Shubhashaya News

ವಿಬಿ-ಜಿ ರಾಮ್-ಜಿ ವಿಕಸಿತ ಭಾರತ ಗುರಿ ಸಾಧನೆಗೆ ಬಲವಾದ ಅಡಿಪಾಯ

ವಿಕಸಿತ ಭಾರತ-ರೋಜಗಾರ್ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) ಇದು ಒಂದು ಪರಿಷ್ಕøತ ಸಮಗ್ರ, ಸುಸ್ಥಿರ ಗ್ರಾಮೀಣ ಅಭಿವೃದ್ಧಿಯ ನೂತನ ಯೋಜನೆ. ಇದು ಇಂಗ್ಲೀಷ್‍ದಲ್ಲಿ ವಿಬಿ-ಜಿ ರಾಮ್-ಜಿ (ಗಿಃ-ಉ ಖಂಒ-ಉ) ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ.

ಇದು ಯಾರ ಒಬ್ಬ ವ್ಯಕ್ತಿಯ, ಊರಿನ ಅಥವಾ ಧರ್ಮ ಗೃಂಥದ ಹೆಸರೂ ಅಲ್ಲ, ಬಲ ಆಥವಾ ಎಡಪಂಕ್ತಿಯ ಸೈದ್ಧಾಂತಿಕ ಕೃತಿಯ ಹೆಸರೂ ಅಲ್ಲ. ಇದು ಒಬ್ಬ ವ್ಯಕ್ತಿಯ ಕೇವಲ ಉದ್ಯೋಗ ಸೃಷ್ಠಿಯ ಯೋಜನೆ ಅಲ್ಲ; ಇದು ಸಮಗ್ರ ಗ್ರಾಮೀಣ ಅಭಿವೃದ್ಧಿ ಜೊತೆಗೆ ಆದಾಯ ಸ್ಥಿರತೆ, ಮಹಿಳಾ ಸಬಲೀಕರಣ, ಹವಾಮಾನ ಪ್ರತಿರೋಧಕ ಅಭಿವೃದ್ಧಿಯ ಮಾರ್ಗವಾಗಿದ್ದು, ವಿಕಸಿತ ಭಾರತ @2047 ಗುರಿಯನ್ನು ಸಾಧಿಸಲು ಗ್ರಾಮೀಣ ಭಾರತವನ್ನು ಬಲಪಡಿಸುವ ಒಂದು ದಿಟ್ಟ ಹೆಜ್ಜೆಯಾಗಿದೆ.ಇದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ2005 (ಒಉಓಖಇಉಂ)ರ ಬದಲಾಗಿ ದೇಶಾದ್ಯಂತ ಏಪ್ರಿಲ್ 1, 2026ರಿಂದ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.

ವಿಬಿ-ಜಿ ರಾಮ್-ಜಿ ಯೋಜನೆ ಯಾಕೆ ಬೇಕಾಯಿತು?: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಫೆಬ್ರವರಿ 2, 2026ರಿಂದ ಜಾರಿಗೆ ತರಲಾಗಿದ್ದು, ಇದು ಸುಮಾರು 20 ವರ್ಷಗಳ ದೀರ್ಘಕಾಲಿಕ ಇತಿಹಾಸ ಹೊಂದಿದೆ. ಈ ಯೋಜನೆಯು ಗ್ರಾಮೀಣ ಉದ್ಯೋಗ ಭದ್ರತೆಗೆ ಮಹತ್ವದ ಹೆಜ್ಜೆಯಾಗಿದ್ದರೂ, ಇದರ ಅನುಷ್ಠಾನದಲ್ಲಿ ಅನೇಕ ಲೋಪದೋಷಗಳು ಕಂಡುಬಂದಿರುವುದು ಅನೇಕ ಸಂಶೋಧನಾ ಅಧ್ಯಯನ ಮತ್ತು ದಿನ ಪತ್ರಿಕೆಗಳು ವರದಿಮಾಡಿವೆ.

