Shubhashaya News

ಸಿಯುಕೆ ವಿದ್ಯಾರ್ಥಿಗಳ ಸಂಶೋಧನೆಗೆ ರಾಷ್ಟಿçÃಯ ಮನ್ನಣೆ

ಐಇಇಇ ಎಸ್‌ಪಿಎಸಿಇ ೨೦೨೬ ಸಮ್ಮೇಳನದಲ್ಲಿ

ಆಳಂದ: ಸಿಯುಕೆ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿAಗ್ ವಿಭಾಗವು ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಐಇಇಇ ಎಸ್‌ಪಿಎಸಿಇ–೨೦೨೬ ಅಂತರರಾಷ್ಟಿçÃಯ ಸಮ್ಮೇಳನದಲ್ಲಿ ಭಾಗವಹಿಸಿ ಸಂಭ್ರಮಿಸಿದೆ.

ಆಳಂದ: ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿAಗ್ ವಿಭಾಗವು ಈಚೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಐಇಇಇ ಎಸ್‌ಪಿಎಸಿಇ–೨೦೨೬ ಅಂತರರಾಷ್ಟಿçÃಯ ಸಮ್ಮೇಳನದಲ್ಲಿ ಭಾಗವಹಿಸಿ ರಾಷ್ಟಿçÃಯ ಮಟ್ಟದಲ್ಲಿ ಗಮನ ಸೆಳೆಯಿತು.
ಸಮ್ಮೇಳನದಲ್ಲಿ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಎಂಜಿನಿಯರಿAಗ್ ನಿಕಾಯದ ಡೀನ್ ಹಾಗೂ ವಿಭಾಗದ ಮುಖ್ಯಸ್ಥ ಪ್ರೊ. ಪರಮೇಶ, ಸಹಾಯಕ ಪ್ರಾಧ್ಯಾಪಕ ಡಾ. ನೃಸಿಂಘ ಚರಣ್ ಪ್ರಧಾನ್ ಸೇರಿದಂತೆ ವಿಭಾಗದ ೧೫ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ದೇಶದ ವಿವಿಧ ಭಾಗಗಳಿಂದ ೭೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಕುಲಪತಿಗಳು, ನಿರ್ದೇಶಕರು, ಖ್ಯಾತ ವಿಜ್ಞಾನಿಗಳು, ಕೈಗಾರಿಕಾ ವಲಯದ ಪ್ರಮುಖರು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಿದ್ದ ಈ ಸಮ್ಮೇಳನವು ಬಾಹ್ಯಾಕಾಶ, ವೈಮಾನಿಕ, ರಕ್ಷಣಾ ಹಾಗೂ ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳ ಸಂಶೋಧನೆ ಮತ್ತು ನಾವೀನ್ಯತೆಗೆ ಮಹತ್ವದ ವೇದಿಕೆಯಾಯಿತು.
ಸಮ್ಮೇಳನದಲ್ಲಿ ಇಸ್ರೋ ಹಾಗೂ ಡಿಆರ್‌ಡಿಒ ಸಂಸ್ಥೆಗಳ ಹಿರಿಯ ಅಧಿಕಾರಿಗಳು, ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ವಿಜ್ಞಾನಿಗಳು ಉಪಸ್ಥಿತರಿದ್ದರು. ಈ ವೇಳೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ದೇಶದ ಹಿರಿಯ ವಿಜ್ಞಾನಿಗಳಾದ ಡಾ. ಜಿ. ಸತೀಶ್ ರೆಡ್ಡಿ, ಡಾ. ಬಿ.ಕೆ. ದಾಸ್ ಹಾಗೂ ಡಾ. ಎಸ್. ಸೋಮನಾಥ್ ಅವರೊಂದಿಗೆ ಸಿಯುಕೆಯ ಭವಿಷ್ಯದ ಶೈಕ್ಷಣಿಕ ಸಹಭಾಗಿತ್ವ, ಜಂಟಿ ಸಂಶೋಧನಾ ಯೋಜನೆಗಳು ಹಾಗೂ ಉನ್ನತ ಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು. ಅಲ್ಲದೆ, ಸಿಯುಕೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಆಹ್ವಾನಿಸಿದರು.
ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಭಾರತೀಯ ಗಗನಯಾತ್ರಿಗಳಾದ ಅಂಗದ್ ಪ್ರತಾಪ್ ಹಾಗೂ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ವಿದ್ಯಾರ್ಥಿಗಳು ನೇರ ಸಂವಾದ ನಡೆಸಿದರು. ಭಾರತದ ಬಾಹ್ಯಾಕಾಶ ಅನ್ವೇಷಣೆಯ ಭವಿಷ್ಯ, ತಾಂತ್ರಿಕ ಪ್ರಗತಿ ಹಾಗೂ ವೈಜ್ಞಾನಿಕ ಅವಕಾಶಗಳ ಕುರಿತು ಅವರು ಹಂಚಿಕೊAಡ ಅನುಭವಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾದವು.
ಇದೇ ವೇಳೆ ಸಿಯುಕೆಯ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ರಾಷ್ಟಿçÃಯ ಮಟ್ಟದ ವಿಜ್ಞಾನಿಗಳು ಮತ್ತು ತಜ್ಞರ ಮೆಚ್ಚುಗೆಗೆ ಪಾತ್ರರಾದರು. ತಮ್ಮ ಸಂಶೋಧನಾ ಸಾಧನೆಗಳನ್ನು ರಾಷ್ಟಿçÃಯ ವೇದಿಕೆಯಲ್ಲಿ ಪ್ರದರ್ಶಿಸಲು ಈ ಸಮ್ಮೇಳನವು ಮಹತ್ವದ ಅವಕಾಶ ಒದಗಿಸಿತು.

Leave A Reply

Your email address will not be published.