ಗಡಿನಾಡಿನ ಪ್ರತಿಷ್ಠಿತ ಖಾಸಗಿ ವೈದ್ಯರ ಸಮಾಗಮ
:ಆಳಂದದಲ್ಲಿ ಡಾ. ಪಿ. ಎನ್. ಶಹಾ ಉಮರಗಾದ ಡಾ. ಸುಭಾμï ಏಳಾÀಪುರೆ ಜನತೆಗೆ ಅವಿರತ ವೈದ್ಯಕೀಯ ಸೇವೆ
ಆಳಂದ: ಪಟ್ಟಣದ ಪ್ರತಿಷ್ಠಿತ ಖಾಸಗಿ ವೈದ್ಯ ಡಾ. ಪಿ ಎನ್ ಶಾಹ ಅವರ ಆರೋಗ್ಯವನ್ನು ಉಮಾರ್ಗ ಹಿರಿಯ ವೈದ್ಯ ಡಾ ಸುಭಾμï ಏಳಾಪುರೆ ಸ್ಥಳೀಯ ಉದ್ಯಮಿ ರಮೇಶ್ ಲೋಹಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಆಳಂದ್: ಕರ್ನಾಟಕ-ಮಹಾರಾಷ್ಟ್ರ ಗಡಿನಾಡಿನ ಆಳಂದ ತಾಲೂಕಿನ ಜನತೆಗೆ ಬಹುದಿನಗಳಿಂದ ತಮ್ಮ ಸಮರ್ಪಿತ ವೈದ್ಯಕೀಯ ಸೇವೆಯಿಂದ ಆರೋಗ್ಯ ಭದ್ರತೆಯನ್ನು ಒದಗಿಸುತ್ತಿರುವ ಪ್ರತಿಷ್ಠಿತ ಖಾಸಗಿ ವೈದ್ಯ ಡಾ. ಪಿ. ಎನ್. ಶಹಾ ಮತ್ತು ಮತ್ತು ಮಹಾರಾಷ್ಟ್ರದ ಉಮಾರ್ಗದಲ್ಲಿ ಡಾ. ಸುಭಾμï ಏಳಪುರೆ ಅವರ ಕಾರ್ಯ ಸಮಾಗಮ ನಡೆದಿದೆ.
ಪಟ್ಟಣದ ಪ್ರತಿಷ್ಠಿತ ವೈದ್ಯ ಡಾ. ಪಿ. ಎನ್. ಶಹಾ ಅವರು ಇತ್ತೀಚೆಗೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡ ಬಳಿಕವೂ ತಮ್ಮ ವೈದ್ಯಕೀಯ ಸೇವೆಯನ್ನು ಮುಂದುವರೆಸಿದ್ದಾರೆ. ಅವರ ಬಾಲ್ಯದ ಸ್ನೇಹಿತ ಮಹಾರಾಷ್ಟ್ರದ ಉಮರ್ಗಾದ ಖ್ಯಾತ ವೈದ್ಯ ಡಾ. ಸುಭಾμï ಏಳಾಪುರೆ ಮತ್ತು ಅವರ ಜೊತೆಯಲ್ಲಿ ಸ್ಥಳೀಯ ಉದ್ದಿಮಿ ರಮೇಶ್ ಲೋಹಾರ್ ಭೇಟ್ಟಿಯಾಗಿ ಡಾ. ಶಹಾ ಅವರ ಆರೋಗ್ಯದ ಕುಶಲೋಪರಿಯನ್ನು ವಿಚಾರಿಸಿದರು.
ಡಾ. ಸುಭಾμï ಏಳಪುರೆ (ಒಆ) ಅವರು ತಮ್ಮ ಉಮಾರ್ಗದ ಪ್ರತಿಷ್ಠಿತ ಆಸ್ಪತ್ರೆಯೊಂದಿಗೆ ಈಗ ಇತ್ತೀಚಿಗμÉ್ಟೀ ಆಳಂದ ಬಸ್ ನಿಲ್ದಾಣದ ಸಮೀಪದ ಎಪಿಎಂಸಿ ಕಾಂಪ್ಲೆಕ್ಸ್‍ನಲ್ಲಿ ಬಸವಗಂಗಾ ಮೆಡಿಕಲ್ಸ್ ಹಾಗೂ ಸಂಗಮೇಶ್ವರ ಆಸ್ಪತ್ರೆ ತಮ್ಮ ವೈದ್ಯಕೀಯ ತಂಡ ಭೇಟಿ ನೀಡಿ ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಜನಸಾಮಾನ್ಯರಿಗೆ ಅನುಕೂಲಕರವಾಗಿದೆ ಎಂದು ರಮೇಶ ಲೋಹಾರ ಅವರು ಹೇಳಿದರು.
ಈ ಮೂಲಕ ರಂದು ತಾಲೂಕಿನ ಜನರು ಉಮರ್ಗ, ಸೋಲಾಪುರ, ಕಲಬುರಗಿಗೆ ಚಿಕಿತ್ಸೆಗಾಗಿ ದೂರದ ಊರುಗಳಿಗೆ ಪ್ರಯಾಣಿಸುವ ಅಗತ್ಯವನ್ನು ತಪ್ಪಿಸಿದ್ದಾರೆ. ವಯಸ್ಸಾದರೂ ಇಬ್ಬರೂ ವೈದ್ಯರು ತಮ್ಮ ಸೇವೆಯ ಮೂಲಕ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಆತ್ಮವಿಶ್ವಾಸವನ್ನೂ ಒದಗಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಇಬ್ಬರ ಸಮರ್ಪಿತ ಸೇವೆಯು ಆಳಂದ ತಾಲೂಕಿನ ಜನತೆಗೆ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕೊಡುಗೆಯಾಗಿದ್ದು, ಸಮಾಜಕ್ಕೆ ಪ್ರೇರಣೆಯಾಗಿದೆ.
Comments are closed.