ಮನರೇಗಾ ಯೋಜನೆಯಲ್ಲಿ ಕೂಲಿ ಪಾವತಿಸುವಲ್ಲಿ ವಿಳಂಬ, ಕೆಲಸ ನೀಡುವಲ್ಲಿ ವಿಳಂಬ,ನಿರುದ್ಯೋಗ ಭತ್ಯೆ ಪಾವತಿಯಲ್ಲಿ ನಿರ್ಲಕ್ಷ್ಯ, ನಿರ್ಮಿತ ಆಸ್ತಿಗಳ ಗುಣಮಟ್ಟದ ಸಮಸ್ಯೆ, ಭ್ರμÁ್ಟಚಾರ ಮತ್ತು ಅಕ್ರಮಗಳು, ನಕಲಿ ಕಾಮಗಾರಿಗಳ ನೋಂದಣಿ, ಮಾಸ್ಟರ್‍ರೋಲ್‍ನಲ್ಲಿ ಕೃತಕ ಹೆಸರುಗಳ ಸೇರಿಕೆ, ವಸ್ತುಗಳ ಖರೀದಿಯಲ್ಲಿ ಅಕ್ರಮ, ಕೃಯಾ ಯೋಜನೆ ರಚಿಸುವಲ್ಲ್ಲಿ ದುರ್ಬಲತೆ, ಸ್ಥಳೀಯ ಅಗತ್ಯಗಳಿಗೆ ಸರಿಯಾದ ಆದ್ಯತೆ ನೀಡದಿರುವುದು, ಕೆಲಸದ ಸ್ಥಳಗಳಲ್ಲಿ ಮಕ್ಕಳ ಪಾಲನೆಯ ಕೇಂದ್ರದ ಕೊರತ, ಸುಗ್ಗಿಯ ಸಮಯದಲ್ಲಿ ಕೃಷಿ ಕಾರ್ಮಿಕರ ಕೊರತೆ, ಆನ್‍ಲೈನ್ ಅಕ್ರಮ ನೋಂದಣಿ ಮತ್ತು ಜಾಬ್‍ಕಾರ್ಡ್ ವಿತರಣೆ, ಅಕ್ರಮ ಕಾಮಗಾರಿಗಳ ಸೃಷ್ಟಿ, ಯಂತ್ರಗಳ ಮೂಲಕ ಕಾಮಗಾರಿ ಕೈಗೊಂಡು ಬೆನಾಮಿ ಜಾಬ್‍ಕಾರ್ಡ್‍ದಾರರಿಗೆ ಕೂಲಿ ಪಾವತಿ ಮುಂತಾದ ನೂನ್ಯತೆಗಳಿಂದ ಈ ಯೋಜನೆಯು ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ಗುತ್ತಿಗೆದಾರರಿಗೆ ಇದೂಂದು ಬಂಡವಾಳ ಹೂಡಿಕೆರಹಿತ ಆದಾಯದ ಮೂಲವಾಗಿದೆ.

ಅಲ್ಲದೆಸಾಮಾಜಿಕ ಲೆಕ್ಕಪತ್ರ (Soಛಿiಚಿಟ ಂuಜiಣ) ದುರ್ಬಲತೆ, ಪಾರದರ್ಶಕತೆಯ ಕೊರತೆ, ಗ್ರಾಮೀಣ ಜನರ ವಲಸೆ ತಡೆಯುವಲ್ಲಿ ಮಿತವಾದ ಯಶಸ್ಸು, ಪ್ರತಿ ಕುಟುಂಬಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ಸೃಷ್ಟಿಯ ಕೊರತೆ, ಕೆಲವು ಕಾಮಗಾರಿಗಳು ದೀರ್ಘಕಾಲಿಕ ಆದಾಯ ಸೃಷ್ಟಿಗೆ ಸಹಾಯವಾಗದಿರುವುದು ಇವೇ ಮುಂತಾದ ಸಮಸ್ಯಗಳು ಸರ್ವೆಸಾಮಾನ್ಯವಾಗಿ ಕಾಣತೊಡಗಿವೆ. 2011–12ರಲ್ಲಿಶೇ.25.7ರಷ್ಟು ಇದ್ದ ಗ್ರಾಮೀಣ ಬಡತನವು 2023–24ರಲ್ಲಿ ಶೇ.5 ರಷ್ಟಕ್ಕೆ ತೀವ್ರವಾಗಿ ಕುಸಿದಿರುವುದರಿಂದ, ಮನರೇಗಾ ಕೇವಲ ಸಂಕಷ್ಟ ನಿವಾರಣಾ ಕಾರ್ಯಕ್ರಮವಾಗಿ ಮುಂದುವರಿಸುವ ಅಗತ್ಯತೆ ಕಡಿಮೆಯಾಗಿದೆ.ಆದರೆ ಉತ್ಪಾದಕತೆ ಆಧಾರಿತ ಸುಸ್ಥಿರ ಉದ್ಯೋಗಾವಶಗಳ ಸೃಷ್ಟಿಗೆ ಹೆಚ್ಚಿನ ಆದ್ಯತೆನೀಡುವ ನೂತನ ಯೋಜನೆ ಅಗತ್ಯವಾಗಿತ್ತು.

ಹೀಗಾಗಿ ಮನರೇಗಾ ಸಂಪೂರ್ಣಾವಾಗಿ ರದ್ದುಗೊಳಿಸದೇ ಇದರ ಮೂಲ ಉದ್ದೇಶ ಮತ್ತು ಚಟುವಟಿಕೆಗಳೊಂದಿಗೆ ವಿಕಸಿತ ಭಾರತ ಗುರಿ ಸಾಧನೆಗೆ ಬಲವಾದ ಅಡಿಪಾಯ ಹಾಕುವ ಹಿನ್ನಲೆಯಲ್ಲಿ ವಿಬಿ-ಜಿ ರಾಮ್-ಜಿ ಎಂಬ ಒಂದು ಪರಿಷ್ಕøತ ಯೋಜನೆ ಜಾರಿಮಾಡಲು ಕೇಂದ್ರ ಸರ್ಕಾರ ಕಾಯ್ದೆ ಪಾಸುಮಾಡಿದೆ.

