Shubhashaya News

ಎ.ಐ. ಮೇಲೆ ಅತಿಯಾದ ಅವಲಂಬನೆಗಿAತ ಮೂಲ ಸಂಶೋಧನೆಗೆ ಆದ್ಯತೆ ನೀಡಿ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ “ಗ್ರಂಥಾಲಯ ಇ-ಸಂಪನ್ಮೂಲಗಳು” ಬಳಕೆದಾರರ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿದರು.

ಆಳಂದ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕೇ ಹೊರತು, ಶೈಕ್ಷಣಿಕ ಬರವಣಿಗೆ ಹಾಗೂ ಸಂಶೋಧನೆಗಾಗಿ ಅದರ ಮೇಲೆ ಅತಿಯಾದ ಅವಲಂಬನೆ ಹೊಂದಬಾರದು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆ ಕೇಂದ್ರ ಗ್ರಂಥಾಲಯವು ಹೊಸದಾಗಿ ಸೇರ್ಪಡೆಗೊಂಡ ಬೋಧನಾ ಸಿಬ್ಬಂದಿಗಾಗಿ ಆಯೋಜಿಸಿದ್ದ “ಗ್ರಂಥಾಲಯ ಇ-ಸಂಪನ್ಮೂಲಗಳು” ಬಳಕೆದಾರರ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರು ಎ.ಐ. ಪರಿಕರಗಳ ಮೇಲೆ ಅವಲಂಬಿತರಾಗುವ ಬದಲು ಗ್ರಂಥಾಲಯ, ಓದುವಿಕೆ ಮತ್ತು ಮೂಲ ಸಂಶೋಧನೆಯ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಎ.ಐ. ಮೇಲಿನ ಅತಿಯಾದ ಅವಲಂಬನೆಯು ಸ್ವತಂತ್ರ ಚಿಂತನೆ, ವಿಶ್ಲೇಷಣಾತ್ಮಕ ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಕುಗ್ಗಿಸುವ ಅಪಾಯವಿದೆ. ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರ ಜ್ಞಾನ, ಶೈಕ್ಷಣಿಕ ಪ್ರಾಮಾಣಿಕತೆ ಮತ್ತು ಸ್ವಂತಿಕೆಯೇ ನಿಜವಾದ ಅಡಿಪಾಯ ಎಂದು ಅವರು ಹೇಳಿದರು.
ಕೇಂದ್ರ ಗ್ರಂಥಾಲಯದಲ್ಲಿರುವ ಸಮೃದ್ಧ ಇ-ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಭಾರತ ಸರ್ಕಾರದ “ಒಂದು ರಾಷ್ಟç–ಒಂದು ಚಂದಾದಾರಿಕೆ ಯೋಜನೆಯಡಿ ೧೩ ಸಾವಿರಕ್ಕೂ ಹೆಚ್ಚು ಅಂತರರಾಷ್ಟಿçÃಯ ಸಂಶೋಧನಾ ಜರ್ನಲ್‌ಗಳು ಲಭ್ಯವಿದ್ದು, ಅವುಗಳನ್ನು ಅಧ್ಯಾಪಕರು ಮತ್ತು ಸಂಶೋಧಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಿಂದಿನ ದಿನಗಳಲ್ಲಿ ಸಂಶೋಧನಾ ಮಾಹಿತಿಗಾಗಿ ರಾಷ್ಟಿçÃಯ ಗ್ರಂಥಾಲಯಗಳಿಗೆ ಭೇಟಿ ನೀಡಿ ಅನೇಕ ಪುಸ್ತಕಗಳನ್ನು ಪರಿಶೀಲಿಸಬೇಕಾಗುತ್ತಿತ್ತು. