Shubhashaya News

ಆಳಂದ: ಬಿಜೆಪಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ

ಆಳಂದ: ಬಿಜೆಪಿಯಿಂದ ಆಚರಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಮಾಜಿ ಶಾಸಕ ಸುಭಾಷ ಗುತ್ತೇದಾರ ಪೂಜೆ ನೆರವೇರಿಸಿದರು. ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಎಂ. ಕಂದಗುಳೆ, ಆನಂದ ಗಾಯಕವಾಡ ಇತರರು ಇದ್ದರು.

ಪಟ್ಟಣಲ್ಲಿನ ಮಾಜಿ ಶಾಸಕ ಸುಭಾಷ ಗುತ್ತೇದಾರ ನಿವಾಸದಲ್ಲಿ ಬಿಜೆಪಿಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಸುಭಾಷ ಗುತ್ತೇದಾರ ಅವರು ಪೂಜೆ ನೆರವೇರಿಸಿ ಪುಷ್ಪಾರ್ಚನೆ ಕೈಗೊಂಡರು. ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಆನಂದ ಗಾಯಕವಾಡ, ಸುನೀಲ ಹಿರೋಳಿಕರ್, ಶ್ರೀಶೈಲ ಖಜೂರಿ, ಅಂಬಾರಾಯ ಚಲಗೇರಿ,ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ, ಧೋಂಡಿಬಾ ಸಾಳುಂಕೆ, ಸೀತಾರಾಮ ಜಮಾದಾರ, ಕಲ್ಯಾಣಿ ದೇವಂತಗಿ, ಮಲ್ಲು ಕೊಡಲಹಂಗರಗಾ ಸೇರಿ ಇನ್ನಿತರು ಉಪಸ್ಥಿತರಿದ್ದರು.

Leave A Reply

Your email address will not be published.