ವಿಬಿ-ಜಿ ರಾಮ್-ಜಿ ಯೋಜನೆಯ ವಿಶೇಷತೆಗಳು:ಇದು ಹಕ್ಕು-ಆಧಾರಿತ, ಬೇಡಿಕೆ-ಪ್ರಚೋದಿತ ಗ್ರಾಮೀಣ ಉದ್ಯೋಗ ಯೋಜನೆಯಿಂದ, ವಿಕಸಿತ ಭಾರತ ಗುರಿ ಸಾಧನೆಗೆ ಹೊಂದಿಕೊಳ್ಳುವ ಬಜೆಟ್ ಮಿತಿಯ ಪೂರೈಕೆ-ಆಧಾರಿತ ಯೋಜನೆಯಾಗಿದೆ. ಅಂದರೆ ಈಯೋಜನೆಯು ಗ್ರಾಮೀಣ ಉದ್ಯೋಗವನ್ನು ಕೇವಲ ಕೂಲಿ ಆಧಾರಿತ ಯೋಜನೆಯಾಗಿ ಅನುಷ್ಠಾನಗೊಳಿಸದೆ, ಉತ್ಪಾದಕ ಆಸ್ತಿ ನಿರ್ಮಾಣ, ಮಹಿಳಾ ಸಬಲೀಕರಣ, ಹವಾಮಾನ ಪ್ರತಿರೋಧಕ ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತ ಹೊಂದಿದ ಸಮಗ್ರ ಗ್ರಾಮೀಣ ಅಭಿವೃದ್ಧಿ ಚೌಕಟ್ಟಾಗಿ ರೂಪಿಸಿಲಾಗಿದೆ.

ಉದ್ಯೋಗ ಖಾತರಿ ವಿಸ್ತರಣೆ: ಮನರೇಗಾದಲ್ಲಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳವರೆಗೆ ಕೂಲಿ ಆಧಾರಿತ ಉದ್ಯೋಗವನ್ನು ಒದಗಿಸಲಾಗುತ್ತದೆ. ಆದರೆ ವಿಬಿ-ಜಿ ರಾಮ್-ಜಿ ಯೋಜನೆಯಡಿಯಲ್ಲಿ ಇದು ಕನಿಷ್ಠ 125 ದಿನಗಳಿಗೆ ಹೆಚ್ಚಿಸಲಾಗಿದೆ. ಕೂಲಿ ಇದು ಉದ್ಯೋಗವನ್ನು ಕಾನೂನುಬದ್ಧ ಹಕ್ಕಾಗಿ ಬಲಪಡಿಸುವುರ ಜೊತೆಗೆ ಕುಟುಂಬಗಳ ಆದಾಯ ಸ್ಥಿರತೆ ಮತ್ತು ಭದ್ರತೆಯನ್ನು ಹೆಚ್ಚಿಸಿಲಾಗುತ್ತದೆ. ಪ್ರತಿ ಹಣಕಾಸು ವರ್ಷದಲ್ಲಿ ಗರಿಷ್ಠ 60 ದಿನಗಳವರೆಗೆ, ಕೃಷಿಯ ಗರಿಷ್ಠ ಕೆಲಸ ಇರುವ (ಬಿತ್ತನೆ ಮತ್ತು ಕೊಯ್ಲು) ಅವಧಿಯಲ್ಲಿ ಈ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳದ ಅವಧಿಯನ್ನು ರಾಜ್ಯ ಸರ್ಕಾರಗಳು ಪೂರ್ವಭಾವಿಯಾಗಿ ಘೋಷಿಸಬೇಕು. ಇದರಿಂದ ಕೃಷಿಯಲ್ಲಿ ಕಾರ್ಮಿಕರ ಕೂರತೆ ಉಂಟಾಗುವುದಿಲ್ಲ.ಇದು ಋತುಮಾನಿಕ ನಿರುದ್ಯೋಗ ಮತ್ತು ಬಾಧ್ಯತೆಯ ವಲಸೆಯನ್ನು ಕಡಿಮೆ ಮಾಡುತ್ತದೆ.

ಜೀವನೋಪಾಯ ಕಾಮಗಾರಿಗಳು: ಕೇವಲ ತಾತ್ಕಾಲಿಕ ಕೂಲಿ ಕೆಲಸ ಒದಗಿಸುವುದರ ಜೊತೆಗೆ ಉತ್ಪಾದಕ ಮತ್ತು ದೀರ್ಘಕಾಲಿಕ ಆದಾಯ ಸೃಷ್ಟಿಸುವ ಆಸ್ತಿಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡುವುದು.ನಾಲ್ಕು ಕ್ಷೇತ್ರಗಳಲ್ಲಿ ಶಾಶ್ವತ ಆಸ್ತಿಗಳ ನಿರ್ಮಾಣಮಾಡಲಾಗುತ್ತದೆ. ಅಂದರೆ ನೀರಿನ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಸಂಬಂಧಿತ ಮೂಲಸೌಕರ್ಯ ಮತ್ತು ತೀವ್ರ ಹವಾಮಾನ ಶಮನಗೊಳಿಸುವ ಕಾಮಗಾರಿಗಳು ಈ ಯೋಜನೆಯಡಿಯಲ್ಲಿ ಕೈಗೊಳ್ಳಲಾಗುವುದು. ಇದರಿಂದ ದೀರ್ಘಕಾಲಿಕ ಮತ್ತು ಉತ್ಪಾದಕ ಗ್ರಾಮೀಣ ಆಸ್ತಿಗಳು ಸೃಷ್ಟಿಯಾಗುತ್ತವೆ.

