Shubhashaya News

ಸತ್ಯಪ್ರಮೋದತೀರ್ಥ ಆರಾಧನೆ

ಬ್ರಹ್ಮಪುರ ಉತ್ತರಾದಿ ಮಠದಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿದ ಮಧ್ಯಾರಾಧನೆ * ನೂರಾರು ಭಕ್ತರು ಭಾಗಿ

ಕಲಬುರಗಿ:ನಗರದ ಬ್ರಹ್ಮಪುರದ ಶ್ರೀ ರುಕ್ಮಿಣಿ-ವಿಠ್ಠಲ ಮಂದಿರ-ಉತ್ತರಾದಿಮಠದಲ್ಲಿ ಗುರುವಾರ, ಉತ್ತರಾದಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ 29ನೇ ಆರಾಧನೆಯನ್ನು ವಿಜೃಂಭಣೆಯಿAದ ಶ್ರದ್ಧಾಪೂರ್ವಕವಾಗಿ ನೆರವೇರಿಸಲಾಯಿತು.
ಬೆಳಿಗ್ಗೆ ವಿಶೇಷ ಪಾರಾಯಣ, ಗುರುಗಳ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಪೂಜೆ, ಪುಷ್ಪಾರ್ಚನೆ, ರಥೋತ್ಸವ, ಪಂಡಿತರಿAದ ಪ್ರವಚನ ನಡೆದವು. ಮಧ್ಯಾಹ್ನ ನೂರಾರು ಭಕ್ತರಿಗೆ ತೀರ್ಥಪ್ರಸಾದ, ಅನ್ನಸಂತರ್ಪಣೆ, ಸಂಜೆ ಭಜನೆ, ಪಲ್ಲಕ್ಕಿ ಉತ್ಸವ ಜರುಗಿದವು.
ಉತ್ತರಾದಿ ಮಠದ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ, ವ್ಯವಸ್ಥಾಪಕರಾದ ಪಂ. ವಿನೋದಾಚಾರ್ಯ ಗಲಗಲಿ, ಅರ್ಚಕರಾದ ಪಂ. ಅಭಯಾಚಾರ್ಯ ಪಾಟೀಲ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಅನೇಕ ಹಿರಿಯ ವಿದ್ವಾಂಸರು, ಗಣ್ಯರು, ಭಕ್ತರು, ಪಾರಾಯಣ ಸಂಘಗಳ ಸದಸ್ಯರು, ಮಹಿಳಾ ಭಜನಾ ಮಂಡಳಿ ಸದಸ್ಯೆಯರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
ವಿದ್ವಾAಸರು ತಮ್ಮ ಉಪನ್ಯಾಸಗಳಲ್ಲಿ ಶ್ರೀ ಸತ್ಯಪ್ರಮೋದತೀರ್ಥರ ಮಹಿಮೆ, ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಸೌರಭ ದಾಸಸಾಹಿತ್ಯ ವಿದ್ಯಾಲಯದ ಮುಖ್ಯಸ್ಥರಾದ ಪಂ. ಪ್ರಮೋದಾಚಾರ್ಯ ಪೂಜಾರ ಅವರು ವಿದ್ಯಾಲಯದಿಂದ ನಡೆಸಲಾದ `ಹರಿಕಥಾಮೃತಸಾರ’ ಪರೀಕ್ಷೆಯಲ್ಲಿ ಉತ್ತೀರ್ಣರಾದ ಭಜನಾ ಮಂಡಳಿ ಸದಸ್ಯೆಯರಿಗೆ ಪ್ರಮಾಣಪತ್ರ ನೀಡಿದರು. ಹಿರಿಯ ವಿದ್ವಾಂಸರಾದ ಪಂ. ಗಿರೀಶಾಚಾರ್ಯ ಅವಧಾನಿ, ಪಂ. ಡಾ. ಗುರುಮಧ್ವಾಚಾರ್ಯ ನವಲಿ, ಪಂ. ಡಾ. ಶ್ರೀನಿವಾಸ ಆಚಾರ್ಯ ಪದಕಿ, ಪಂ. ಪ್ರಸನ್ನಾಚಾರ್ಯ ಜೋಶಿ, ರಘೂತ್ತಮಾಚಾರ್ಯ ಘಂಟಿ, ರಮೇಶ ಪಾಟೀಲ್, ಶ್ರೀ ಸತ್ಯಪ್ರಮೋದ ಯುವಸೇನೆ, ಶ್ರೀ ಸತ್ಯಾತ್ಮ ಸೇನೆ ಯುವಕ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಪಾರಾಯಣದೊAದಿಗೆ ಪುಷ್ಪಾರ್ಚನೆ….

ಪಂ. ವಿನೋದಾಚಾರ್ಯ ಗಲಗಲಿ ಅವರ ನೇತೃತ್ವದಲ್ಲಿ ಶ್ರೀ ಸತ್ಯಪ್ರಮೋದತೀರ್ಥರ ಭಾವಚಿತ್ರಕ್ಕೆ ಅವರ ಚರಮಶ್ಲೋಕ ಪಾರಾಯಣದೊಂದಿಗೆ ಪುಷ್ಪಾರ್ಚನೆ ಮಾಡಲಾಯಿತು. ನಗರದ ವಿವಿಧ ಪಾರಾಯಣ ಸಂಘಗಳ ಸದಸ್ಯರು ಭಾಗಿಯಾದರು. `ಶ್ರೀ ಸತ್ಯಪ್ರಮೋದತೀರ್ಥರು ಕಲಬುರಗಿ ಭಾಗದ ಭಕ್ತರ ಮೇಲೆ ವಿಶೇಷ ಪ್ರೀತಿವುಳ್ಳವರಾಗಿದ್ದರು. ವಿಶೇಷವಾಗಿ ಶ್ರೀ ಜಯತೀರ್ಥರ ಮೂಲವೃಂದಾವನ ಕ್ಷೇತ್ರವಾದ ಮಳಖೇಡಕ್ಕೆ ಮೇಲಿಂದ ಮೇಲೆ ಬರುತ್ತ ಸುಧಾಮಂಗಳ ಮಾಡುತ್ತಿದ್ದರು, ಐವತ್ತು ವರ್ಷಗಳ ಕಾಲ ಮೂಲರಾಮದೇವರ ಪೂಜೆ ನೆರವೇರಿಸಿದ ಮಹಾನ್ ಯತಿಗಳಾಗಿದ್ದರು’ ಎಂದು ಹಲವಾರು ಭಕ್ತರು ಈ ವೇಳೆ ನೆನಪಿಸಿಕೊಂಡರು.

Leave A Reply

Your email address will not be published.