Shubhashaya News

ಸಿಯುಕೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2ನೇ ಬಹುಮಾನ

ಬೆಂಗಳೂರಿನ ಎಚ್‍ಪಿಸಿಎಲ್ ನಡೆಸಿದ"ನ್ಯೂ ಜನರೇಷನ್ ಐಡಿಯೇಷನ್ ಸ್ಪರ್ಧೆ

ಆಳಂದ: ಸಿಯುಕೆ ಇಂಜಿನಿಯರಿಂದ ವಿಭಾಗದ ವಿದ್ಯಾರ್ಥಿಗಳು ನ್ಯೂ ಜನರೇಷನ್ ಐಡಿಯೇಷನ್ ಸ್ಪರ್ಧೆಯಲ್ಲಿ 2ನೇ ಬಹುಮಾನ ಪಡೆದ ಪ್ರಯಕ್ತ ಕುಲಪತಿ ಬಟ್ಟು ಸತ್ಯನಾರಾಯ ಅವರು ಅಭಿನಂದಿಸದರು.

ಆಳಂದ: ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯ ಇಂಜಿನಿಯರಿಂದ ವಿಭಾಗದ ವಿದ್ಯಾರ್ಥಿ ಬೆಂಗಳೂರಿನ ಎಚ್‍ಪಿಸಿಎಲ್ ನಡೆಸಿದ “ನ್ಯೂ ಜನರೇಷನ್ ಐಡಿಯೇಷನ್ ಸ್ಪರ್ಧೆ ಸಿಯುಕೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2ನೇ ಬಹುಮಾನ ಲಭಿಸಿದೆ.
ತಂಡದಲ್ಲಿದ್ದ ವಿದ್ಯಾರ್ಥಿನಿ ಸ್ವಾತಿ ಸಹಾನಿ, ಸತ್ಯಂ ಕುಮಾರ್, ರೋಹನ್ ಪಟೇಲ್, ಅಂಕುರ್ ಮಿಶ್ರಾ, ಕೌಶಲ್ ಕುಮಾರ್, ಕಾರ್ತಿಕ್ ರಾಜಾ ಅವರು ಕಳೆದ ವಾರ ಬೆಂಗಳೂರಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾಪೆರ್Çರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ನಡೆಸಿದ “ನ್ಯೂ ಜನರೇಷನ್ ಐಡಿಯೇಷನ್ ಸ್ಪರ್ಧೆ 2024″ ನಲ್ಲಿ ಭಾಗವಹಿಸಿದ್ದಾರೆ.
ಐಐಟಿಗಳು ಮತ್ತು ಇತರ ಉನ್ನತ ಸಂಸ್ಥೆಗಳು ಸೇರಿದಂತೆ ದೇಶಾದ್ಯಂತ ವಿವಿಧ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ 500 ಐಡಿಯಾಗಳಲ್ಲಿ ಸಿಯುಕೆಯ ವಿದ್ಯಾರ್ಥಿಗಳು ಎರಡನೇ ಬಹುಮಾನವನ್ನು ಪಡೆದಿದ್ದಾರೆ. ಮೊದಲ ಮತ್ತು ಎರಡನೇ ಬಹುಮಾನಗಳನ್ನು ಕ್ರಮವಾಗಿ ಐಐಟಿ ದೆಹಲಿ ಮತ್ತು ಐಐಟಿ ಗುವಾಹಟಿ ಗೆದ್ದಿವೆ. ಈ ಪ್ರಶಸ್ತಿಯು ಪ್ರಮಾಣಪತ್ರದೊಂದಿಗೆ ರೂ. 50,000 ನಗದು ಬಹುಮಾನವನ್ನು ಹೊಂದಿದೆ” ಎಂದು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಉದಯ ಪಾಟೀಲ್ ಹೇಳಿದ್ದಾರೆ. ಅವರು ಈ ಕುರಿತು ಪ್ರತಿಕ್ರಿಯೆಸಿದ ಅವರು, “ಇದೆ ವಿದ್ಯಾರ್ಥಿಗಳ ತಂಡವು ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ, ನವದೆಹಲಿಯ ಅಡಿಯಲ್ಲಿ ನಡೆದ “ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರ್ಯಾಂಡ್ ಫಿನಾಲೆ 2024 ರಲ್ಲಿ ಭಾಗವಹಿಸಿತು. “ಕಡಿಮೆ ಭೂಮಿಯ ಪ್ರಭಾವವನ್ನು ಬಳಸಿಕೊಂಡು ಬೂದು ಮತ್ತು ಕಪ್ಪು ನೀರಿನ ನಿರ್ವಹಣೆ” ಎಂಬ ಸಮಸ್ಯೆಗೆ ಪರಿಹಾರವನ್ನು ಪ್ರಸ್ತುತಪಡಿಸಿ ಟಾಪ್ 5 ತಂಡಗಳಲ್ಲಿ ಒಂದಾಗಿ ಆಯ್ಕೆಯಾಯಿತು” ಎಂದು ಅವರು ಹೇಳಿದರು.
ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ, ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್, ಇಂಜಿನಿಯರಿಂಗ್ ನಿಕಾಯದ ಡೀನ್ ಪೆÇ್ರ. ಪರಮೇಶ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪೆÇ್ರ. ಎಂ. ಅಮರೇಂದ್ರ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಂಶಸಿಸಿ ಅಭಿನಂದಿಸಿದ್ದಾರೆ.

Comments are closed.

Don`t copy text!