ನೀರಿನ ಭದ್ರತೆ: ನೀರಿನ ಕೊರತೆ ಗ್ರಾಮೀಣ ಭಾರತದ ಮುಖ್ಯ ಸಮಸ್ಯಯಾಗಿದೆ. ಹೀಗಾಗಿ ವಿಕಸಿತ ಭಾರತ ಗುರಿ ಸಾಧನೆಯ ಹಿನ್ನಲೆಯಲ್ಲಿ ನೀರಿನ ಭದ್ರತೆ ಒದಗಿಸುವ ಸಲುವಾಗಿ ಕೆರೆಗಳ ಪುನರ್‍ನಿರ್ಮಾಣ, ಚೆಕ್‍ಡ್ಯಾಂ, ಬಂಡೆಗಳು, ಮಳೆ ನೀರು ಸಂಗ್ರಹಣೆ, ಭೂಗರ್ಭ ಜಲ ಸಂರಕ್ಷಣೆ ಮುಂತಾದ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಸ್ತಾವಿಸಲಾಗಿದೆ.

ಗ್ರಾಮೀಣ ಮೂಲಸೌಕರ್ಯ:  ಗ್ರಾಮೀಣ ಭಾರತದ ಸಮಗ್ರ ಸುಸ್ಥಿರ ಅಭಿವೃದ್ಧಿಯಲ್ಲಿ ಮೂಲಸೌಕರ್ಯಗಳ ಪಾತ್ರ ಮಹತ್ವದ್ದು. ಇವುಗಳ ಗುಣಮಟ್ಟದ ಕೊರತೆಗಳಿಂದ ಅಭಿವೃದ್ಧಿ ಕುಂಠಿತಗೊಂಡಿದ್ದರಿಂದ, ಗ್ರಾಮೀಣ ರಸ್ತೆ, ಕಾಲುವೆಗಳು, ಸ್ಮಶಾನ ಭೂಮಿ ಅಭಿವೃದ್ಧಿ, ಸಾರ್ವಜನಿಕ ಕಟ್ಟಡ ಮುಂತಾದವುಗಳ ಅಭಿವೃದ್ಧಿಗಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

ಜೀವನೋಪಾಯ ಸಂಬಂಧಿತ ಮೂಲಸೌಕರ್ಯ: ಇದರ ಜತೆಗೆ ಜೀವನೋಪಾಯ ಸಂಬಂಧಿತ ಮೂಲಸೌಕರ್ಯಗಳಾದ ಆಹಾರ ಸಂಗ್ರಹಣಾ ಗೋದಾಮುಗಳು, ಕಾರ್ಯಶಾಲೆಗಳು (Woಡಿಞ sheಜs). ಸ್ವ-ಸಹಾಯ ಸಂಘ ಕಟ್ಟಡಗಳು, ಪಶು ಆಶ್ರಯಗಳು, ಮೀನುಗಾರಿಕೆ ಮೂಲಸೌಕರ್ಯ, ನರ್ಸರಿಗಳು, ತರಬೇತಿ ಮತ್ತು ಕೌಶಲ್ಯ ಕೇಂದ್ರಗಳು, ಕಾಂಪೆÇೀಸ್ಟ್ ಮತ್ತು ವರ್ಮಿ-ಕಾಂಪೆÇೀಸ್ಟ್ ಘಟಕಗಳು, ಗ್ರಾಮೀಣ ಹಾಟ್ ಇತ್ಯಾದಿಗಳ ಅಭಿವೃದ್ಧಿಯಿಂದ ಗ್ರಾಮೀಣ ಭಾಗದ ರೈತರು ಇವುಗಳನ್ನು ಸೂಕ್ತವಾಗಿ ಉಪಯೋಗಿಸಕೊಂಡು ಸಾಕಷ್ಟು ಆದಾಯ ಗಳಿಸಬಹುದು.

ಹವಾಮಾನ-ಪ್ರತಿರೋಧಕ ಅಭಿವೃದ್ಧಿ: ಇತ್ತೀಚಿಗೆ ಹವಾಮಾನದ ಅನಿರೀಕ್ಷಿತ ಬದಲಾವಣೆಯ ಪರಿಣಾಮವಾಗಿ ಕೃಷಿ ಉತ್ಪಾದನೆ, ಜಾನುವಾರು ಸಾಕಾಣಿಕೆ, ಜನರ ಆರೋಗ್ಯ, ಜೀವನೋಪಾಯ ಮುಂತಾದವುಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಆದ್ದರಿಂದ ಬರ ನಿರ್ವಹಣೆ, ಪ್ರವಾಹ ನಿಯಂತ್ರಣ, ಮಣ್ಣು ಮತ್ತು ನೀರಿನ ಸಂರಕ್ಷಣೆ, ತುರ್ತು ಮೂಲಸೌಕರ್ಯ ಬಲಪಡಿಸುವುದು ಮುಂತಾದ ಕಾಮಗಾರಿಗಳ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಗ್ರಾಮೀಣ ಪ್ರದೇಶಗಳನ್ನು ಸಿದ್ಧಗೊಳಿಸುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಇದರಿಂದ ಗ್ರಾಮೀಣ ಭಾಗದ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯ.

