Shubhashaya News

ಒಳಮಿಸಲಾತಿ ವಿರುದ್ಧ ಬಲಗೈ ಸಮಾಜದ ಬೆಂಗಳೂರು ಪ್ರತಿಭಟನೆ ಚಲೋ

ಆಳಂದ: ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬಲಗೈ ಸಮುದಾಯ ಮುಖಂಡ ಬಾಬುರಾವ್ ಅರುಣೋದಯ, ಮಹಾದೇವ ಮೋಘಾ, ಸಿದ್ಧರಾಮ ಪ್ಯಾಟಿ, ಚಂದ್ರು ಜಂಗಲೆ ಇತರರು ಇದ್ದರು.

 

 

ಆಳಂದ: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ತಿರಸ್ಕರಿಸಿ ಹಾಗೂ ರೋಸ್ಟರ್ ಬಿಂದುವಿನ ವರ್ಗೀಕರಣದ ಎಡವಟ್ಟನ್ನು ಖಂಡಿಸಿ, ಬಲಗೈ ಸಮಾಜದ ಹೊಲೆಯ ಸಂಬಂಧಿತ ಜಾತಿಗಳ ಒಕ್ಕೂಟ ಬೆಂಗಳೂರು ಚಲೋ ಕೆರೆ ನೀಡಿದೆ.

ಈ ಕುರಿತು ಪಟ್ಟಣದಲ್ಲಿ ಸಮುದಾಯ ಮುಖಂಡರು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಬಾಬುರಾವ್ ಅರುಣೋದಯ, ಮಹಾದೇವ ಮೋಘಾ, ಚಂದ್ರು ಜಂಗಲೇ ಸೇರಿದಂತೆ ಮುಖಂಡರು ಬೆಂಗಳೂರಿನ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಾಮೂಹಿಕ ಕರೆ ನೀಡಿದರು.

ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಒಳಮಿಸಲಾತಿಗೆ ವಿರೋಧ ವ್ಯಕ್ತಪಡಿಸಿ, ಜ್ಞಾನಪ್ರಕಾಶ ಸ್ವಾಮಿಜಿ ಹಾಗೂ ರಾಜ್ಯದ ಬಲಗೈ ಸಮಾಜದ ಬುದ್ಧಿಜೀವಿಗಳ ನೇತೃತ್ವದಲ್ಲಿ ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಯಲಿದೆ. ಈ ಹೋರಾಟಕ್ಕೆ ಆಳಂದ ತಾಲೂಕಿನಿಂದ 500 ಕ್ಕಿಂತ ಹೆಚ್ಚು ಮಂದಿ ಭಾಗವಹಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಮಧ್ಯಾಹ್ನ 3 ಗಂಟೆಗೆ ಆಳಂದ ಪಟ್ಟಣದ ಬುದ್ಧ ವಿಹಾರ (ಚೆಕ್ ಪೆÇೀಸ್ಟ್)ದಿಂದ ಟ್ರಾವೆಲ್ಸ್ ಬಸ್ ಮೂಲಕ ಪ್ರತಿಭಟನಾಕಾರರು ಬೆಂಗಳೂರಿಗೆ ಪ್ರಯಾಣ ಹೊರಡಲಾಗುವುದು.

ತಾಲೂಕಿನ ಪ್ರಗತಿಪರ ಚಿಂತಕರು, ಒಳಮಿಸಲಾತಿ ಹೋರಾಟಗಾರರು ಹಾಗೂ ಬಲಗೈ ಸಮಾಜದ ಗ್ರಾಮೀಣ ಮತ್ತು ಪಟ್ಟಣದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮುಖಂಡರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ದಯಾನಂದ ಶೇರಿಕಾರ, ಬಸವಲಿಂಗಪ್ಪ ಗಾಯಕವಾಡ, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಆನಂದ ಗಾಯಕವಾಡ, ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮೀಣ ಝಳಕಿಕರ್, ಚಂದ್ರಶಾ ಗಾಯಕವಾಡ, ದತ್ತಾ ಕಟ್ಟಿಮನಿ, ಲಕ್ಷ್ಮೀಕಾಂತ ಭಜನ,ಅರುಣಕುಮಾರ, ಮಹಾದೇವ ಜಿಡ್ಡೆ ಮತ್ತಿತರರು ಇದ್ದರು.

Comments are closed.

Don`t copy text!