Shubhashaya News

ಜಗದ್ಗುರು ರೇಣುಕಾಚಾರ್ಯ ಜಯಂತಿ ಭಕ್ತಿ, ಶ್ರದ್ಧೆಯಿಂದ ಆಚರಣೆ

ಆಳಂದ್ ಶ್ರೀಮಹಾಂತೇಶ್ವರ ಹಿರೇಮಠದಲ್ಲಿ

ಆಳಂದ: ಪಟ್ಟಣದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಆಚರಿಸಿದ್ಧ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯರು ರೇಣುಕರ ಪ್ರತಿಮೆಗೆ ಪೂಜೆ ನೆರವೇರಿಸಿ ಉದ್ಘಾಟಿಸಿದರು.

ಆಳಂದ: ಪಟ್ಟಣದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಬುಧವಾರ ಜಗದ್ಗುರು ರೇಣುಕಾಚಾರ್ಯರ ಜಯಂತಿ ಉತ್ಸವವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಜಗದ್ಗುರುಗಳ ಪ್ರತಿಮೆಗೆ ಪೂಜೆ, ಪುμÁ್ಪರ್ಚನೆ ನೆರವೇರಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಂತಲಿಂಗ ಶ್ರೀಗಳು, “ಎಲ್ಲ ಧರ್ಮಗಳಿಗೆ ಧರ್ಮಗ್ರಂಥ ಮತ್ತು ಗುರು ಇದ್ದಂತೆ, ವೀರಶೈವ ಧರ್ಮಕ್ಕೂ ಜಗದ್ಗುರು ರೇಣುಕಾಚಾರ್ಯರು ಧರ್ಮಗುರು. ಸಿದ್ದಾಂತಶಿಖಾಮಣಿ ವೀರಶೈವ ಧರ್ಮದ ಪ್ರಮುಖ ಗ್ರಂಥವಾಗಿದೆ. ಬಸವಾದಿ ಪ್ರಮಥರು ವಚನ ಸಾಹಿತ್ಯದ ಮೂಲಕ ನೈತಿಕ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದಂತೆ, ಶತ ಶತಮಾನಗಳ ಹಿಂದೆ ಆದಿ ಜಗದ್ಗುರು ರೇಣುಕಾಚಾರ್ಯರು ಪಂಚಪೀಠಗಳನ್ನು ಸ್ಥಾಪಿಸಿ ಸಮಾಜದ ಧಾರ್ಮಿಕ ಚಟುವಟಿಕೆಗಳನ್ನು ಬೋಧಿಸಿದ್ದಾರೆ,” ಎಂದು ಹೇಳಿದ್ದಾರೆ.
ವೀರಶೈವ ಧರ್ಮದ-ಪಂಚಪೀಠಗಳ ಮಹತ್ವ: ಜಗದ್ಗುರು ರೇಣುಕಾಚಾರ್ಯರು ಸ್ಥಾಪಿಸಿದ ಪಂಚಪೀಠಗಳು ವೀರಶೈವ ಧರ್ಮದ ಬಲಿಷ್ಠ ಸ್ತಂಭಗಳಾಗಿದ್ದು, ಧಾರ್ಮಿಕ, ಸಾಂಸ್ಕøತಿಕ, ಮತ್ತು ನೈತಿಕ ಬದುಕಿಗೆ ಬೆಳಕಾಗಿವೆ. ಈ ಪಂಚಪೀಠಗಳಲ್ಲಿ ರಕ್ಷಣೆಯಾಯಿದ್ದ ಪಂಚಾಚಾರ್ಯರು, ಸಿದ್ಧಾಂತಶಿಖಾಮಣಿಯಲ್ಲಿ ಬೋಧಿಸಿರುವಂತೆ, ಸಾದಾಚಾರ, ಶಿವಾಚಾರ, ಗುರು ಆಚಾರ, ಭ್ರಾತೃಆಚಾರ ಅಷ್ಠವರಣ, ಪಂಚಆಚಾರ ಷಷ್ಟಸ್ಥಲಗಳು ಮತ್ತು ಲಿಂಗಾಚಾರಗಳನ್ನು ಪಾಲಿಸಬೇಕೆಂಬ ಸಂದೇಶವನ್ನು ಸಾರಿದ್ದಾರೆ ಎಂದು ಹೇಳಿದರು.
ಧಾರ್ಮಿಕ ಪಾಠಗಳು ಮತ್ತು ಸಮಾಜಕ್ಕೆ ಸಂದೇಶವನ್ನು “ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವಗಳನ್ನು ನಾವು ನಿತ್ಯಜೀವನದಲ್ಲಿ ಅನುಸರಿಸಿದಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಮತ್ತು ಧಾರ್ಮಿಕ ಪ್ರಜ್ಞೆ ವೃದ್ಧಿಯಾಗುತ್ತದೆ. ಭಕ್ತರು ಈ ಅಧ್ಯಾತ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದ ಮಡಿವಾಳಯ್ಯಾ ಸ್ವಾಮಿ ಕೊರಳ್ಳಿ ಅವರು ಜಯಂತಿ ಕುರಿತು ಮಾತನಾಡಿದರು. ಶಿವಲಿಂಗಯ್ಯಾ ಸ್ವಾಮಿ ಹೆಬಳಿ ಪೂಜಾವಿಧಾನ ನಡೆಸಿಕೊಟ್ಟರು.
ಎಂಎಂಆರ್‍ಜಿ ಪಿಯು ಕಾಲೇಜು ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ, ಗುಂಡಪ್ಪಾ ಮೇಂತೆ, ಸತೀಶ ಖಾನಾಪೂರ, ಶರಣು ಬಿ. ಕುಂಬಾರ, ವಿವೇಕಾಂದ ಎನ್. ಹತ್ತಿ, ನ್ಯಾಯವಾದಿ ಮಹಾದೇವ ಹತ್ತಿ, ಕುಮಾರ ಹತಿ, ಗುರುನಾಥ ವಣದೆ ಸೇರಿದಂತೆ ತಾಯಂದಿರು, ಮಕ್ಕಳು ಬಡಾವಣೆಯ ನಾಗರಿಕರು ಈ ಸಂದರ್ಭಧಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.