ಮಹಿಳಾ ಮತ್ತು ದುರ್ಬಲ ವರ್ಗಗಳ ಸಬಲೀಕರಣ: ಈ ಯೋಜನೆಯ ಪ್ರತಿ ಕಾಮಗಾರಿಗಳಲ್ಲಿ ಕನಿಷ್ಠ ಶೇ.33ರಷ್ಟು ಮಹಿಳಾ ಕಾರ್ಮಿಕರು ಪಾಲ್ಗೊಳ್ಳುವಿಕೆಗೆ ಕಡ್ಡಾಯಗೊಳಿಸಲಾಗಿದೆ. ಕೂಲಿ ಆಧಾರಿತ ಉದ್ಯೋಗ ಒದಗಿಸುವಲ್ಲಿ ಏಕಾಂಗ ಮಹಿಳೆಯರಿಗೆ ಹಾಗೂ ಮಹಿಳಾ ಮುಖ್ಯಸ್ಥ ಕುಟುಂಬಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆÀ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಐದು ಅಥವಾ ಹೆಚ್ಚು ಮಕ್ಕಳು ಕೆಲಸಕ್ಕೆ ಬರುವ ಮಹಿಳೆಯರೊಂದಿಗೆ ಇದ್ದಲ್ಲಿ, ಕಾರ್ಯಕ್ಷೇತ್ರದಲ್ಲಿ ಕ್ರೆಚ್ ಸೌಲಭ್ಯ ಒದಗಿಸುವುದು ಕಡ್ಡಾಯ.

ಪಾರದರ್ಶಕತೆ ಮತ್ತು ಜವಾಬ್ದಾರಿತ್ವ: ಬಯೋಮೆಟ್ರಿಕ್ ದೃಢೀಕರಣ ಮತ್ತು ಡಿಜಿಟಲ್ ಮೇಲ್ವಿಚಾರಣೆ ಮೂಲಕ ಅಕ್ರಮ ಕಾಮಗಾರಿಗಳ ಸೃಷ್ಟಿ, ಜಾಬ್ ಕಾರ್ಡ್‍ಗಳ ನೋಂದಣಿ, ವೇತನ ಪಾವತಿ ವಿಳಂಬ ಮುಂತಾದ ಸಮಸ್ಯಗಳನ್ನು ಇಥ್ಯಾರ್ತಗೊಳಿಸಲು ಸಾಧ್ಯ. ಕೃತಕ ಬುದ್ದಿಮತ್ತೆ ಆಧಾರಿತ ತಂತ್ರಜ್ಞಾನದ ಮೂಲಕ ಈ ಯೋಜನೆಯ ಕಾಮಗಾರಿಗಳ ಸಾಮಾಜಿಕ ಲೆಕ್ಕಪತ್ರ ಮತ್ತು ದೂರು ನಿವಾರಣಾ ವ್ಯವಸ್ಥೆಯನ್ನು ಬಲಪಡಿಸಲಾಗುದತ್ತದೆ.

ಸಮಗ್ರ ಯೋಜನೆ ಮತ್ತು ಸಂಯೋಜನೆ: ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳೊಂದಿಗೆ ಇದು ಸಮನ್ವಯಗೊಳಿಲಾಗುತ್ತದೆ. ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳು (ಗಿiಞsiಣ ಉಡಿಚಿm Pಚಿಟಿಛಿhಚಿಥಿಚಿಣ Pಟಚಿಟಿs) ಹಾಗೂ ಇತರ ಯೋಜನೆಗಳ ಸಂಯೋಜನೆಯ ಮೂಲಕ ಕೂಲಿ ಆಧಾರಿತ ಉದ್ಯೋಗವನ್ನು ಆಸ್ತಿ ನಿರ್ಮಾಣ, ಮೂಲಸೌಕರ್ಯ ಕೊರತೆ ನಿವಾರಣೆ ಮತ್ತು ದೀರ್ಘಕಾಲೀನ ಜೀವನೋಪಾಯ ವೃದ್ಧಿಯ ಕಾಮಗಾರಿಗಳೊಂದಿಗೆ ಸಂಪರ್ಕಿಸುತ್ತದೆ. ಇದು ಪಿಎಮ್ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಜೊತೆ ಹೊಂದಾಣಿಕೆಮಾಡಲಾಗುತ್ತದೆ.ಇದು ಇತರೆ ಪ್ರಮುಖ ಗ್ರಾಮೀಣ ಮೂಲಸೌಕರ್ಯ ಯೋಜನೆಗಳಾದ ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗಳೊಂದಿಗೆ ಸಮನ್ವಯಗೊಳಿಸಲಾಗುತ್ತದೆ. ಇದರಿಂದ ಸಮಗ್ರ ಸುಸ್ಥರಿ ಗ್ರಾಮೀಣ ಅಭಿವೃದ್ಧಿಗೆ ಬದ್ರ ಬುನಾದಿ ಹಾಕಿದಂತಾಗುತ್ತದೆ.

