Shubhashaya News

ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಗೆ ಭಾಜನರಾದ ಜಾನಪದ ಕಲಾವಿದ ವಿಶ್ವನಾಥ ತೋಟನಳ್ಳಿ

ಕಲಬುರಗಿ:ಧಾರವಾಡ-ನಾಟ್ಯ ಸ್ಫೂರ್ತಿ ಆರ್ಟ್ & ಕಲ್ಬರಲ್ ಅಕಾಡೆಮಿ ಧಾರವಾಡ ಇದರ ೧೬ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಗೆ ಕಲಬುರಗಿಯ ಜಾನಪದ ಕಲಾವಿದ ವಿಶ್ವನಾಥ ತೋಟನಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕರು ಮತ್ತು ನೃತ್ಯ ನಿರ್ದೇಶಕರು ನಾಟ್ಯಸ್ಫೂರ್ತಿ ಆರ್ಟ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷ ಸದಾನಂದ ಎಸ್ ಬಂಗೆಣ್ಣನವರು ತಿಳಿಸಿದ್ದಾರೆ.ಪ್ರಶಸ್ತಿಯನ್ನು ಇದೇ ತಿಂಗಳ ದಿನಾಂಕ ೧೫ ರಂದು ಧಾರವಾಡದ ಸರಕಾರಿ ನೌಕರರ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗೌರವ ಪೂರ್ವಕವಾಗಿ ತಾವೂ ಕಾರ್ಯಕ್ರಮಕ್ಕೆ ಆಗಮಿಸಿ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಯನ್ನು ಸ್ವೀಕರಿಸಬೇಕೆಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.