ಆಳAದ ತಾಲೂಕಿನ ತಡಕಲ ಗ್ರಾಮದಲ್ಲಿ ತಮ್ಮ ತಾಯಿಯ ಸ್ಮರಣಾರ್ಥ ನಿರ್ಮಿಸಿರುವ ಅಂಬಾ ಭವಾನಿ ದೇವಸ್ಥಾನದಲ್ಲಿ ವೈಭವದ ದಸರಾ ಉತ್ಸವಕ್ಕೆ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಚಾಲನೆ ನೀಡಿದರು.
ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜನತೆ ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದ್ದಾರೆ. ಈಗಾಗಲೇ ದಿ.೧೧ ರಂದು ಘಟಸ್ಥಾಪನೆಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊAಡಿವೆ. ದಿ.೧೨ ರಂದು ನವನಿಹಾಳ- ಜನವಾಡ ಭಜನಾ ತಂಡಗಳಿAದ ಭಜನೆ, ದಿ.೧೩ರಂದು ಕೋಹಿನೂರ- ಬಂಗರಗಾ ತಂಡಗಳಿAದ ಭಜನೆ, ದಿ.೧೪ರಂದು ಗುಂಡಣ್ಣಾ ಡಿಗ್ಗಿ ಮತ್ತು ತಂಡದವರಿAದ ಹಾಸ್ಯ ರಸಮಂಜರಿ ಕಾರ್ಯಕ್ರಮ, ದಿ.೧೫ರಂದು ಬಟಗೇರಾ ವಾಡಿ- ಬೆಳಮಗಿ ತಂಡಗಳಿAದ ಭಜನೆ, ದಿ.೧೬ರಂದು ಕಲಬುರಗಿಯ ಸಂಗೀತ ಕಲಾವಿದರಿಂದ ರಸಮಂಜರಿ, ದಿ.೧೭ ರಂದು ತಾಯಿಯ ಕುರಿತು ಪ್ರಬಂಧ ಸ್ಪರ್ಧೆ, ದಿ.೧೮ರಂದು ಬೆಳಿಗ್ಗೆ ೧೦ ಗಂಟೆಯಿAದ ಸಾಯಂಕಾಲ ೫ ಗಂಟೆಯವರೆಗೆ ಖ್ಯಾತ ವೈದ್ಯರಾದ ಡಾ. ಬಾಬುರಾವ ರುದ್ರವಾಡಿ ಮತ್ತು ತಂಡದವರಿAದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಾಯಂಕಾಲ ಚಿಕ್ಕಮಗಳೂರಿನ ಖ್ಯಾತ ಸಂಸ್ಕೃತಿ ಚಿಂತಕಿ ನಾಗಶ್ರೀ ತ್ಯಾಗರಾಜ ಅವರಿಂದ ವಿಶೇಷ ಉಪನ್ಯಾಸ, ದಿ.೧೯ರಂದು ಮುಂಜಾನೆ ೧೧ ಗಂಟೆಗೆ ಆಳಂದ ತಾಲೂಕಿನ ಕಲಾವಿದರಿಗಾಗಿ ಗಾನ ಕೋಗಿಲೆ ಗಾಯನ ಸ್ಪರ್ಧೆ ಸಾಯಂಕಾಲ ಪ್ರಭಾವತಿ ಭಜನಾ ಮಂಡಳಿ ಹಾಗೂ ಅಕ್ಕಮಹಾದೇವಿ ಭಜನಾ ಮಂಡಳಿಯಿAದ ಜಾಗರಣೆ. ದಿ. ೨೦ರಂದು ಮುಂಜಾನೆ ೧೧ ಗಂಟೆಗೆ ಉತ್ತಮ ಲೇಖಕರಿಗೆ, ಉತ್ತಮ ಭಜನಾ ತಂಡದವರಿಗೆ, ಅಂಬವ್ವಾ ಮಾತೃರತ್ನ ಪ್ರಶಸ್ತಿ ಹಾಗೂ ನಗದು ಬಹುಮಾನ ಕಾರ್ಯಕ್ರಮ ಜರುಗಲಿದೆ.