ಕೇಂದ್ರ-ರಾಜ್ಯಗಳ ನಡುವೆ ನಿಧಿ ಹಂಚಿಕೆ:ಮನರೇಗಾ ಕಾಮಗಾರಿಳಲ್ಲಿ ಶೇ.100ರಷ್ಟು ಕಾರ್ಮಿಕರ ಕೂಲಿ ವೆಚ್ಚ ಮತ್ತು ಶೇ.75ರಷ್ಟು ವಸ್ತು ಪರಿಣತ/ಅರ್ಧಪರಿಣತ ಕಾರ್ಮಿಕ ವೆಚ್ಚವು ಕೇಂದ್ರ ಸರ್ಕಾರ ಭರಿಸುತ್ತದೆ. ಅಲ್ಲದೆ ಒಟ್ಟು ವೆಚ್ಚದ ಶೇ. 6ರಷ್ಟು ಆಡಳಿತ ವೆಚ್ಚವೂ ಕೇಂದ್ರ ಸರ್ಕಾರವೇ ಭರಿಸುತ್ತದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹಣಕಾಸಿನ ಹೊಣೆಗಾರಿಕೆ ಇರಲಿಲ್ಲ. ಆದರೆ ವಿಬಿ-ಜ ರಾಮ್-ಜಿ ಯೋಜನೆಯಡಿಯಲ್ಲಿ ವಸ್ತು ಮತ್ತು ಪರಿಣತ ಕಾರ್ಮಿಕರ ಮೇಲಿನ ವೆಚ್ಚ ಶೇ.60ರಷ್ಟುಕೇಂದ್ರ ಸರ್ಕಾರ ಮತ್ತು ಶೇ. 40ರಷ್ಟು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ವಿಬಿ-ಜ ರಾಮ್-ಜಿ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು ಕಡಿಮೆ ಮಾಡಿ ರಾಜ್ಯ ಸರ್ಕಾರದ ಪಾಲು ಶೇ. 25ರಿಂದ ಶೇ.40ರಷ್ಟಕ್ಕೆ ಹೆಚ್ಚಿಸಲಾಗಿದೆ.

ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ ಕೇಂದ್ರ-ರಾಜ್ಯಗಳ ನಡುವೆ 90:10ರ ಅನುಪಾತದಲ್ಲಿ ನಿಧಿ ಹಂಚಿಕೆಮಾಡಲಾಗುತ್ತದೆ. ಶಾಸಕರಿಲ್ಲದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರವೇ ಶೇ.100 ರಷ್ಟು ವೆಚ್ಚಮಾಡಬೇಕು. ಪ್ರತಿ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರ ರಾಜ್ಯವಾರು ನಿಯಮಾನುಸಾರ ಹಂಚಿಕೆ ಮಾಡಿದ ಹಣಕ್ಕಿಂತ ಹೆಚ್ಚಿಗೆ ಖರ್ಚುಮಾಡಿದರೆ ಅದು ಸ್ವತಃ ರಾಜ್ಯ ಸರ್ಕಾರವೇ ಭರಿಸಬೇಕು. ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ನಂತರ 15 ದಿನಗಳೊಳಗೆ ಕೆಲಸ ಒದಗಿಸದಿದ್ದರೆ, ನಿರುದ್ಯೋಗ ಭತ್ಯ ಕಡ್ಡಯವಾಗಿ ರಾಜ್ಯ ಸರ್ಕಾರವೇ ಭರಿಸಬೇಕು.

ಪ್ರಸ್ತುತ ಹಣಕಾಸಿನ ವರ್ಷದಲ್ಲಿ ಕೇಂದ್ರ ಸರ್ಕಾರವು ಮನರೇಗಾ ಯೋಜನೆಯಡಿಯಲ್ಲಿ 30,000 ಕೋಟಿರೂ. ಮತ್ತು ವಿಬಿ-ಜಿ ರಾಮ್-ಜಿ ಯೋಜನೆಯಡಿಯಲ್ಲಿ 95,692 ಕೋಟಿ ರೂ.ಗಳನ್ನ ಕಾಯ್ದಿರಿಸಲಾಗಿದೆ. ಅಂದರೆ ಒಟ್ಟು 1,25,692 ಕೋಟಿ ರೂ.ಗಳನ್ನು ವೆಚ್ಚ ಮಾಡುವ ಉದ್ದೇಶವನ್ನು ಹೊಂದಿದೆ. ಆದರೆ 2025-26ರ ಸಾಲಿಗೆ, ಮನರೇಗಾ ಯೋಜನೆಯಡಿಯಲ್ಲಿ 86,000 ಕೋಟಿ ರೂ. ವೆಚ್ಚ ಮಾಡುವ ಉದ್ದೇಶವನ್ನು ಹೊಂದಿತ್ತು. ಅಂದರೆ ಮುಂದಿನ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ ಈ ಎರಡೂ ಯೋಜನೆಗಳು ಶೇ.46ರಷ್ಟು ನಿಧಿ ಹೆಚ್ಚಿಸಿರುವುದು ಗಮನ ಹರಿಸಬೇಕಾದ ವಿಷಯವಾಗಿದೆ.

