Shubhashaya News

ಸಾಲುಮರದ ತಿಮ್ಮಕ್ಕನ ವೃಕ್ಷೋದ್ಯಾನದಲ್ಲಿ ವಿಶ್ವ ಪರಿಸರ ದಿನಾಚರಣೆ

ರೈತರಿಗಾಗಿ 19800 ಹಲವು ಸಸಿಗಳ ರಿಯಾಯಿತಿಯಲ್ಲಿ ವಿತರಣೆ

ಆಳಂದ: ಪ್ರಾದೇಶಿಕ ಅರಣೆ ಇಲಾಖೆಯಿಂದ ಕೊರಳ್ಳಿ ಹತ್ತಿರದ ಸಾಲುಮರದ ತಿಮ್ಮಕ ವೃಕ್ಷೋದ್ಯಾನದಲ್ಲಿ ವಿಶ್ವ ಪರಿಸರ ನಿಮಿತ್ತ ಪತ್ರಕರ್ತ ಮಹಾದೇವ ವಡಗಾಂವ ಅವರು ಸಿಸಿ ನೆಟ್ಟು ನೀರುಣಿಸಿದರು. ಆರ್‍ಎಫ್‍ಒ ಜಗನಾಥ ಕೋರಳ್ಳಿ, ಸಿದ್ಧರಾಮ ಕುಸುರ, ಶಿವಲಿಂಗ ತೇಲ್ಕರ್ ಇತರರು ಇದ್ದರು.
ಆಳಂದ: ಪ್ರಸಕ್ತ ಸಾಲಿನಲ್ಲಿ ವಿವಿಧ ಜಾತಿಯ 19800 ಸಸಿಗಳನ್ನು ರಿಯಾತಿ ದರದಲ್ಲಿ ರೈತರಿಗೆ ವಿತರಣೆ ಮಾಡಲಾಗುವುದು ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ತಾಲೂಕಿನ ವಲಯ ಅರಣ್ಯಾಧಿಕಾರಿ ಜಗನಾಥ ಕೊರಳ್ಳಿ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದಿಂದ ಸುಮಾರು 8 .ಮಿ.ಮೀ ಅಂತರದಲ್ಲಿನ ಪ್ರಾದೇಶಿಕ ಅರಣ್ಯ ವಲಯ ಇಲಾಖೆಯ ಆಶ್ರಯದಲ್ಲಿ ಸರಳವಾಗಿ ಶನಿವಾರ ಹಮ್ಮಿಕೊಂಡ ವಿಶ್ವಪರಿಸರ ದಿನಾಚರಣೆ ನಿಮಿತ್ತ ಸಸಿನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಿಯಾತಿದರದಲ್ಲಿ ರೈತರ ವಿತರಣೆಗೆ ಒಟ್ಟು 19800 ಸಸಿಗಳನ್ನು ಉತ್ಪಾದನೆ ಮಾಡಲಾಗಿದೆ. ಒಂದು ಸಸಿಗಳಿಗೆ 1 ರೂ.ಗಳು ಹಾಗೂ ದೊಡ್ಡ ಸಸಿಗೆ 3 ರೂ.ಗಳ ರಿಯಾತಿ ದರದಲ್ಲಿ ಮಾರಾಟಮಾಡಲಾಗುತ್ತಿದೆ. ಇದರಲ್ಲಿ ಶ್ರೀಗಂಧ, ಮಹಾಗನಿ, ಹುಣಸೆ, ನಿಂಬೆ, ದಾಳಿಂಬೆ, ನೆರಳೆ, ನುಗ್ಗೆ, ಪೇರು, ಹೆಬ್ಬೇವು, ಸಾಗವಾನಿ ಸಸಿಗಳನ್ನು ಲಭ್ಯವಿದ್ದು, ರೈತರು ಇಲಾಖೆಗೆ ಸಂರ್ಕಿಸಿ ಲಾಭ ಪಡೆಯಬೇಕು. ಅಲ್ಲದೆ, ಹಂಗಾಮಿನಲ್ಲಿ ಮುಖ್ಯ ರಸ್ತೆ ಬದಿ ಹಾಗೂ ಅರಣ್ಯ ಪ್ರದೇಶದಲ್ಲಿ ವೃಕ್ಷಾರೋಹಣಕ್ಕಾಗಿ 9600 ಸಸಿಗಳ ನೆಡುವ ಗುರಿ ಹೊಂದಿದ್ದು, ಇನ್ನಷ್ಟು ಮಳೆಯಾದ ಮೇಲೆ ಸಸಿನೆಡುವ ಕೆಲಸ ಆರಂಭಿಸಲಾಗುವುದು ಎಂದು ನುಡಿದರು.
