Shubhashaya News

ತೀರ್ಥ ರಾಮಲಿಂಗೇಶ್ವರ ಜಾತ್ರೆ ಕಾಲಾ ಉತ್ಸವ ಸಂಭ್ರಮ

ಆಳಂದ: ತೀರ್ಥ ಗ್ರಾಮದ ಶ್ರೀರಾಮಲಿಂಗೇಶ್ವರ ಜಾತ್ರಾ ನಿಮಿತ್ತ ಸೋಮವಾರ ನಡೆದ ದಯಂಡಿ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಆಳಂದ: ತಾಲೂಕಿನ ತೀರ್ಥ ಗ್ರಾಮದ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗೋಪಾಳ ಕಾವಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸೋಮವಾರವೂ ಸಹ ಅದ್ಧೂರಿಯಾಗಿ ನಡೆಯಿತು.
ಜಾತ್ರಾ ನಿಮಿತ್ತವಾಗಿ ಬೆಳಗಿನ ಜಾವ ಧಾರ್ಮಿಕ ಮುಖಂಡ ಡಾ.ಬಸವರಾಜ ಮೂಲಗೆ ನೇತೃತ್ವದಲ್ಲಿ ವಿಶೇಷ ಪೂಜೆ, ಬಳಿಕ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಮೊಸರು ಗಡಿಗೆ ಮೆರವಣಿಗೆ ನಡೆಸಿ ದೇವಸ್ಥಾನಕ್ಕೆ ತಲುಪಿದ ಬಳಿಕ ದಯಂಡಿ ನಡೆಯಿತು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಜನಾ ಕಾರ್ಯಕ್ರಮಗಳು ನಡೆದವು. ಸಂಜೆ ಪೈಲ್ವಾನರಿಂದ ಕುಸ್ತಿಗಳು ಮತ್ತು ರಾತ್ರಿ ರತ್ನಮಾಂಗಲ್ಯ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಕಾತ್ರಾ ಪ್ರಮುಖ ಡಾ. ಬಸವರಾಜ ಮೂಲಗೆ, ಬಸವರಾಜ ಹೊಡ್ಲೆ, ಕಲ್ಯಾಣಿ ಸುತಾರ, ಹಣಮಂತರಾವ್ ಸರಾಟೆ, ಗುಜರಲಾಲ್ ಪಾಟೀಲ, ಗಂಗಾಧರ ಪಾಟೀಲ, ಶ್ರೀಶೈಲ ನಿಂಬಾಳೆ, ಮಂಜುನಾಥ ಬೆಲೂರೆ, ಮಂಜುನಾಥ ಸರಾಟೆ, ಜಗನಾಥ ಬಿರಾದಾರ, ದಯಾನಂದ ಲೋಕಾಣೆ, ಗ್ರಾಪಂ ಮಾಜಿ ಅಧ್ಯಕ್ಷ ಪಿಂಟು ಪಾಟೀಲ ಸೇರಿದಂತೆ ಜಾತ್ರೆ ಉತ್ಸವದಲ್ಲಿ ನೆರೆ ಹೊರೆಯ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

Leave A Reply

Your email address will not be published.