ಆಳಂದ: ಲಾಡಚಿಂಚೋಳಿ ತಾಂಡಾದಲ್ಲಿ ನಡೆದ ಜಗದಂಬಾ, ಸೇವಾಲಾಲ ಜಾತ್ರಾ ಮಹೋತ್ಸವ ಧರ್ಮ ಸಮಾರಂಭವನ್ನು ಬಂಜಾರಾ ತೀರ್ಥ ಕ್ಷೇತ್ರದ ಶ್ರೀ ಬಾಬುಸಿಂಗ್ ಮಹಾರಾಜ್ ಉದ್ಘಾಟಿಸಿದರು, ಬಳಿರಾಮ ಮಹಾರಾಜ್, ಮಾತೋಶ್ರೀ ಲತಾದೇವಿ, ಸುಭಾಷ ಫೌಜಿ ಮತ್ತಿತರು ಇದ್ದರು.
ಆಳಂದ: ಲಂಬಾಣಿ ಜನಾಂಗದವರು ದುಷ್ಟ ಕೃತ್ಯಗಳಿಂದ ದೂರವಿದ್ದು, ಶಿಕ್ಷಣ, ಸಂಘಟನೆಯ ಮೂಲಕ ಪ್ರಗತಿ ಸಾದಿಸಿ ಉನ್ನತ ಗುರಿಗಳನ್ನು ಸಾಧಿಸಬೇಕು ಎಂದು ಮಹಾರಾಷ್ಟ್ರದ ಪೌರಾದೇವಿಯ ಬಂಜಾರಾ ತೀರ್ಥ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಬಾಬುಸಿಂಗ್ ಮಹಾರಾಜ್ ಅವರು ಕರೆ ನೀಡಿದರು.
ತಾಲೂಕಿನ ಲಾಡಚಿಂಚೋಳಿ ತಾಂಡಾದ ದೇವಿಸೇವಾ ರಾಮಘಡ ಶಕ್ತಿ ಪೀಠದಲ್ಲಿ ಶ್ರೀ ಸುನೀಲ ಮಹಾರಾಜ ಅವರ ನೇತೃತ್ವದಲ್ಲಿ ನಡೆದ ಶ್ರೀ ಜಗದಂಬಾದೇವಿ ಮತ್ತು ಸಂತ ಸೇವಾಲಾಲ ಮಹಾರಾಜರ 9ನೇ ವರ್ಷದ ಜಾತ್ರಾ ಮಹೋತ್ಸವ ಅಗ್ಗಿ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಲಂಬಾಣಿ ಜನಾಂಗದವರು ಒಗ್ಗಟ್ಟಿನಿಂದ ಇರಬೇಕು ಮತ್ತು ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಿಕೊಂಡು ಸಾಮಾಜಿಕ ಸುಧಾರಣೆಗೆ ಶ್ರಮಿಸಬೇಕು ಸಲಹೆ ನೀಡಿದರು. ಶ್ರೀ ಜಗದಾಂಬ ದೇವಿ ಮತ್ತು ಸೇವಾಲಾಲ್ ಮಹಾರಾಜರ ಆದರ್ಶಗಳನ್ನು ಅನುಸರಿಸಿ, ಧಾರ್ಮಿಕ ಮತ್ತು ನೈತಿಕ ಜೀವನವನ್ನು ನಡೆಸಿ ಸೇವಾಲಾಲ್ ಮಹಾರಾಜರ ಸಂದೇಶವಾದ ಸಮಾಜ ಸೇವೆ ಮತ್ತು ನೀತಿಯ ಪಾಲಿಸಬೇಕು ಎಂದು ಹೇಳಿದರು.
ಇಂದಿನ ಯುವಕರು ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗದ ಮೂಲಕ ಸಮುದಾಯವನ್ನು ಮುನ್ನಡೆಸಲು ಮುಂದಾಗಿ ಆಧುನಿಕ ತಂತ್ರಜ್ಞಾನ ಮತ್ತು ಶಿಕ್ಷಣದ ಮಹತ್ವವನ್ನು ಅರಿತುಕೊಳ್ಳಬೇಕು.
ಸಮುದಾಯದ ಮಹಿಳೆಯರು ಶಿಕ್ಷಣ ಮತ್ತು ಸ್ವಾವಲಂಬನೆಯ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಬೇಕು. ನಮ್ಮ ಸಮುದಾಯದ ಸಾಂಸ್ಕೃತಿಕ ಪರಂಪರೆ, ಕಲೆ, ನೃತ್ಯ, ಸಂಗೀತ ಮತ್ತು ಜಾನಪದ ಸಂಪ್ರದಾಯಗಳನ್ನು ಉಳಿಸಿಕೊಂಡು, ಸಮಾಜದಲ್ಲಿ ವ್ಯಾಪಿಸಿರುವ ಕೆಲವು ಸಾಮಾಜಿಕ ಕೆಡುಕುಗಳಾದ ಮೂಢನಂಬಿಕೆ, ಅನಕ್ಷರತೆ, ದುಂದುವೆಚ್ಚ ಮತ್ತು ದುಶ್ಚಟಗಳಿಂದ ದೂರವಿದ್ದು, ಲಂಬಾಣಿ ಜನಾಂಗಕ್ಕೆ ಲಭ್ಯವಿರುವ ಸರಕಾರಿ ಯೋಜನೆಗಳು, ಲಾಭ ಪಡೆಯಿರಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆಎಂಎಂಪ್ ಅಧ್ಯಕ್ಷ ಆರ್.ಕೆ. ಪಾಟೀಲ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬರವು ದಿನಗಳಲ್ಲಿ ಆಳಂದ ಪಟ್ಟಣದಲ್ಲಿ ಲಂಬಾಣಿ ಸಮಾದ ಎಕರೆ ನಿವೇಶನದಲ್ಲಿ ಶಾಸಕರ ಗಮನಕ್ಕೆ ತಂದು 2ಕೋಟಿ ರೂಪಾಯಿ ವೆಚ್ಚದಲ್ಲಿ ಲಂಬಾಣಿ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ನಿರ್ಮಾಣ ಕೈಗೊಳ್ಳಲಾಗುವುದು. ಕಟ್ಟಡ ಶಂಕುಸ್ಥಾಪನೆಗೆ ಪೌರಾದೇವಿಯ ಶಕ್ತಿ ಪೀಠದ ಶ್ರೀಗಳಿಂದಲೇ ಪೂಜೆ ನೆರವೇರಿಸಿ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದು ಅವರು ಸಮುದಾಯಕ್ಕೆ ಭರವಸೆ ನೀಡಿದರು.
ಈ ಸಂದರ್ಬದಲ್ಲಿ ಗೊಬ್ಬರವಾಡಿ ಶಕ್ತಿ ಪೀಠದ ಶ್ರೀ ಬಳಿರಾಮ ಮಹಾರಾಜ, ಲಾಡಚಿಂಚೋಳಿ ತಾಂಡಾದ ಶಕ್ತಿಪೀಠದ ಸುನೀಲ ಮಹಾರಾಜ್, ಮುಖಂಡ ಕನಿರಾಮ ರಾಠೋಡ, ನ್ಯಾಯವಾದಿ ಖೇಮಸಿಂಗ ರಾಠೋಡ, ಬಂಜಾರಾ ಸೇವಾ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಫೌಜಿ, ರಾಜು ಚವ್ಹಾಣ ಮತ್ತಿತರರು ಧರ್ಮ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕೇಸರಟಗಿಯ ಮಾತೋಶ್ರೀ ಲತಾದೇವಿ, ಚಿಕ್ಕನಾಗಾಂವ ಲೋಕೇಶ ಮಹಾರಾಜ್, ಗೊಬ್ಬರವಾಡಿ ಸುರೇಶ ಮಹಾರಾಜ್, ಕಲಕೋರದ ಸಚೀನ ಮಹಾರಾಜ್, ಕಿಶನ ರಾಠೋಡ, ಪಂಡಿತ ಚವ್ಹಾಣ, ಶಿವಲಾಲ ಪವಾರ, ನೀಲಕಂಠ ರಾಠೋಡ, ದಗಡು ಪವಾರ ಗ್ರಾಪಂ ಅಧ್ಯಕ್ಷ ಶಾಂತಾಬಾಯಿ ಚವ್ಹಾಣ, ಪುರಸಭೆ ಉಪಾಧ್ಯಕ್ಷೆ ಕವಿತಾ ಎಸ್. ನಾಯಕ, ಹೋದಲೂರ ಗ್ರಾಪಂ ಅಧ್ಯಕ್ಷ ಗಿರಿಮಲ ರಾಠೋಡ,ಬಿರು ಪಾಟಿಲ, ಕವಿ ಬಾಬು ಜಾಧವ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ ಜಾಧವ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಶ್ರೀ ಬಾಬುಸಿಂಗ್ ಮಹಾರಜರಿಂದ ಭೋಗ ವಿಧಾನ ನೆರವೇರಿಸಲಾಯಿತು. ವಿವಿಧ ತಾಂಡಾಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು, ಸಮಾರಂಭವನ್ನು ಡಾ. ಪ್ರೇಮಸಿಂಗ್ ಚವ್ಹಾಣ ನಿರೂಪಿಸಿದರು. ರಾಜು ಚವ್ಹಾಣ ಸ್ವಾಗತಿಸಿದರು.