ಆಳಂದ: ಪಟ್ಟಣದ ಹಳೆಯ ಬಜಾರಿನ ರಸ್ತೆಯಲ್ಲಿರುವ ಶ್ರೀ ಮಹಾದೇವಲಿಂಗ ಜಾತ್ರಾ ಮಹೋತ್ಸವ ಅಂಗವಾಗಿ ಗಾಣಿಗ ಸಮಾಜ ಬಾಂಧವರು ಪ್ರಮುಖ ರಸ್ತೆಗಳ ಮೂಲಕ ಪಲ್ಲಕ್ಕಿ ಉತ್ಸವ ಕೈಗೊಂಡರು.
ಆಳಂದ: ಪಟ್ಟಣದದಲ್ಲಿ ಬುಧವಾರ ಹಳೆಯ ಬಜಾರಿನಲ್ಲಿರುವ ಶ್ರೀ ಮಹಾದೇವಲಿಂಗ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಭಕ್ತಾದಿಗಳೊಂದಿಗೆ ಬೆಳಗಿನ ಜಾವ ವಿಶೇಷ ಪೂಜೆ ನೆರವೇರಿಸಿ ಬಳಿಕ ಪ್ರಮುಖ ರಸ್ತೆಗಳ ಮೂಲಕ ಕುಂಭ, ಕಳಸ ವಾದ್ಯ ಪುರುವಂತರೊಂದಿಗೆ ಪಲ್ಲಕ್ಕಿ ಉತ್ಸವ ನೆರವೇರಿತು.
ಆಳಂದ ಪಟ್ಟಣದ ಗಾಣಿಗ ಸಮಾಜ ಆಶ್ರಯದಲ್ಲಿ ಬಾಳನಕೇರಿ, ಮಾರುಕಟ್ಟೆ ಹನುಮಾನ ಮಂದಿರ, ಹತ್ತ್ಯಾನಗಲ್ಲಿ ಶರಣನಗರ ಮಾರ್ಗವಾಗಿ ದೇವಸ್ಥಾನ ವರೆಗೆ ಸಾಗಿದ ಪಲ್ಲಕ್ಕಿ ಉತ್ಸವದಲ್ಲಿ ಭಕ್ತಾದಿಗಳಿಗೆ ಕಾಯಿ ಕಪ್ರ್ಯೂರ ಬೆಳಗಿ ದರ್ಶನ ಪಡೆದರು.
ಬಳಿಕ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗಿನ ಜಾವ ಮಹಾದೇವ ಲಿಂಗಕ್ಕೆ ರುದ್ರಾಭಿಷೇಕ ನಡೆಯಿತು. ಬಳಿಕ ನಡೆದ ಪಲ್ಲಕ್ಕಿ ಉತ್ಸವ ಸಮಾಜದ ಅಧ್ಯಕ್ಷ ಬಸವರಾಜ ಡೋಳೆ, ಸೂರ್ಯಕಾಂತ ಕಲಶೆಟ್ಟಿ, ಸೂರ್ಯಕಾಂತ ಮುನ್ನೊಳ್ಳಿ, ಶಿವಾನಂದ ಖುರ್ಧ, ಸಂಗಮೇಶ ಸಜ್ಜನ, ವೀರೇಂದ್ರ ಕಲಶೆಟ್ಟಿ, ಮಹಾಂತೇಶ ಕಲಶೆಟ್ಟಿ, ಸಿದ್ರಾಮ ಕಲಶೆಟ್ಟಿ,
ಸೋಮಶೇಖರ ಸಜ್ಜನಶೆಟ್ಟಿ, ದತ್ತಾ ಮಾಸ್ತರ್, ಶಿವಾನಂದ ಕಲಶೆಟ್ಟಿ, ಲಕ್ಷ್ಮಣ ಕಲಶೆಟ್ಟಿ, ವೀರೆಂದ್ರ ಕಲಶೆಟ್ಟಿ, ಶರಣು ಖಧರ್À ರಾಜಶೇಖರ ಸಜ್ಜನ್, ಸೇರಿದಂತೆ ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.
ಸಾಲೇಗಾಂವ ಜಾತ್ರೆ:
ಸಾಲೇಗಾಂವ ಗ್ರಾಮದಲ್ಲಿ ಶ್ರೀ ಮಹಾದೇವಲಿಂಗ ಜಾತ್ರಾ ಮಹೋತ್ಸವದಂದು ಬೆಳಗಿನಿಂದ ಮಧ್ಯಾಹ್ನದವರೆಗೆ ಭಕ್ತಾದಿಗಳು ತಮ್ಮ ಮನೆಯಿಂದ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಸಮರ್ಪಿಸಿದರು.
ಸಂಜೆ ಗ್ರಾಮದಿಂದ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ನಂದಿಕೋಲ ಮೆರವಣಿಗೆ ನಡೆಯಿತು. ಈ ನಡುವೆ ಭಕ್ತಾದಿಗಳು ದೇವಸ್ಥಾನಕ್ಕೆ ತೆರಳಿ ನೈವೇದ್ಯ ಕಾಯಿ ಕರ್ಪೂರ ಕೈಗೊಂಡು ಹರಕೆ ತೀರಿಸಿದರು. ರಾತ್ರಿ ಸಾಮಾಜಿಕ ನಾಟಕ ನಡೆಯಿತು.
ಗುರುವಾರ ಮಧ್ಯಾಹ್ನ 4:00ಗಂಟೆಗೆ ಜಂಗೀ ಕುಸ್ತಿ ಪಂದ್ಯಾವಳಿ ಹಾಗೂ ರಾತ್ರಿ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ರಾತ್ರಿ ಸಾಮಾಜಿಕ ನಾಟಕ ಪ್ರದರ್ಶನ ಭಜನೆ ನಡೆಯಲಿಯದೆ ಎಂದು ಭಕ್ತಮಂಡಳಿ ತಿಳಿಸಿದೆ.
ಈ ಜಾತ್ರೆಯ ಮುನ್ನದಿನ ಮಂಗಳವಾರ ಗ್ರಾಮದಲ್ಲಿನ ಮಲ್ಲಿಕಾರ್ಜುನ ಜಾತ್ರೆ ಹಾಗೂ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಗ್ರಾಮದಿಂದ ಪg ಊರು ಮುಂಬೈ, ಪುಣೆ, ಬೆಂಗಳೂರು ಸೇರಿ ವಿವಿಧ ಭಾಗದಲ್ಲಿ ವಾಸವಾಗಿರುವರು ಜಾತ್ರೆಗೆ ಕುಟುಂಬದೊಂದಿಗೆ ಎಂದಿನಂತೆ ಪಾಲ್ಗೊಂಡಿದ್ದರು.