Shubhashaya News

ರೈತ ಕಾರ್ಯಕ್ಕೆ 12 ಗಂಟೆ ಸಮಯ ನಿಗದಿ- ಶಾಸಕ ಗುತ್ತೇದಾರ ಹರ್ಷ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮುಂಗಾರು ಆಗಮಿಸಿರುವುದರಿಂದ ತಾಲೂಕಿನಲ್ಲಿ ಬಿತ್ತನೆಗೆ ಬೇಕಾಗುವಷ್ಟು ಮಳೆ ಈಗಾಗಲೇ ಆಗಿರುವುದರಿಂದ ರೈತರು ತಮ್ಮ ಕಾಯಕಕ್ಕೆ ಸಿದ್ಧರಾಗಿದ್ದಾರೆ ಈ ನಿಟ್ಟಿನಲ್ಲಿ ಬೀಜ ರಸಗೊಬ್ಬರ ಖರೀದಿಗೆ ಸರ್ಕಾರ ಪ್ರತಿದಿನ 12 ಗಂಟೆವರೆಗೆ ಅವಕಾಶ ಕಲ್ಪಿಸಿರುವುದಕ್ಕೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ವರ್ಚುವಲ್ ಸಭೆಯಲ್ಲಿ ಈ ವಿಷಯದ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ ಅದರ ಫಲವಾಗಿ ಕೃಷಿ ಸಚಿವರು ಈ ನಿರ್ಧಾರ ಕೈಗೊಂಡಿದ್ದಾರೆ ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಮತ್ತು ಕೃಷಿ ಸಚಿವರಿಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.

Leave A Reply

Your email address will not be published.