Shubhashaya News

ಮಕ್ಕಳ ಆರೋಗ್ಯ ತಪಾಸಣೆ ನಿರ್ಲಕ್ಷಿಸದೆ ಗಂಭೀರವಾಗಿ ಕೈಗೊಳ್ಳಿ: ರಾಕೇಶ್ ಶೀಲವಂತ್

ಆಳಂದ: ತಾಲೂಕು ಆಡಳಿತ ಸೌಧÀ ಸಭಾಂಗಣ ದಲ್ಲಿ ನಡೆದ ಆರ್ ಬಿ ಎಸ್ ಕೆ ಸಮನ್ವಯ ಸಮಿತಿ ಸಭೆಯಲ್ಲಿ ಉಪ ತಹಶೀಲ್ದಾರ್ ರಾಕೇಶ್ ಶೀಲವಂತ್ ಅವರು ಮಾತನಾಡಿದರು. ಆರೋಗ್ಯ ಅಧಿಕಾರಿ ಉಸ್ಮಾನ್ ಸುತಾರ್, ನಾಡ ತಹಸಿಲ್ದಾರ್ ಸಿದ್ದರಾಮ ಹಡಪದ್ ಇತರರು ಇದ್ದರು.

ಆಳAದ: ಮಕ್ಕಳಲ್ಲಿನ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಅಗತ್ಯ ಚಿಕಿತ್ಸೆ ಕೊಡಿಸುವ ಮೂಲಕ ಅವರ ಆರೋಗ್ಯ ರಕ್ಷಣೆಗೆ ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಉಪ ತಹಶೀಲ್ದಾರ್ ರಾಕೇಶ್ ಶೀಲವಂತ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟಿçÃಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ನಡೆಸಬೇಕು. ತಪಾಸಣೆ ವೇಳೆ ಪತ್ತೆಯಾಗುವ ಕಾಯಿಲೆ ಹಾಗೂ ನ್ಯೂನತೆಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕುವಂತೆ ಸಂಬAಧಿಸಿದ ಇಲಾಖೆಗಳು ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು.
ಮಕ್ಕಳ ಆರೋಗ್ಯಕ್ಕೆ ಸಂಬAಧಿಸಿದ ಯಾವುದೇ ಸಮಸ್ಯೆ ಕಂಡುಬAದರೂ ಅದನ್ನು ನಿರ್ಲಕ್ಷಿಸಬಾರದು. ಆರ್‌ಬಿಎಸ್‌ಕೆ ತಂಡದಿAದ ಪತ್ತೆಯಾಗುವ ಮಕ್ಕಳನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ಕಳುಹಿಸಿ ಚಿಕಿತ್ಸೆ ಹಾಗೂ ಶಸ್ತçಚಿಕಿತ್ಸೆ ದೊರಕಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ ಮೂಲಕ ಸರ್ಕಾರದ ಆರೋಗ್ಯ ಸೇವೆಯ ಪ್ರಯೋಜನ ಪ್ರತಿಯೊಬ್ಬ ಅರ್ಹ ಮಗುವಿಗೂ ತಲುಪುವಂತೆ ನೋಡಿಕೊಳ್ಳಬೇಕು ಎಂದು ರಾಕೇಶ್ ಶೀಲವಂತ ಹೇಳಿದರು.
ತಾಲೂಕು ಪ್ರಭಾರಿ ಆರೋಗ್ಯ ಅಧಿಕಾರಿ ಡಾ. ಉಸ್ಮಾನ್ ಸುತಾರ್ ಮಾತನಾಡಿ, ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಕಾರ್ಯಕ್ಕೆ ಇಲಾಖೆಗಳ ಸಹಕಾರ ಅಗತ್ಯವಾಗಿದೆ.ರಾಷ್ಟಿçÃಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಮಕ್ಕಳಲ್ಲಿನ ಜನ್ಮಜಾತ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆರೋಗ್ಯಕರ ಭವಿಷ್ಯ ರೂಪಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ನಾಡ ತಹಶೀಲ್ದಾರ್ ಸಿದ್ದರಾಮ ಹಡಪದ ಉಪಸ್ಥಿತರಿದ್ದರು.
ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ. ವಿನಾಯಕ್ ತಾಟಿ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೨೫-೨೬ನೇ ಸಾಲಿನಲ್ಲಿ ಆಳಂದ ತಾಲೂಕಿನ ಆರ್‌ಬಿಎಸ್‌ಕೆ ತಂಡವು ಹೃದಯ ಸಂಬAಧಿ ಕಾಯಿಲೆ ಹೊಂದಿರುವ ೧೦೫ ಮಕ್ಕಳು, ಸೀಳು ತುಟಿ ಹೊಂದಿರುವ ೨೦ ಮಕ್ಕಳು, ವಕ್ರಪಾದ ಹೊಂದಿರುವ ೨೦ ಮಕ್ಕಳು ಸೇರಿದಂತೆ ವಿವಿಧ ನ್ಯೂನತೆಗಳಿರುವ ಮಕ್ಕಳನ್ನು ಪತ್ತೆಹಚ್ಚಿದೆ. ಈ ಪೈಕಿ ೩೨ ಮಕ್ಕಳಿಗೆ ಯಶಸ್ವಿಯಾಗಿ ಶಸ್ತçಚಿಕಿತ್ಸೆ ಮಾಡಿಸಲಾಗಿದ್ದು, ಇತರ ಮಕ್ಕಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
೨೦೨೬-೨೭ನೇ ಸಾಲಿನ ಏಪ್ರಿಲ್‌ನಿಂದ ಆಗಸ್ಟ್ವರೆಗೆ ಹೃದಯ ಸಂಬAಧಿ ಕಾಯಿಲೆ ಹೊಂದಿರುವ ೪೧ ಮಕ್ಕಳು, ಸೀಳು ತುಟಿ ಹೊಂದಿರುವ ೫ ಮಕ್ಕಳು ಹಾಗೂ ವಕ್ರಪಾದ ಹೊಂದಿರುವ ೬ ಮಕ್ಕಳು ಸೇರಿದಂತೆ ವಿವಿಧ ನ್ಯೂನತೆಗಳಿರುವ ಮಕ್ಕಳನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ ೮ ಮಕ್ಕಳಿಗೆ ಯಶಸ್ವಿಯಾಗಿ ಶಸ್ತçಚಿಕಿತ್ಸೆ ಮಾಡಿಸಲಾಗಿದ್ದು, ಉಳಿದ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಡಾ. ಶುಶಾಂತ ಸಂಘ, ಡಾ. ಸಂಘರ್ಷ ವಾಲಿ, ಡಾ. ಅಶ್ವಿನಿ ಕೋಟಿ, ಡಾ. ರೆಹನಾ, ಶುಶ್ರೂಷಕಿ ಅನಿತಾ ಆರ್., ಶಿವಮ್ಮ, ಫಾರ್ಮಸಿಸ್ಟ್ ಅಪಾರಾವ್ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಾಯಕ ಅಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.