ಸಂವಿಧಾನದ ರಕ್ಷಣೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದೆ. ಭಾರತದಲ್ಲಿ ಸಿಪಿಐ ಇಲ್ಲದಿದ್ದರೆ ಸ್ವಾತಂತ್ರ್ಯವೇ ದೊರೆಯುತ್ತಿರಲಿಲ್ಲ,” ಎಂದು ಅಮ್ಜದ್ ಒತ್ತಿ ಹೇಳಿದರು.
ಸ್ವಾತಂತ್ರ್ಯಾನಂತರ ಸಿಪಿಐ ಪ್ರಥಮ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿತು ಎಂದು ನೆನಪಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಕೆಲವು ರಾಜ್ಯಗಳಲ್ಲಿ ಅನ್ಯಾಯದ ಮಾರ್ಗಗಳ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿವೆ.”ಸಿಪಿಐ ಯಾವುದೇ ಶಾರ್ಟ್‍ಕಟ್ ಮಾರ್ಗವನ್ನು ಅನುಸರಿಸದೆ, ನ್ಯಾಯ ಮತ್ತು ಸಮಾಜವಾದದ ಮೂಲಕ ಅಧಿಕಾರಕ್ಕೆ ಬರಲು ಮುನ್ನಡೆಯುತ್ತಿದೆ,” ಎಂದು ಅವರು ಸ್ಪಷ್ಟಪಡಿಸಿದರು.
ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಶೋಷಣೆ ವಿರುದ್ಧದ ಹೋರಾಟಕ್ಕೆ ಸಿಪಿಐ ಬದ್ಧವಾಗಿದೆ ಜನಪರ ಹಿತರಕ್ಷಣೆಗೆ ರೈತರು, ಕಾರ್ಮಿಕರು ಬಡವರು ಒಂದಾಗಿ ನಿಲ್ಲಬೇಕಾಗಿದೆ ಎಂದು ಅವರು ಹೇಳಿದರು.
ಸಿಪಿಐ ಪಕ್ಷದ ರಾಜ್ಯ ಮಂಡಳಿಯ ಕಾರ್ಯದರ್ಶಿ ಮೌಲಾ ಮುಲ್ಲಾ, ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ, ಪ್ರಭುದೇವ ಯಳಸಂಗಿ, ಕಿಸಾನಸಭಾ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಹಿರಿಯ ಪದ್ಮಾಕರ ಜಾನಿಬ್ ಅವರು ಸಮ್ಮೇಳನ ಉದ್ದೇಶಿಸಿ ಮಾತನಾಡಿ, ಶ್ರಮಿಕರ ಧ್ವನಿಯನ್ನು ಎತ್ತಿ ಹಿಡಿದು ನ್ಯಾಯಕ್ಕಾಗಿ ಹೋರಾಡುವ ಮೂಲಕ ಪಕ್ಷದ ಸಂಘಟನೆಗೆ ಒಗ್ಗೂಡಬೇಕು ಎಂದು ಹೇಳೀದರು.
ಪಕ್ಷದ ತಾಲೂಕು ಕಾರ್ಯದರ್ಶಿ ಮೈಲಾರಿ ಜೋಗೆ ಅಧ್ಯಕ್ಷತೆ ವಹಸಿದ್ದರು. ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಧರ್ಮರಾಜ ಕೊರಳ್ಳಿ, ನ್ಯಾಯವಾದಿ ಪಂಡಿತ ಸಲಗರೆ, ರಾಜಶೇಖರ ಬಸ್ಮೆ, ಕಲ್ಯಾಣಿ ಅವುಟೆ, ಸಾಯಬಣ್ಣಾ ಪೂಜಾರಿ, ಜಗನಾಥ ಗುಂಡಗುರತಿ ಬಟ್ಟರಗಾ, ಶಿರಾಜ ಖಾಜಿ, ಅಸ್ಪಾಕ್ ಮುಲ್ಲಾ, ರಜಾಕ ಆಳಂದ, ವಿಜಯಲಕ್ಷ್ಮೀ ಪಿ. ಯಸಳಂಗಿ, ಮಹಾನಂದ ತುಕಾಣೆ, ರೇಷ್ಮಾ ಶುಕ್ರವಾಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು. ಕಲ್ಯಾಣಿ ತುಕಾಣಿ ನಿರೂಪಿಸಿದರು.
ಸಮ್ಮೇನ ಪೂರ್ವ ಪಟ್ಟಣದ ಗುರುಭವನದ ಬಳಿಯ ಪಕ್ಷದ ಕಚೇರಿಯಿಂದ ಮೆರವಣಿಗೆ ಮೂಲಕ 2ಕಿ.ಮೀ. ವರೆಗಿನ ಶಾಹಿನ ಪಂಕ್ಷನ್ ಹಾಲವರೆಗೆ ಸಾಗಿ ಬಳಿಕ ಪಕ್ಷದ ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನ ಉದ್ಘಾಟನೆಗೊಂಡು ವಿಶೇಷ ಚರ್ಚೆ ನಡೆದವು.
ಛತ್ತೀಸ್ಗಢದಲ್ಲಿ ಸಿಪಿಐ ರಾಷ್ಟ್ರೀಯ ಸಮ್ಮೇಳನ:
ಸೆಪ್ಟೆಂಬರ್ 21ರಿಂದ 25ರವಗೆಗೆ ಛತ್ತೀಸ್ಗಢ ರಾಜ್ಯದ ಚಂಡಿಗಡ್‍ನಲ್ಲಿ ಸಿಪಿಐ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಈ ಮುನ್ನಾ ಆಯಾ ರಾಜ್ಯಗಳಲ್ಲಿ ರಾಜ್ಯ ಸಮ್ಮೇಳನ ಭಾಗವಾಗಿ ಕರ್ನಾಟಕದ ಕಲಬುರಗಿಯಲ್ಲಿ ಅಗಸ್ಟ 30ರಿಂದ ಮೂರು ದಿನಗಳ ಕಾಲ ಸಿಪಿಐ ರಾಜ್ಯ ಸಮ್ಮೇಳನ ನಡೆಯಲಿದೆ. ಈ ಪೂರ್ವ ದೇಶದ ಎಲ್ಲಾ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಸಮ್ಮೇಳನಗಳನ್ನು ಸಿದ್ಧತೆ ಪೂರ್ವ ನಡೆಸಲಾಗುತ್ತಿದೆ.
ಕಾ|| ಬಿ. ಅಮ್ಜದ್
ಸಿಪಿಐ ರಾಜ್ಯ ಕಾರ್ಯದರ್ಶಿಗಳು ಬೆಂಗಳೂರು.

Comments are closed.

Don`t copy text!