Shubhashaya News

ಖಜೂರಿಯಲ್ಲಿ ಪರಿಸರ ದಿನ ಆಚರಣೆ

ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಮಂಜುನಾಥ ಬಂಗರಗೆ, ವೈಜನಾಥ ವಾಡೆ, ಕುಮಾರ ಬಂಡೆ ಸೇರಿದಂತೆ ಇತರರು ಇದ್ದರು.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗಡಿಗ್ರಾಮ ಖಜೂರಿಯಲ್ಲಿ ಮಾಸ್ಕ್, ಸ್ಯಾನಿಟೈಜರ್ ಮತ್ತು ಆಹಾರದ ಪೊಟ್ಟಣ ನೀಡುವುದರೊಂದಿಗೆ ಹಾಗೂ ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನ ಆಚರಣೆ ಮಾಡಲಾಯಿತು.
ಗ್ರಾಮದ ಕೋರಣ್ಣೇಶ್ವರ ಇಂಡಾನೆ ಗ್ಯಾಸ್‍ನ ಗ್ರಾಮೀಣ ವಿತರಕನ ಮಾಲೀಕರಾದ ವೈಜನಾಥ ವಾಡೆ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋರೋನಾ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಾಸ್ಕ್ ಮತ್ತು ಸ್ಯಾನಿಟೈಜರ್‍ಗಳನ್ನು ಗ್ರಾಹಕರಿಗೆ ಹಾಗೂ ಗ್ರಾಮಸ್ಥರಿಗೆ ವಿತರಿಸಲಾಯಿತು. ನಂತರ ಅಂತರರಾಜ್ಯ ಸರಕು ಸಾಗಣೆ ಮಾಡುವ ವಾಹನ ಚಾಲಕರಿಗೆ ಆಹಾರದ ಪೊಟ್ಟಣ ವಿತರಿಸಲಾಯಿತು.


ಕಾರ್ಯಕ್ರಮದ ಆರಂಭದಲ್ಲಿ ಗ್ರಾಮದ ಗಾಯಕ ವೀರುಪಾಕ್ಷಿ ವಾಡೆ ಅವರು ನಿವೃತ್ತ ಅರಣ್ಯ ರಕ್ಷಕ ಮಾನಾಜಿ ಕೋಳಿ ಬರೆದಿರುವ ಪರಿಸರ ಗೀತೆ ಹಾಡಿದರು. ಪರಿಸರ ನಾಶದಿಂದ ಇಂದು ಜಗತ್ತಿನಲ್ಲಿ ಹಲವು ಸಮಸ್ಯೆಗಳು ತಲೆದೊರಿವೆ ಇದಕ್ಕೆ ಮಾನವನ ಸ್ವಯಂಕೃತ ಅಪರಾಧಗಳೇ ಕಾರಣಗಳಾಗಿವೆ ಎಂದು ಅಭಿಪ್ರಾಯಪಡಲಾಯಿತು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಬಂಗರಗೆ, ಮಾಜಿ ಅಧ್ಯಕ್ಷ ಜಯಪಾಲ ಭದ್ರೆ, ಮಾಜಿ ಉಪಾಧ್ಯಕ್ಷ ಶ್ರೀಶೈಲ ಬಂಡೆ, ಬಿಜೆಪಿ ಯುವ ಮೋರ್ಚಾ ಆಳಂದ ತಾಲೂಕಾ ಅಧ್ಯಕ್ಷ ಕುಮಾರ ಬಂಡೆ, ಪ್ರಕಾಶ ಗುಂಜೋಟೆ, ಬಸವರಾಜ ಢಗೆ, ಸತೀಶ ವಾಡೆ, ಶರಣಬಸಪ್ಪ ಸಾವಳೇಶ್ವರ, ಭೀಮಾಶಂಕರ ಕಂತೆ, ಪ್ರಶಾಂತ ಆಲೂರೆ, ರಾಜಕುಮಾರ ಕಲಶೆಟ್ಟಿ, ಸಂಜಯ ಕಾರಭಾರಿ, ವೈಜನಾಥ ಬಂಡೆ, ಗುರುನಾಥ ಆಲೂರ ಸೇರಿದಂತೆ ಖಜೂರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

 

Leave A Reply

Your email address will not be published.