ರಾಜ್ಯ ಸರ್ಕಾರಗಳ ವಿರೋಧವೇಕೆ?:ದೇಶದ ಬಹುತೇಕ ರಾಜ್ಯಗಳು ವಿಬಿ-ಜಿ ರಾಮ್-ಜಿ ಯೋಜನೆಗೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದರೆ, ಕರ್ನಾಟಕ ರಾಜ್ಯ ಸೇರಿದಂತೆ ತೆಲಂಗಾಣ, ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳುಇದರ ಅನುಷ್ಠಾನವನ್ನು ಏಕಾಎಕಿಯಾಗಿ ವಿರೋಧಿಸುತ್ತಿವುದು ವಿಷಾದನೀಯ.ಏಕೇಂದರೆ ಈ ಯೋಜನೆಯನ್ನು ಜಾರಿಗೆ ತಂದರೆ ರಾಜ್ಯ ಸರ್ಕಾರಗಳ ಮೇಲೆ ಆರ್ಥಿಕ ಭಾರ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿಂದೆ ಮನರೇಗಾ ಯೋಜನೆಯಲ್ಲಿಕೇಂದ್ರ ಸರ್ಕಾರವು ಕಾರ್ಮಿಕರ ಮೇಲಿನ ವೆಚ್ಚವು ಶೇ. 100ರಷ್ಟು ಭರಿಸುತ್ತಿತ್ತು. ಅಲ್ಲದೆ ಒಟ್ಟು ವೆಚ್ಚದಲ್ಲಿ ಸುಮಾರು ಶೇ.90ರಷ್ಟು ಕೇಂದ್ರ ಮತ್ತು ಶೇ.10ರಷ್ಟು ರಾಜ್ಯದ ಪಾಲು ಇತ್ತು.ಆದರೆ ವಿಬಿ-ಜಿ ರಾಮ್-ಜಿ ಯೋಜನೆಯಲ್ಲಿ ಕೇಂದ್ರ:ರಾಜ್ಯಗಳ ನಡುವೆ 60:40ರ ಅನುಪಾತದಲ್ಲಿನಿಧಿ ಹಂಚಿಕೆಯಾಗಲಿದೆÉ. ಇದರಿಂದಾಗಿ ರಾಜ್ಯ ಸರ್ಕಾರಗಳ ಒಟ್ಟು ವೆಚ್ಚದ ಪಾಲು ಶೇ.10ರಿಂದಶೇ.40ರಷ್ಟಕ್ಕೆಹೆಚ್ಚಾಗುವ ಕಾರಣಕ್ಕೆ ವ್ಯಾಪಕವಾದ ವಿರೋಧವಿದೆ. ಆದರೆ ಇದರಿಂದ ಎಲ್ಲ ರಾಜ್ಯ ಸರ್ಕಾಗಳಿಗೆಪರಿಣಾಮಕಾರಿ ಅನುಷ್ಠಾನದ ಹೆಚ್ಚಿನಬದ್ಧತೆ ಮತ್ತು ಹಣಕಾಸಿನ ಹೊಣೆಗಾರಿಕೆಯ ಅನಿವಾರ್ಯತೆ ಆಗುವುದರಿಂದ ಈ ನೂತನ ಯೋಜನೆ ಹೆಚ್ಚು ಫಲಕಾರಿಯಾಗಲಿದೆ.

ಈ ನೂತನ ಯೋಜನೆಯಲ್ಲಿ ಉದ್ಯೋಗ ದಿನಗಳು 100ರಿಂದÀ 125ಕ್ಕೆÉ ಹೆಚ್ಚಳವಾದ ಕಾರಣ ರಾಜ್ಯ ಸರ್ಕಾರಗಳು ಇವಾಗ ಶೇ.40ರಷ್ಟು ಹಣ ನೀಡಬೇಕಾಗುತ್ತದೆ. ಹೀಗಾಗಿ ಕೆಲಸದ ದಿನಗಳು ಹೆಚ್ಚಾದರೆ ರಾಜ್ಯಗಳ ವೆಚ್ಚವೂ ಕೂಡ ಹೆಚ್ಚುತ್ತದೆ. ಹೆಚ್ಚುವರಿ ಉದ್ಯೋಗಗಳ ಬೇಡಿಕೆ ಬಂದರೆ ರಾಜ್ಯವೇ ಹಣ ಭರಿಸಬೇಕು. ಕೇಂದ್ರ ಸರ್ಕಾರವು ಪ್ರತಿ ರಾಜ್ಯಕ್ಕೆ ನಿಗದಿತ (ಓoಡಿmಚಿಣive) ಅನುದಾನ ನೀಡುತ್ತದೆ. ಈ ಮಿತಿಗಿಂತ ಹೆಚ್ಚು ಉದ್ಯೋಗ ನೀಡಲು ರಾಜ್ಯಗಳು ಬಯಸಿದರೆ ಇದಕ್ಕೆ ತಗಲುವ ಹೆಚ್ಚುವರಿ ವೆಚ್ಚವು ರಾಜ್ಯವೇ ಭರಿಸಬೇಕು.