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ವಿಶ್ವದರ್ಜೆಯ ಶೈಕ್ಷಣಿಕ ಸಂಪನ್ಮೂಲಗಳು ಬೆರಳ ತುದಿಯಲ್ಲೇ ಲಭ್ಯವಾಗುತ್ತಿವೆ. ಈ ಅವಕಾಶಗಳನ್ನು ಬೋಧನೆ, ಸಂಶೋಧನೆ, ನಾವೀನ್ಯತೆ ಮತ್ತು ಶೈಕ್ಷಣಿಕ ಶ್ರೇಷ್ಠತೆಗಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿದ್ದು, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಅವರ ಶೈಕ್ಷಣಿಕ ಅಭ್ಯಾಸಗಳನ್ನು ಅನುಸರಿಸುತ್ತಾರೆ. ಆದ್ದರಿಂದ ವಿಶ್ವವಿದ್ಯಾಲಯದಲ್ಲಿರುವ ಅತ್ಯಾಧುನಿಕ ಪ್ರಯೋಗಾಲಯಗಳು, ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ಹಾಗೂ ಸಂಶೋಧನಾ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಗುಣಮಟ್ಟದ ಮೂಲ ಸಂಶೋಧನಾ ಲೇಖನಗಳನ್ನು ಪ್ರಕಟಿಸುವತ್ತ ಗಮನಹರಿಸಬೇಕು ಎಂದು ಹೇಳಿದರು.
ಸಂಶೋಧನೆಯಲ್ಲಿ ಕೃತಿಚೌರ್ಯವನ್ನು ಕಟ್ಟುನಿಟ್ಟಾಗಿ ತಪ್ಪಿಸಿ, ಸ್ವಂತ ಸಂಶೋಧನಾ ಬರವಣಿಗೆಯ ಶೈಲಿಯನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಉಪಯುಕ್ತವಾದ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ವ್ಯವಹಾರ ಅಧ್ಯಯನ ನಿಕಾಯದ ಡೀನ್ ಪ್ರೊ. ಪಾಂಡುರAಗ ವಿ., ಡಿಜಿಟಲ್ ಸಂಪನ್ಮೂಲಗಳ ಲಭ್ಯತೆಯಿಂದ ಸಂಶೋಧನಾ ಕಾರ್ಯ ಹಿಂದಿನಿಗಿAತ ಸುಲಭವಾಗಿದ್ದು, ಶಿಕ್ಷಣ ಸಚಿವಾಲಯದ ಓಎನ್‌ಒಎಸ್ ಯೋಜನೆಯಿಂದ ಸಾವಿರಾರು ಗುಣಮಟ್ಟದ ಸಂಶೋಧನಾ ಜರ್ನಲ್‌ಗಳು ದೇಶದಾದ್ಯಂತ ಲಭ್ಯವಾಗಿವೆ ಎಂದು ಹೇಳಿದರು.
ಗ್ರಂಥಪಾಲಕ ಡಾ. ಪಿ.ಎಸ್. ಕಟ್ಟಿಮನಿ ಸ್ವಾಗತಿಸಿ, ಸಂಪೂರ್ಣ ಸ್ವಯಂಚಾಲಿತ ಗ್ರಂಥಾಲಯ ವ್ಯವಸ್ಥೆ, ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹೊಸದಾಗಿ ನೇಮಕಗೊಂಡ ಅಧ್ಯಾಪಕರು, ಗ್ರಂಥಾಲಯದ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಡಾ. ಸತೀಶ್ ವಿ. ತೋಟರ್, ಡಾ. ಜಿ.ಜೆ.ಪಿ. ದೀಕ್ಷಿತ್, ರಾಜ್‌ಕುಮಾರ್ ಕಲ್ಯಾಣಿ, ರಾಜೇಶ್ ಸಿ. ದಾಸ್, ಬಸವರಾಜ್ ಯಾದವಾಡ, ನಿಂಗಣ್ಣ ಎಂ.ಜಿ., ಪ್ರಕಾಶ ಎಸ್.ಎನ್., ಸಾಗರ್ ಕಬಾಡೆ, ಸತೀಶ್ ಕುಮಾರ್ ಹಾಗೂ ಶಿವಕುಮಾರ್ ಜಿ. ಉಪಸ್ಥಿತರಿದ್ದರು. ಪ್ರಕಾಶ ಎಸ್.ಎನ್. ನಿರೂಪಿಸಿದರು.

Leave A Reply

Your email address will not be published.