ಚಿತ್ತಾಪುರ: ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಕೊರೊನಾ ಸೋಂಕಿನ ಲಾಕ್‍ಡೌನ್ ನಿಮಿತ್ತ ಕಡುಬಡವರಿಗೆ, ನಿರ್ಗತಿಕರಿಗೆ ಜಿಪಂ ಸದಸ್ಯ ಅರವಿಂದ ಚವ್ಹಾಣ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.
ಚಿತ್ತಾಪುರ: ಕೊರೊನಾ ಹೆಮ್ಮಾರಿಯಿಂದ ತೊಂದರೆಯಲ್ಲಿರುವ ಬಡವರಿಗೆ ಮಾನವಿಯತೆ ದೃಷ್ಠಿಯಿಂದ ಸೇವಾ ಮಾಡುವ ಮನೋಭಾವನೆ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಹೇಳಿದರು.
ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಕೊರೊನಾ ಸೋಂಕಿನ ಲಾಕ್‍ಡೌನ್ ನಿಮಿತ್ತ ಕಡುಬಡವರಿಗೆ, ನಿರ್ಗತಿಕರಿಗೆ ಜಿಪಂ ಸದಸ್ಯ ಅರವಿಂದ ಚವ್ಹಾಣ ಅವರು ನೀಡುವ ಆಹಾರ ಧಾನ್ಯಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಕಷ್ಟದ ಸಮಯದಲ್ಲಿ ಅರವಿಂದ ಚವ್ಹಾಣ ಅವರು ಬಡವರಿಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಜಿಪಂ ಸದಸ್ಯ ಅರವಿಂದ ಚವ್ಹಾಣ ಮಾತನಾಡಿ, ಚಿತ್ತಾಪುರ ಮತಕ್ಷೇತ್ರದ 27 ಗ್ರಾಪಂಯ ಎಲ್ಲ ಗ್ರಾಮಗಳ ಹಾಗೂ ಪ್ರತಿಬೂತ್‍ನ ಸುಮಾರು 50ಕ್ಕೂ ಹೆಚ್ಚು ಬಡವರಿಗೆ ಫುಡ್ ಕಿಟ್, ಮಾಸ್ಕ್, ಸ್ಯಾನಿಟೈಜರ್ ವಿತರಿಸಲಾಗುತ್ತಿದೆ. ಕೊರೊನಾ ನಿಯಂತ್ರಣ ಹಾಗೂ ಕೊರೊನಾ ಮುಕ್ತ ಮತಕ್ಷೇತ್ರ ಮಾಡಲು ಪ್ರತಿಯೊಬ್ಬರು ಕೊರೊನಾ ಲಸಿಕೆ ಪಡೆದುಕೊಳ್ಳಬೇಕು ಎಂದರು. ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೇನೋರ ಮಾತನಾಡಿದರು.
ಬಿಜೆಪಿ ತಾಲೂಕಾಧ್ಯಕ್ಷ ನೀಲಕಂಠ ಪಾಟೀಲ್, ಗುಂಡಗುರ್ತಿ ಶಕ್ತಿ ಕೇಂದ್ರ ಅಧ್ಯಕ್ಷ ಹಣಮಂತ ಬೆಂಕಿ, ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ಶಿವಯ್ಯ ಗುತ್ತೇದಾರ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ರಾಜು ಮುಕ್ಕಣ್ಣ, ಭೀಮಣ್ಣ ಸೀಬಾ, ಮಹೇಶ ಬಟಗೇರಿ, ಶಾಂತಕುಮಾರ ಮಳಖೇಡ, ವಿಜಯಕುಮಾರ, ಆನಂದ ಚವ್ಹಾಣ, ಮುರಘೇಂದ್ರ ಭಜಂತ್ರಿ, ಶಿವಾಜಿ ರುಪನೂರ, ಈರಣ್ಣ ಹಡಪದ, ರಿಚರ್ಡ ಇದ್ದರು.
ಶರಣಗೌಡ ಪೊಲೀಸ್ ಪಾಟೀಲ್ ನಿರೂಪಿಸಿದರು.