Shubhashaya News

ಸಸಿ ನೆಟ್ಟು ಜನ್ಮದಿನ ಆಚರಿಸಿಕೊಂಡ ಗ್ರಾ.ಪಂ ಉಪಾಧ್ಯಕ್ಷ

ಇತ್ತೀಚಿಗೆ ಜನ್ಮದಿನಗಳೆಂದರೆ ಬರೀ ಆಡಂಬರದ ಸದ್ದೇ ಅಲ್ಲಿರುತ್ತದೆ. ಕೇಕ್, ತರಹೇವಾರಿ ಬಲೂನ್, ಪಟಾಕಿ ಸದ್ದು ಸ್ವಲ್ಪ ಜೋರಾಗಿಯೇ ಇರುತ್ತದೆ ಆದರೆ ಇಲ್ಲೊಬ್ಬ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ತಮ್ಮ ಜನ್ಮದಿನವನ್ನು ಸಸಿಗಳನ್ನು ನೆಟ್ಟು ವಿಭಿನ್ನವಾಗಿ ಆಚರಿಸಿಕೊಳ್ಳುವುದರ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಎಸ್ ಅವರು ಮಲ್ಲಿನಾಥ ಮಾನೋಳಿ, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತಡಕಲ್ ಗ್ರಾಮದ ನಿವಾಸಿಗಳು. ಸಧ್ಯ ತಡಕಲ್ ಗ್ರಾಮ ಪಂಚಾಯತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವೆಂದರೆ ವಿಶ್ವ ಪರಿಸರ ದಿನವಾದ ಜೂನ್ 5 ರಂದೇ ಇವರ ಜನ್ಮದಿನ. ಪ್ರತಿವರ್ಷ ದೇವಸ್ಥಾನದ ದೇವರ ಸಮ್ಮುಖದಲ್ಲಿ ಗೆಳೆಯರು ಮತ್ತು ಹಿತೈಷಿಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಅವರು ಈ ವರ್ಷ ವಿಭಿನ್ನವಾಗಿ ಆಲೋಚಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ.


ತಡಕಲ ಗ್ರಾಮದ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣ, ಮೋರಾರ್ಜಿ ದೇಸಾಯಿ ವಸತಿ ಶಾಲೆ ಆವರಣ ಹಾಗೂ ಗ್ರಾಮದ ವಿವಿಧ ದೇವಸ್ಥಾನಗಳ ಮುಂದೆ ಹೊಂಗೆಮರ, ಬೇವಿ ಮರ, ಹುಣಸೆ ಮರ, ಆಲದ ಮರದ ಸಸಿಗಳನ್ನು ನೆಟ್ಟಿದ್ದಾರೆ ಮತ್ತು ಅವುಗಳ ಬೆಳವಣಿಗೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.


ಆಳಂದ ಶಾಸಕರಾದ ಸುಭಾಷ್ ಆರ್ ಗುತ್ತೇದಾರ ಅವರ ಅಭಿಮಾನಿ ಬಳಗದ ತಿಪ್ಪಯ್ಯ ಗುತ್ತೇದಾರ ನೇತೃತ್ವದಲ್ಲಿ ಗ್ರಾಮದ ಯುವಕರು ಸಸಿಗಳನ್ನು ನೆಟ್ಟು ಮಲ್ಲಿನಾಥ ಮಾನೋಳಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಇವರ ಈ ಕಾರ್ಯಕ್ಕೆ ಆಳಂದ ತಾಲೂಕಿನಾದ್ಯಂತ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ. ಎಲ್ಲರೂ ಇವರ ದಾರಿಯನ್ನೆ ಅನುಸರಿಸಿದರೇ ಪರಿಸರ ಸಮತೋಲನವನ್ನು ಕಾಪಾಡಬಹುದು.

Leave A Reply

Your email address will not be published.