ಆಳಂದನಲ್ಲಿ ೨೭ಕ್ಕೆ ವಿಶ್ವಕರ್ಮ ಸಮಾವೇಶ- ಕಲಾ ಚೇತನ ಪ್ರಶಸ್ತಿ ಪ್ರದಾನ
ಕಂಚಿನ ಪ್ರತಿಮೆ ಭವ್ಯ ಮೆರವಣಿಗೆ: ಡಾ. ಮುರುಘರಾಜೇಂದ್ರ ಶ್ರೀ ಸಾನ್ನಿಧ್ಯ
ಆಳಂದ: ವಿಶ್ವಕರ್ಮ ಘಟಕದ ಆಶ್ರಯದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ಸಮಾವೇಶ ಸಮಾರಂಭ ವಿಶ್ವ ಕರ್ಮ ಕಲಾ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಸೆ. ೨೭ರಂದು ಪಟ್ಟಣದ ಹಳೆಯ ಚೆಕ್‌ಪೋಸ್ಟ್ ರಾಯಲ್ ಪ್ಯಾಲೇಸ್‌ನಲ್ಲಿ ಮಧ್ಯಾಹ್ನ ೨:೦೦ಗಂಟೆಗೆ ನಡೆಯಲಿದೆ ಎಂದು ವಿಶ್ವಕರ್ಮ ತಾಲೂಕು ಅಧ್ಯಕ್ಷ ಬಸವರಾಜ ಕೆ. ವಿಶ್ವಕರ್ಮ ಹಾಗೂ ಸಂಘಟಕ ಡಾ. ಮೋನಪ್ಪ ಎಲ್. ಸುತಾರ ಅವರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಮಾವೇಶ ಪೂರ್ವ ಅಂದು ಪಟ್ಟಣದ ಕಾಳಿಕಾದೇವಿ ಮಂದಿರದಲ್ಲಿ ಬೆಳಗಿನ ೮:೦೦ಗಂಟೆಗೆ ಪೂಜಾ ಮಹೋತ್ಸವ ಹಾಗೂ ರಥಯಾತ್ರೆಗೆ ಚಾಲನೆ ದೊರೆಯಲಿದೆ. ೫ ಅಡಿ ಎತ್ತರದ ಭಗವಾನ ಶ್ರೀ ವಿಶ್ವಕರ್ಮರ ಕಂಚಿನ ಮೂರ್ತಿ ಭವ್ಯ ಮೆರವಣಿಗೆ ನಡೆಯಲಿದೆ. ಸುಲೆಪೇಟ ವಿಶ್ವಕರ್ಮ ಏಕದಂಡಗಿ ಮಠದ ದೊಡ್ಡೆಂದ್ರ ಶ್ರೀ, ಯಾದಗಿರಿ ಮಠದ ನಾಗಮೂರ್ತಿ ಶ್ರೀ, ಹಿರೇಮಠದ ಶ್ರೀ ಸಿದ್ದೇಶ್ವರ ಶ್ರೀ, ಶರಣ ಮಠದ ಶ್ರೀ ಚನ್ನಬಸವ ಪಟ್ಟದೇರು, ಕಲಬುರಗಿಯ ವೀರಣ್ಣಾ ಮುತ್ತಾö್ಯ ಅವರ ಸಾನ್ನಿಧ್ಯದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ರಥಯಾತ್ರೆಗೆ ಚಾಲನೆ ನೀಡುವರು. ಕಲಘಟಗಿ ಉದ್ಯಮಿ ಶ್ರೀಶೈಲ ಸುತಾರ ಧ್ವಜಾರೋಹಣ ನೆರವೇರಿಸುವರು. ವಿಶ್ವಕರ್ಮ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಶೋಕ ಎಸ್. ಪೋದ್ದಾರ, ಜಿಲ್ಲಾಧ್ಯಕ್ಷ ಕಮಲಾಕರ್ ವಿಶ್ವಕರ್ಮ, ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಹಾದೇವ ಪೋದ್ದಾರ ಸೇರಿ ಅನೇಕ ಪ್ರಮುಖರು ಆಗಮಿಸುವರು, ರಾಜಕುಮಾರ ಸುತಾರ ಮಾತನಾಡುವರು. ವಿಶ್ವಕರ್ಮ ಮಹಿಳಾ ಘಟಕದ ಅಧ್ಯಕ್ಷೆ ವೈಶಾಲಿ ಎ. ಪೋದ್ದಾರ ಅಧ್ಯಕ್ಷತೆ ವಹಿಸುವರು ಎಂದರು.
ಮಧ್ಯಾಹ್ನ ರಾಯಲ್ ಪ್ಯಾಲೇಸನಲ್ಲಿ ನಡೆಯುವ ಸಮಾವೇಶದ ಸಾನ್ನಿಧ್ಯವನ್ನು ಜಿಡಗಾ,ಮುಗಳಖೋಡ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು, ಮಾದನಹಿಪ್ಪರಗಾ ಅಭಿನವ ಶಿವಲಿಂಗ ಶ್ರೀ, ಯಾದಗಿರಿ ಸುರೇಂದ್ರನಾಥ ಶ್ರೀ, ಅಫಜಲಪೂರದ ಬ್ರಹ್ಮಾನಂದ ಶ್ರೀ, ಕಲಬುರಗಿ ಪ್ರಣವನಿರಂಜನ ಶ್ರೀ ವಹಿಸುವರು. ಉದ್ಘಾಟನೆಯನ್ನು ಶಾಸಕ ಬಿ.ಆರ್.ಪಾಟೀಲ ನೆರವೇರಿಸುವರು. ಉದ್ಯಮಿ ಶ್ರೀಶೈಲ ಎಸ್. ಸುತಾರ ನೇತೃತ್ವದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ಸುರೇಖಾ ಎನ್. ಸುತಾರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭಕ್ಕೆ ಅನೇಕರು ಆಗಮಿಸಲಿದ್ದಾರೆ. ಕಲಾಕಾರ ವಿ.ಕೆ.ಸಲಗರದ ಗಂಗಾಧರ ವಿ. ವಿಶ್ವಕರ್ಮ, ದರ್ಗಾಶಿರೂರದ ಅಶೋಕ ಎಲ್. ಸುತಾರ, ಕಲಬುರಗಿ ಗಾಯತ್ರಿ ಚ. ಶಿಲ್ಪಿ, ತಾಜಸುಲ್ತಾನಪೂರದ ರಮೇಶ ಪಿ. ಬಡಿಗೇರ, ಅಫಜಲಪೂರ ರವಿಕುಮಾರ ಆರ್. ಬÀಡಿಗೇರ ಅವರಿಗೆ ವಿಶ್ವಕರ್ಮ ಕಲಾಚೇತನ ಪುರಸ್ಕಾರ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಆಗಮಿಸಬೇಕು ಎಂದು ಅವರು ತಿಳಿಸಿದ್ದಾರೆ.