Shubhashaya News

ಪತ್ರಕರ್ತರಿಗೆ ಆಹಾರಧಾನ್ಯ ಕಿಟ್ ವಿತರಣೆ

ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊರೊನಾ ವಾರಿಯರ್ಸ್‍ಗಳಾದ ಪತ್ರಕರ್ತರಿಗೆ ನವ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ ಗುತ್ತೇದಾರ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿದರು.

ಚಿತ್ತಾಪುರ: ಪತ್ರಕರ್ತರಾದವರು ಕೊರೊನಾ ವಾರಿಯರ್ಸ್‍ಗಳಾಗಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ. ಹೀಗಾಗಿ ಅವರ ಸೇವೆಯನ್ನು ಗುರುತಿಸಿ ಆಹಾರ ಧಾನ್ಯದ ಕಿಟ್‍ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ನವ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ ಗುತ್ತೇದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರಿಗೆ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ದೇಶ ಹಾಗೂ ರಾಜ್ಯ ತತ್ತರಿಸಿ ಹೋಗಿದೆ. ಇಂತಹ ಮಹಾಮಾರಿ ಸೋಂಕಿನ ನಡುವೆಯೂ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವುದು ದೊಡ್ಡ ಸಾಧನೆಯಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಹಾಗೂ ಸಾರ್ವಜನಿಕರ ನೋವು ನಲಿವುಗಳ ಮತ್ತು ಸಮಸ್ಯೆಗಳ ಬಗ್ಗೆ ಸ್ಪಂಧಿಸಿ ವರದಿ ಮಾಡುವ ಪತ್ರಕರ್ತರ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. ಪತ್ರಕರ್ತರಿಗೆ ಸುದ್ದಿಗಾಗಿ ಮಾತ್ರ ಬಳಸಿಕೊಂಡು ನಂತರ ಮರೆಯುವುದು ಸರೀಯಲ್ಲ ಎಂದರು.
ಪತ್ರಕರ್ತರಿಗೆ ಸುದ್ದಿ ಮಾಡಲು ಬನ್ನಿ ಎಂದು ಕರೆದ ಕೂಡಲೇ ಅವರ ನೂರು ಕೆಲಸಗಳನ್ನು ಬಿಟ್ಟು ಸುದ್ದಿ ಮಾಡಿಕೊಂಡು ಹೋಗುತ್ತಾರೆ. ಹೀಗಾಗಿ ಅವರನ್ನು ಗುರುತಿಸಿ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿದ ನವ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ ಗುತ್ತೇದಾರ ಅವರ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ನವ ಕರ್ನಾಟಕ ರೈತ ಸಂಘದ ನಗರಾಧ್ಯಕ್ಷ ಜಗದೀಶ ಚವ್ಹಾಣ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಹಿಂದುಳಿದ ಘಟಕದ ಅಧ್ಯಕ್ಷ ನಾಗಯ್ಯ ಗುತ್ತೇದಾರ, ರೈತ ಸಂಘದ ತಾಲೂಕು ಅಧ್ಯಕ್ಷ ಅಂಬರೀಶ ಗುತ್ತೇದಾರ ಮುಖಂಡರಾದ ನಾಗು ಗುತ್ತೇದಾರ, ಕೋರಿಸಿದ್ಧ ಗಂಜಿ, ಜಗದೇವ ಕುಂಬಾರ, ಗೌಸಮೀಯ್ಯಾ ಕರದಾಳ ಸೇರಿದಂತೆ ಪತ್ರಕರ್ತರು ಇದ್ದರು.

 

Leave A Reply

Your email address will not be published.