ಆಳಂದ: ಬಸ್ ನಿಲ್ದಾಣ ಸ್ವಚ್ಛತೆಗೆ ಒತ್ತಾಯಿಸಿ ಸಾರಿಗೆ ಘಟಕಾಧಿಕಾರಿಗಳಿಗೆ ಕೆಕೆಕೆಜೆವಿ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.
ಆಳಂದ: ಸ್ಥಳೀಯ ಬಸ್ ನಿಲ್ದಾಣಕ್ಕೆ ಪ್ರಮುಖ ಸಾರ್ವಜನಿಕ ಸಾರಿಗೆ ಕೇಂದ್ರವಾಗಿದೆ, ಮತ್ತು ಪ್ರತಿದಿನವೂ ಅನೇಕ ಪ್ರಯಾಣಿಕರು ಬಂದುಹೋಗುತ್ತಾರೆ. ಆದರೆ, ಪ್ರಸ್ತುತ ನಿಲ್ದಾಣದ ಪರಿಸ್ಥಿತಿಯು ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಗಾಗಿ ಅನೇಕ ಸಮಸ್ಯೆ ಎದುರುಸುತ್ತಿದ್ದು, ಕ್ರಮಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಕಲ್ಯಾಣ ಜನಪರ ವೇದಿಕೆಯ ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಕುರಿತು ಸ್ಥಳೀಯ ಸಾರಿಗೆ ಸಂಸ್ಥೆಯ ಘಟಕಾಧಿಕಾರಿಗಳಿಗೆ ಮನವಿ ಸಲ್ಲಿಸಿದ ವೇದಿಕೆಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಬುದ್ಧಪ್ರೀಯಾ ಮೂಲಭಾರತಿ, ರಾಜ್ಯ ಉಸ್ತುವಾರಿ ಶರಣಕುಲಕರ್ಣಿ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಠೋಡ ನೇತೃತ್ವದಲ್ಲಿ ಕಾರ್ಯಕರ್ತರು ಬೇಡಿಕೆಯ ಮನವಿ ಸಲ್ಲಿಸಿದರು.
ನಿಲ್ದಾಣದ ಆವರಣದಲ್ಲಿ ನಿಯಮಿತವಾಗಿ ಸ್ವಚ್ಛತೆಗೊಳ್ಳಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು. ಶೌಚಾಲಯಗಳನ್ನು ಸರಿಪಡಿಸಿ, ಅವುಗಳ ಸೂಕ್ತ ನಿರ್ವಹಣೆಯನ್ನು ನಡೆಸಬೇಕು. ಕಸದ ಬುಟ್ಟಿಗಳನ್ನು ಹೆಚ್ಚಿಸಿ, ನಿಲ್ದಾಣದಲ್ಲಿ ಹೆಚ್ಚಿನ ಸ್ವಚ್ಛತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ನಾಗರಿಕರು, ಮಹಿಳೆಯರು, ಗರ್ಭಿಣಿಯರು ಮತ್ತು ದೀರ್ಘ ಸಮಯದ ಪ್ರಯಾಣಿಕರಿಗೆ ಅನುಕೂಲವಾಗುವ ಆಸನ ವ್ಯವಸ್ಥೆ ಒದಗಿಸಬೇಕು. ಹಳೆಯ ಮತ್ತು ಹಾನಿಗೊಂಡ ಆಸನಗಳನ್ನು ಪರಿಷ್ಕರಿಸಿ, ಹೊಸ ಆಸನಗಳನ್ನು ಅಳವಡಿಸಬೇಕು ಎಂದು ಲಿಖಿತವಾಗಿ ಮನವಿ ಸಲ್ಲಿಸಿ ಆಗ್ರಹಿಸಿದರು.
ಸಿ.ಸಿ.ಟಿ.ವಿ. ಕ್ಯಾಮೆರಾ ದುರಸ್ಥಿ ಮಾಡಿ. ಕೆಲವು ಹಾಳಾದ ಕ್ಯಾಮೆರಾಗಳನ್ನು ಸರಿಪಡಿಸಿ, ಅವುಗಳನ್ನು ತಕ್ಷಣ ನವೀಕರಿಸಬೇಕು. ಉತ್ತಮ ಗುಣಮಟ್ಟದ ನೈಟ್ ವೀಜನ ಮತ್ತು ವಿಸ್ತೃತ ವ್ಯಾಪ್ತಿಯ ಕ್ಯಾಮೆರಾಗಳನ್ನು ಅಳವಡಿಸಬೇಕು. ಡೇಟಾ ಸಂಗ್ರಹಣೆ ಮತ್ತು ಸುರಕ್ಷಿತ ನಿಗಾವಹಣಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು. ಕ್ಯಾಮೆರಾಗಳನ್ನು 24 ಗಂಟೆಗಳ ಕಾಲ ಚಲಾಯಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಭದ್ರತಾ ಸಿಬ್ಬಂದಿ ನೇಮಕ: ಬಸ್ ನಿಲ್ದಾಣದ ಸುತ್ತಮುತ್ತ ಹೆಚ್ಚುತ್ತಿರುವ ಅಸುರಕ್ಷಿತ ಪರಿಸ್ಥಿತಿಯನ್ನು ಗಮನಿಸಿ ಕನಿಷ್ಠ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಮಹಿಳಾ ಸುರಕ್ಷತೆಗೆ ವಿಶೇಷ ಗಮನ ನೀಡಬೇಕು. ಕಳ್ಳತನ ಹೆಚ್ಚಾಗುತ್ತಿರುವುದರಿಂದ, ಭದ್ರತಾ ಸಿಬ್ಬಂದಿಯನ್ನು ವಾರದವರೆಗೆ ನಿಯೋಜನೆ ಮಾಡಬೇಕು. ವಿಳಂಬವಾದಲ್ಲಿ, ನಾವು ವಿದ್ಯಾರ್ಥಿಗಳ ಜೊತೆಗೆ ಬಸ್ ನಿಲ್ದಾಣದ ಮುಂದೆ ಬಸ್ ತಡೆದು ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿದರು.
ಮನವಿ ಸ್ವೀಕರಿಸಿದ ಘಟಕಾಧಿಕಾರಿ ಶೇರಿಕಾರ ಅವರು ಈ ಕುರಿತು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭಧಲ್ಲಿ ವೇದಿಕೆಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಬುದ್ಧಪ್ರೀಯಾ ಮೂಲಭಾರತಿ, ರಾಜ್ಯ ಉಸ್ತುವಾರಿ ಶರಣಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಠೋಡ, ತಾಲೂಕು ಅಧ್ಯಕ್ಷ ಸಿದ್ದು ಸಿ, ಹತ್ತೆ, ಗೌರವ ಅಧ್ಯಕ್ಷ ಸೈಲೇಶ ಮಗ್ಗಿ, ಪಂಡಿತ ಕಿಣಗಿಕರ, ಸುದರ್ಶನ ಸಾಲೆಗಾಂವ, ಅಭೀμÉಕ ಜಂಗಲೆ, ಚೇತನ ಚಿಚಕೋಟಿ ಮತ್ತಿತರು ಉಪಸ್ಥಿತರಿದ್ದು ಮನವಿ ಸಲ್ಲಿಸಿದರು.