Shubhashaya News

ಮಂಜುನಾಥ ಎಸ್ ಮಠಪತಿಗೆ ಗೌರವ ಡಾಕ್ಟರೇಟ

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ಮಠಪತಿ ಕುಸನೂರ ಅವರಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ASIA Culture Resource Academy ] I ಪದವಿ ಪ್ರದಾನ ಮಾಡಲಾಯಿತು. ಮಂಜುನಾಥ ಎಸ್. ಮಠಪತಿ ಅವರು ಹಲವು ವರ್ಷಗಳಿಂದ ನಾಡು, ನುಡಿ, ಕನ್ನಡ ಮತ್ತು ಕನ್ನಡಾಂಬೆಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡು ಅನೇಕ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡದ ಬಗ್ಗೆ ಅವರಿಗಿರುವ ಅಪಾರ ಪ್ರೀತಿ, ಕಾಳಜಿ ಗೌರವ ಹಾಗೂ ಬದ್ಧತೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿರುವುದು ಅವರ ಸೇವೆಗೆ ಸಂದ ಸಮರ್ಪಕ ಗೌರವ.ಕನ್ನಡ, ಕರ್ನಾಟಕ ಹಾಗೂ ಕನ್ನಡಾಂಬೆಯ ಪರವಾಗಿ ಅವರ ಹೋರಾಟ ಮತ್ತು ಸೇವೆ ನಿರಂತರವಾಗಿ ಮುಂದುವರಿಯಲಿ. ಈ ಗೌರವವು ಅವರ ಮುಂದಿನ ಸಾಮಾಜಿಕ ಹಾಗೂ ಕನ್ನಡಪರ ಸೇವೆಗೆ ಮತ್ತಷ್ಟು ಪ್ರೇರಣೆಯಾಗಲಿ ಎಂದು ಕರವೇ ಉತ್ತರ ಕರ್ನಾಟಕ ಅದ್ಯಕ್ಷರಾದ ಶರಣು ಬಿ ಗದ್ದುಗೆ ಹಾಗೂ ಕರವೇ ಕಾರ್ಯಕರ್ತರು ಹಾರೈಸಿದ್ದಾರೆ.ಮತ್ತು ಗೌರವ ಡಾಕ್ಟರೇಟ್ ಪದವಿ ಪಡೆದ ಮಂಜುನಾಥ ಎಸ್. ಮಠಪತಿ ಅವರಿಗೆ ಶಿವರಾಜ ಬರಗಾಲಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave A Reply

Your email address will not be published.