Shubhashaya News

ಮದುವೆ ಆಹ್ವಾನ ನೀಡಿದ ರಾಯಚೂರಿನ ಯುವಕನಿಗೆ ಬಂತು ಪ್ರಧಾನಿ ಮೋದಿಯಿಂದ ಶುಭಾಶಯ ಪತ್ರ!

ರಾಯಚೂರು ಜಿಲ್ಲೆಯ ರಾಜೇಶ್ ನಾಯಕ್ ಎಂಬ ಯುವಕನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಪತ್ರ ಕಳುಹಿಸಿದ್ದಾರೆ. ಸಾಮಾನ್ಯ ಪ್ರಜೆಯ ಆಹ್ವಾನಕ್ಕೆ ಸ್ಪಂದಿಸಿದ ಪ್ರಧಾನಿಗಳ ನಡೆಗೆ ವಧೂವರರ ಕುಟುಂಬದವರು ಕೃತಜ್ಞತೆ ವ್ಯಕ್ತಪಡಿಸಿದ್ದು, ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನವಜೋಡಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಹೌದು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕಾನಿಹಾಳ ಗ್ರಾಮದ ರಾಜೇಶ್ ನಾಯಕ್ ಅವರು ಪ್ರಧಾನಿ ಮೋದಿಗೆ ಮದುವೆ ಆಹ್ವಾನ ಪತ್ರಿಕೆಯನ್ನ ಕಳುಹಿಸಿದ್ದರು. ಈಗ ಪ್ರಧಾನಿ ಕಚೇರಿಯಿಂದ ನವ ದಂಪತಿಗೆ ಶುಭಾಶಯ ಪತ್ರ ಬಂದಿದೆ. ಪ್ರತಿಯಾಗಿ ಶುಭಾಶಯ ಬರಬಹುದು ಎನ್ನುವ ನಿರೀಕ್ಷೆಯಲ್ಲೇ ಲಗ್ನ ಪತ್ರಿಕೆಯನ್ನ ಪೋಸ್ಟ್ ಮಾಡಿ, ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು.

ಪತ್ರದಲ್ಲಿ ನಿಮ್ಮ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಜೀವನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರಿಗೆ ಸುಂದರ ಭವಿಷ್ಯಕ್ಕಾಗಿ ಶುಭಾಶೀರ್ವಾದಗಳು. ನಿಮ್ಮಿಬ್ಬರ ಹೃದಯ, ಮನಸ್ಸು ಮತ್ತು ಕ್ರಿಯೆಗಳು ಒಂದಾಗಿರಲಿ. ಜೀವನದ ಏರಿಳಿತಗಳಲ್ಲಿ ಪರಸ್ಪರ ಕೈಹಿಡಿದು, ಕನಸುಗಳನ್ನು ಸಾಕಾರಗೊಳಿಸುತ್ತಾ, ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸಿ. ಪರಸ್ಪರರ ದೋಷಗಳನ್ನು ಒಪ್ಪಿಕೊಂಡು, ಗುಣಗಳನ್ನು ಗೌರವಿಸುತ್ತಾ ಆದರ್ಶ ದಂಪತಿಗಳಾಗಿ ಬಾಳಿ. ನಿಮ್ಮ ದಾಂಪತ್ಯ ಜೀವನ ಸುದೀರ್ಘ, ಸುಖಮಯ ಮತ್ತು ಸುಂದರವಾಗಿರಲಿ ಎಂದು ಹಾರೈಸಿದ್ದಾರೆ.

Leave A Reply

Your email address will not be published.