ಹಿಂದಿನ ಮನರೇಗಾ ಯೋಜನೆ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಉದ್ಯೋಗವನ್ನು ಕಾನೂನಾತ್ಮಕ ಹಕ್ಕುವಾಗಿ ನೀಡುತ್ತಿತ್ತು. ಆದರೆ ಈ ನೂತನ ಯೋಜನೆಯುಬಜೆಟ್ ಮಿತಿಯ ಪೂರೈಕೆ-ಆಧಾರಿತ ಯೋಜನೆಯಾಗಿ ಪರಿವರ್ತನೆಗೊಂಡ ಕಾರಣ ಈ ಹಕ್ಕು ಆಧಾರಿತ ವ್ಯವಸ್ಥೆ ದುರ್ಬಲಗೊಳಿಸಬಹುದೆಂಬ ಆತಂಕವಿದೆÀ.ಅಲ್ಲದೆ ನೂತನ ಯೋಜನೆಯಲ್ಲಿ ಕೇಂದ್ರ ಸರ್ಕಾರದ ನಿಯಂತ್ರಣ ಹೆಚ್ಚಾಗಿ ಯೋಜನೆಗಳ ಆಯ್ಕೆ, ಅನುμÁ್ಠನ ಮತ್ತು ನಿಧಿಗಳ ಬಳಕೆಯಲ್ಲಿ ರಾಜ್ಯಗಳ ಸ್ವಾಯತ್ತತೆ ಕಡಿಮೆಯಾಗÀಬಹುದೆಂಬ ಕಾರಣಕ್ಕಾಗಿ ಕೆಲವು ರಾಜ್ಯಗಳುಅನಗತ್ಯವಾಗಿ ವಿರೋಧಿಸುತ್ತಿವೆ. ಇಲ್ಲಿ ಉದ್ಯೋಗಕ್ಕಿಂತ ಸ್ಥಿರ ಆದಾಯ ಸೃಷ್ಟಿಸುವ ಉತ್ಪಾದಕ ಆಸ್ತಿ ಮತ್ತು ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಗ್ರಾಮೀಣ ಬಡವರಿಗೆ ತಕ್ಷಣದ ಉದ್ಯೋಗ ಸಿಗುವ ಪ್ರಮಾಣ ಕಡಿಮೆಯಾಗಬಹುದೆಂದು ಕೆಲವು ರಾಜ್ಯಗಳು ಅನುಚಿತವಾಗಿ ವಿರೋಧಿಸುತ್ತಿವೆ. ಈ ಯೋಜನೆಯಡಿ ನಿಧಿ ಹಂಚಿಕೆಯು ಕಾರ್ಯಕ್ಷಮತೆ, ಸಾಮಾಜಿಕ ಪರಿಶೀಲನೆ, ಪಾರದರ್ಶಕತೆ,ರಾಜ್ಯಗಳ ಪಾಲಿನ ಹಣಕಾಸಿನ ಬಿಡುಗಡೆ, ಬಳಕೆ ಪ್ರಮಾಣ ಪತ್ರ ಸಲ್ಲಿಕೆ ಮತ್ತು ಯೋಜನಾ ಆಧಾರದ ಮೇಲೆ ಅವಲಂಭಿತವಾಗಿರುವುದರಿಂದ ಕೆಲವು ರಾಜ್ಯಗಳಿಗೆ ನಿಧಿ ಕಡಿಮೆಯಾಗುವ ಭೀತಿ. ಈ ಯೋಜನೆಯು ಗ್ರಾಮೀಣ ಉದ್ಯೋಗವನ್ನು ಕೇವಲ ಕೂಲಿ ಆಧಾರಿತದಿಂದ ಮುಂದಕ್ಕೆ ತೆಗೆದುಕೊಂಡು ಉತ್ಪಾದಕ, ಹವಾಮಾನ-ಪ್ರತಿರೋಧಕ, ಮಹಿಳಾ ಸಬಲೀಕರಣ ಆಧಾರಿತ ಹಾಗೂ ದೀರ್ಘಕಾಲಿಕ ಗ್ರಾಮೀಣ ಅಭಿವೃದ್ಧಿಗೆ ನಾಂದಿಯಾಗಿ ರೂಪಿಸಲಾಗಿದೆ.

ಆದರೆ ಇದು ಗ್ರಾಮೀಣ ಬಡ ಜನರ ಉದ್ಯೋಗ ಮತ್ತು ಆದಾಯದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತದೆಂದುತಪ್ಪು ಸಂದೇಶ ರವಾನಿಸುವುದರ ಮೂಲಕ ಕೆಲವು ರಾಜ್ಯ ಸರ್ಕಾರಗಳು ರಾಜಕೀಯವಾಗಿ ಪ್ರೇರಿತಗೊಂಡು ಅರ್ಥಹೀನ ಆಧಾರರಹಿತ ವಿರೋಧ ವ್ಯಕ್ತಪಡಿಸುತ್ತಿರುವುದು ಶೋಚನೀಯ.

ಆದರೆ ಈ ಯೋಜನೆಯು ರೈತರ, ಬಡವರ, ಮಹಿಳೆಯರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದೂಳಿದ ಜನರ, ಯುವಕರಮೇಲೆ ಅಥವಾಗ್ರಾಮೀಣ ಸುಸ್ಥಿರ ಅಭಿವೃದ್ಧಿಯ ಮೇಲೆ ಯಾವುದೇ ರೀತಿಯ ವ್ಯತಿರಿಕ್ತವಾದ ಪರಿಣಾಮ ಬೀರುವುದಿಲ್ಲ. ಇದು ಗ್ರಾಮೀಣ ಭಾರತದ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸುವುದರ ಮೂಲಕ 2047ರೊಳಗೆ ವಿಕಸಿತ ಭಾರತ ಗುರಿ ಸಾಧಿಸಲು ಅಣಿಯಾಗುವಂತೆ ಪರಿಷ್ಕøತಗೊಂಡು ಅನುಷ್ಠಾನಗೊಳ್ಳಲ್ಪಡುವ ಒಂದು ಯೋಜನೆ.

 

 

ಪ್ರೊ. ಆರ್. ಆರ್. ಬಿರಾದಾರ

ಕುಲಸಚಿವರು

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

ಡಿಡಿbiಡಿಚಿಜಚಿಡಿ@ಞuಜ.ಚಿಛಿ.iಟಿ

Comments are closed.

Don`t copy text!