Shubhashaya News

ಕ್ವೋದಿಟ್ಟ ಗೋಧಿ ಬೆಳೆ ಸುಟ್ಟು ಕರಕಲ್ಲು: ನಂದಿಸಲು ಹೋದ ರೈತ ಗಾಯ

ಆಳಂದ: ಮದಗುಣಕಿ ರೈತ ವಿಠ್ಠಲ ಸಣ್ಣಮನಿ ಅವರು ಬೆಳೆದು ರಾಶಿಗೆ ಕೋಯ್ದಿಟ್ಟ ಗೋಧಿ ಬೆಳೆ ಸುಟ್ಟು ಕರಕಲ್ಲಾಗಿದೆ.

ರೈತ ವಿಠ್ಠಲ ಸಣ್ಣಮನಿ

ಆಳಂದ: ಕ್ವೋದಿಟ್ಟ ಗೋಧಿ ಬೆಳೆಯ ಹೊಲದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಗೋಧಿ ಬೆಳೆ ಸುಟ್ಟು ಕರಕಲ್ಲಾಗಿದೆ. ಅಲ್ಲದೆ, ಈ ವೇಳೆ ಬೆಂಕಿ ನಂದಿಸಲು ಹೋದ ರೈತನು ಗಾಯಗೊಂಡ ಘಟನೆ ತಾಲೂಕಿನ ಮಾದನಹಿಪ್ಪರಗಾ ಸಮೀಪದ ಮದಗುಣಕಿ ಗ್ರಾಮದ ಹೊಲದಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಮದಗುಣಕಿ ಗ್ರಾಮದ ರೈತ ವಿಠ್ಠಲ ಸಣ್ಣಮನಿ ಅವರು ತಮ್ಮ ಒಂದು ಎಕರೆಯಲ್ಲಿ ಉತ್ತಮವಾಗಿ ಬೆಳೆದಿದ್ದ ಗೋಧಿಯನ್ನು ರಾಶಿ ಮಾಡಲು ನಾಲ್ಕೈದು ದಿನಗಳ ಹಿಂದೆ ಹೊಲದಲ್ಲಿ ಕಟಾವು ಮಾಡಿ ಗುಂತಿಗಳನ್ನಿಟ್ಟಿದ್ದರು.
ಸೋಮವಾರ ಮಧ್ಯಾಹ್ನ ರಾಶಿ ಮಾಡಲು ಗೋಧಿ ಸೂಡುಗಳನ್ನು ಕೊಂಡೊಯುವಾಗ ಹೊಲದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ದಿಕ್ಕೂ ತೋಚದ ರೈತ ವಿಠ್ಠಲ ಅವರು ಬೆಂಕಿ ನಂದಿಸಲು ಮುಂದಾಗಿದ್ದರು. ಈ ವೇಳೆ ಮೈಗೆ ಬೆಂಕಿ ತಗುಲಿದ ಬಗ್ಗೆ ಅರಿವಿಲ್ಲದೆ, ಬೆಳೆಗೆ ಹತ್ತಿಕೊಂಡ ಬೆಂಕಿ ನಂದಿಸುವಲ್ಲಿ ಮುಂದಾಗಿದ್ದರು ಎನ್ನಲಾಗಿದೆ.
ಈ ಹೊಲದಲ್ಲಿನ ಉರಿಯನ್ನು ಗಮನಿಸಿದ ನೆರೆಯ ಹೊಲದ ಕಸ್ತೂರಬಾಯಿ ಸಣ್ಣಮನಿ, ಮಹಾಂತಪ್ಪ ಸಣ್ಣಮನಿ, ರೈತರನ ರಕ್ಷಿಸಿ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕಳಹಿಸಕೊಡಲಾಯತು. ಈ ಹೊತ್ತಿನಲ್ಲಿ ಗೋಧಿ ಕ್ವೋಯಿಲಿ ಮತ್ತು ಕಟಾವು ಮಾಡಿದ ಗೋಧಿಯ ಸೋಡುಗಳೆಯಲ್ಲ ಸಂಪೂರ್ಣವಾಗಿ ಸುಟ್ಟು ಕರಕಲಲ್ಲಾಗಿದೆ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ. ಈಕುರಿತು ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.