ಬರಡು ಗುಡ್ಡದಲ್ಲಿ 2017ರಲ್ಲಿ ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಿದ ವೃಕ್ಷೋದ್ಯಾನ ಇಂದು ಹೆಮ್ಮರವಾಗಿ ಬೆಳೆದ ಆಕರ್ಶಣೆ ಕೇಂದ್ರವಾಗಿದೆ. ಈಗಾಗಲೇ ನೂರಾರು ಮಂದಿ ಪರಿಸರ ಪ್ರೇಮಿಗಳು ಸಾರ್ವಜನಿಕರು ಭೇಟಿ ಕೊಟ್ಟ ಪರಿಸದ ಗಾಳಿ, ಗಂಧವನ್ನು ಸವಿಯತೊಡಗಿದ್ದಾರೆ. ಎಲ್ಲರು ಪರಿಸರ ಕಾಳಜಿ ವಹಿಸುವ ಜೊತೆಗೆ ಅದರ ಪಾಲನೆ ಪೋಷಣೆಗೆ ಕೈಜೋಡಿಸುವುದ ಇಂದಿನ ಅಗತ್ಯವಾಗಿದೆ, ಮನೆಗೊಂದು ಮರ, ಊರಿಗೊಂದು ವನ ಆದಾಗಲೇ ಶುದ್ದಗಾಳಿ, ತಂಪಾದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಪರ್ತಕರ್ತ ಮಹಾದೇವ ವಡಗಾಂವ ಅವರು ಸಸಿಗೆ ನೀರುಣಿಸಿ ಮಾತನಾಡಿದ ಅವರು, ಮಾನವರ ದಾಹಕ್ಕೆ ಗಿಡಿ, ಮರಗಳೆಯಲ್ಲ ಕಡಿದು ಹಾಕಿದ ಪರಿಣಾಮ ಇಂದು ಹಸಿರು ಪರಿಸರ ನಾಶವಾಗಿ ಜೀವ ಸಂಕೋಲಕ್ಕೆ ಶುದ್ಧ ಗಾಳಿ ಇಲ್ಲವಾಗಿ ಸಂಕಷ್ಟದಲ್ಲಿ ದಿನದೊಡುವಂತಾಗಿದೆ. ತಾಪಮಾನ ತಗ್ಗಿಸಲು ಪ್ರತಿಯೊಬ್ಬರು ಗಿಡಮರ ನೆಟ್ಟಂತೆ ಅವುಗಳನ್ನು ಉಳಿಸಿ ಬೆಳೆಯುವಂತೆ ನೋಡಿಕೊಳ್ಳಬೇಕಾಗಿದೆ. ಹೆಚ್ಚು ಹೆಚ್ಚಾಗಿ ಜನ, ಜಾನುವಾರು ಹಾಗೂ ಪಕ್ಷಿ ಸಂಕೋಲಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹಣ್ಣು ಹಂಫಲ ಕೊಡುವ ಗಿಡಗಳನ್ನು ನೆಡಬೇಕು ಎಂದು ಹೇಳಿದರು.
ಪತ್ರಕರ್ತ ಶಿವಲಿಂಗ ತೇಲ್ಕರ್ ಮಾತನಾಡಿದರು. ಶಿಕ್ಷಕ ಜಗದೀಶ ನಿರಗುಡಿ, ಅರಣ್ಯ ರಕ್ಷಕ ಸಿದ್ಧರಾಮ ಕಸುರ, ಅರಣ್ಯ ವೀಕ್ಷಕ ವೀರಭದ್ರಯ್ಯ ಸ್ವಾಮಿ, ಅಮೃತ, ಸಾತಲಿಂಗಪ್ಪ, ಸೋಮಣ್ಣಾ ಮತ್ತು ಶರಣಬಸಪ್ಪ ಇತರರು ಇದ್ದರು.

Leave A Reply

Your email address will not be published.