ಆಳಂದ: ಬೆಳಮಗಿ ಗ್ರಾಮದಲ್ಲಿ ಕುಟುಂಬವೊಂದು ನಡೆಸಲು ಮುಂದಾಗಿದ್ದ ಬಾಲ್ಯವಿವಾಹವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಶ್ರೀಕಾಂತ ಮೇಂಗಜಿ ಅವರು ಭೇಟಿ ತಡೆದಿದರು.
ಆಳಂದ: ಬಿದರ ಜಿಲ್ಲೆಯ ಮಕ್ಕಳ ಸಹಾಯವಾಣಿ 1098/112ಗೆ ಬಂದ ಕರೆಯ ಮೇರೆಗೆ ಆಳಂದ ತಾಲೂಕಿನ ಬೆಳಮಗಿ ಗ್ರಾಮದಲ್ಲಿ 16.2 ವರ್ಷದ ಬಾಲಕಿ ಕುಮಾರಿ ವಿದ್ಯಾಳ ಬಾಲ್ಯವಿವಾಹವನ್ನು ತಡೆಗಟ್ಟಲಾಗಿದೆ.
ಗ್ರಾಮಕ್ಕೆ ಏ. 29ರಂದು ಆಳಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಕಾಂತ ಮೇಂಗಜಿ, ವಲಯ ಮೇಲ್ವಿಚಾರಕರು, ಮಕ್ಕಳ ಸಹಾಯವಾಣಿ ಸಂಯೋಜಕರು, ಆಪ್ತಸಾಮಾಲೋಚಕರು, 112 ಪೆÇಲೀಸ್ ಸಿಬ್ಬಂದಿ ಹಾಗೂ ಮಾರ್ಗದರ್ಶಿ ಸಂಸ್ಥೆಯ ಸಂಯೋಜಕರ ತಂಡವು ಬಾಲಕಿಯ ಮನೆಗೆ ಭೇಟಿ ನೀಡಿತು.
ಕುಮಾರಿ ವಿದ್ಯಾಳ ತಂದೆ ಮನೋಹರ ಮತ್ತು ತಾಯಿ ಅರ್ಚನಾ ಬಿರಾದಾರ್ ತಮ್ಮ ಮಗಳ ಬಾಲ್ಯವಿವಾಹವನ್ನು ಬಸವಕಲ್ಯಾಣ ತಾಲೂಕಿನ ಆಲಗೂಡ ಗ್ರಾಮದ ಏಕನಾಥ ಪಾಂಡುರಂಗನೊಂದಿಗೆ ಏ.1ರಂದು ರಂದು ನಿಶ್ಚಯಿಸಿದ್ದರು. ತಂಡವು ಪಾಲಕರಿಗೆ ಬಾಲ್ಯವಿವಾಹ ನಿμÉೀಧ ಕಾಯ್ದೆ ಕುರಿತು ಅರಿವುಮೂಡಿಸಿ, 18 ವರ್ಷ ತುಂಬುವವರೆಗೆ ಮದುವೆ ಮಾಡದಿರುವಂತೆ ಮುಚ್ಚಳಿಕೆ ಪತ್ರ ಬರೆಸಿಕೊಂಡಿತು. ಜೊತೆಗೆ, ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲು ಸೂಚಿಸಲಾಯಿತು.
ಈ ಕಾರ್ಯಾಚರಣೆಯು ಬಾಲ್ಯವಿವಾಹದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಮಕ್ಕಳ ಸಹಾಯವಾಣಿಯ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದೆ.