ತಾಲೂಕಿನಲ್ಲಿ ಈಗಾಗಲೇ ಐದು ರೈತ ಸಂಪರ್ಕ ಕೇಂದ್ರಗಳಲ್ಲಿ ತಾಲೂಕಿನ ರೈತರಿಗೆ ಸರ್ಕಾರದ ರಿಯಯಿತಿ ದರದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ ಅದಲ್ಲದೇ ರೈತರಿಗೆ ಅನೂಕೂಲ ಮಾಡಿಕೊಡುವ ನಿಟ್ಟಿನಲ್ಲಿ ತಾತ್ಕಾಲಿಕ ಕೇಂದ್ರಗಳಲ್ಲಿಯೂ ಪೂರೈಕೆಗೆ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ ಎಂದು ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಹೇಳಿದರು.
ಶನಿವಾರ ಆಳಂದ ತಾಲೂಕಿನ ರುದ್ರವಾಡಿ ಮತ್ತು ಕಿಣ್ಣಿಸುಲ್ತಾನ ಗ್ರಾಮಗಳ ತಾತ್ಕಾಲಿಕ ಕೇಂದ್ರದಲ್ಲಿ ಬಿತ್ತನೆ ಬೀಜ ಪೂರೈಕೆಗೆ ಚಾಲನೆ ನೀಡಿ ಮಾತನಾಡಿದರು.
ತಾತ್ಕಾಲಿಕ ಕೇಂದ್ರಗಳಲ್ಲಿ ರೈತ ಅನುವುಗಾರರ ಮೂಲಕ ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವುದರಿಂದ ರೈತ ಸಂಪರ್ಕ ಕೇಂದ್ರಗಳ ಮೇಲಿನ ಕಾರ್ಯಭಾರ ಕಡಿಮೆಯಾಗಲಿದೆ ಅಲ್ಲದೇ ಇದರಿಂದ ರೈತರಿಗೂ ಅನೂಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಕೆರೂರ, ಶಿವಪ್ರಕಾಶ ಹೀರಾ, ರಾಜಕುಮಾರ ಪಾಟೀಲ ಸೇರಿದಂತೆ ಇತರರು ಇದ್ದರು.