Shubhashaya News

ಜಾನುವಾರು ಆರೋಗ್ಯ ಶಿಬಿರ – ಹೈನುಗಾರರಿಗೆ ಮಾಹಿತಿ ಅರಿವು

ಆಳಂದ: ಬೆಳಮಗಿ ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆ ಹಾಗೂ ಕೆಎಂಎಫ್‍ನಿಂದ ಆಯೋಜಿಸಿದ್ದ ಹೈನುಗಾರಿಕೆ ಉತ್ತೇನ ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಬೆಳವಣಿಕಿ, ಡಾ. ಚೇತನ ಇತರರು ಇದ್ದರು.

ಆಳಂದ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಆಳಂದ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಬೆಳಮಗಿ ಸಹಯೋಗದಿಂದ ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಈ ಶಿಬಿರದಲ್ಲಿ ಕೆಎಂಎಫ್ ಪಶು ವೈದ್ಯರಾದ ಚೇತನ ರವರು ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿದರು. ಧರ್ಮಸ್ಥಳ ಸಂಸ್ಥೆ ತಾಲೂಕಾ ಯೋಜನಾಧಿಕಾರಿ ಶ್ರೀ ಕೃಷ್ಣಪ್ಪ ಬೆಳವಣಿಕಿ ರವರು ಹೈನುಗಾರಿಕೆಯನ್ನು ಉತ್ತೇಜಿಸುವ ಕುರಿತು ಮಾಹಿತಿ ನೀಡಿದರು ಹಾಗೂ ಮಿನೆರಲ್ ಮಿಕ್ಸ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯರು ರಾಜಕುಮಾರ ಶೆಟಗಾರ, ಅಪ್ಪರಾವ ಬಡದಾಳೆ, ಗೋಪಾಲ ಮರಾಠ, ಚನ್ನಯ್ಯಾ ಹೀರೆಮಠ, ಕೃಷಿ ಮೇಲ್ವಿಚಾರಕ ಸಂತೋಷರಡ್ಡಿ, ವಲಯ ಮೇಲ್ವಿಚಾರಕಿ ಜಯಶ್ರೀ, ಊರಿನ ಹಿರಿಯರು ಹಾಗೂ ರೈತರು ಭಾಗವಹಿಸಿದರು.

Leave A Reply

Your email address will not be published.