Shubhashaya News

ಆಳಂದನಲ್ಲಿ ಸಮಾವೇಶ ಯಶಸ್ವಿಗೆ ಪೂರ್ವಭಾವಿ ಸಭೆ

ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಕಲಬುರಗಿ ಚಲೋ: ಸೆ.೨೭ರಂದು ಬೃಹತ್ ಆಯೋಜನೆ

ಆಳಂದ: ಕಲಬುರ್ಗಿಯಲ್ಲಿ ನಡೆಯುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದ ವಾಲ್ ಪೋಸ್ಟರ್ ಅನ್ನು ಉದ್ಯಮಿ ಚೆನ್ನಬಸವ ಪಾಟೀಲ್ ಬಿಡುಗಡೆಗೊಳಿಸಿದರು. ಹರ್ಷಾನಂದ್ ಗುತ್ತೇದಾರ್, ಚಂದು ಪಾಟೀಲ್, ಬಾಬಾಸಾಹೇಬ್ ಪಾಟೀಲ್, ಸವಿತಾನಂದ ಸ್ವಾಮೀಜಿ ಇತರರು ಇದ್ದರು.

ಆಳಂದ: ಕಲಬುರಗಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ೨೭ರಂದು ಸಂಜೆ ೪ ಗಂಟೆಗೆ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಯುವ ನಾಯಕ ಚಂದು ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯ ಜನ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಉದಯಮಿ ಹಾಗೂ ಕಾರ್ಯಕ್ರಮದ ಆಯೋಜಕ ಮಂಡಳಿಯ ಮುಖಂಡರಾದ ಚನ್ನಬಸವ ಕೆ ಪಾಟೀಲ್ ಮನವಿ ಮಾಡಿದರು.
ಪಟ್ಟಣದ ಆರ್ಯ ಸಮಾಜ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ೨೭ರಂದು ನಡೆಯಲಿರುವ ಸಮಾವೇಶವು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ದೇಶದ ಭವ್ಯ ಸಂಸ್ಕೃತಿ, ಸಾವಯವ ಕೃಷಿ, ಹೈನುಗಾರಿಕೆ ಮತ್ತು ಜೀವನದ ವಿವಿಧ ಆಯಾಮಗಳ ಕುರಿತು ವೈಜ್ಞಾನಿಕ ಹಿನ್ನೆಲೆಯ ಸಂದೇಶಗಳನ್ನು ಕನ್ನೇರಿ ಶ್ರೀಗಳು ನೀಡಲಿದ್ದಾರೆ ಎಂದು ತಿಳಿಸಿದರು.
ನಾವೆಲ್ಲ ಒಂದು, ನಾವೆಲ್ಲ ಬಂಧು, ನಾವೆಲ್ಲ ಹಿಂದೂ’ ಎಂಬ ಸಂದೇಶದೊAದಿಗೆ ನಡೆಯಲಿರುವ ಸಮಾವೇಶಕ್ಕೆ ಹಿಂದೂ ಸಮಾಜದ ಬಾಂಧವರಿಗೆ ಆದರದ ಸ್ವಾಗತ ಕೋರಲಾಗಿದೆ. ಧಾರ್ಮಿಕ, ಸಾಮಾಜಿಕ ಹಾಗೂ ರೈತಾಪಿ ವರ್ಗದ ಹಿತಾಸಕ್ತಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.
ಯುವ ನಾಯಕ ಚಂದು ಪಾಟೀಲ ಮಾತನಾಡಿ, ಪ್ರಸ್ತುತದಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಿ ಮುನ್ನಡೆಯುವ ಅಗತ್ಯವಿದೆ. ಹೀಗಾಗಿ ಕಲಬುರಗಿ ನಗರದಲ್ಲಿ ಕನ್ನೇರಿ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಪಕ್ಷಾತೀತವಾಗಿ ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನದ್ ಎಸ್ ಗುತ್ತೇದಾರ ಮಾತನಾಡಿ, ಜಾತಿ, ಮತ ಹಾಗೂ ಪಂಗಡಗಳ ಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಕನ್ನೇರಿ ಮಠದ ಸವಿತಾನಂದ ಸ್ವಾಮೀಜಿ ಮಾತನಾಡಿ, ಸಮಾವೇಶದ ಕುರಿತು ತಾಲೂಕು ಹಾಗೂ ಗ್ರಾಮೀಣ ಭಾಗದ ಜನರಿಗೆ ಮಾಹಿತಿ ತಲುಪಿಸಬೇಕು. ಬಸವಾದಿ ಶಿವಶರಣರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಸಮಾಜದಲ್ಲಿ ಎಲ್ಲರೂ ಅಣ್ಣ-ತಮ್ಮಂದಿರAತೆ ಸೌಹಾರ್ದದಿಂದ ಬದುಕಬೇಕು. ಈ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ. ನಾಡಿನ ಹೆಸರಾಂತ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಇನ್ನೂ ಕೆಲವರು ರಾಜಕೀಯ ಲಾಭಕ್ಕಾಗಿ ಸಮಾವೇಶ ಮಾಡುತ್ತಿದ್ದಾರೆಂದು ಹೇಳುತ್ತಿದ್ದಾರೆ. ಇದ್ಯಾವುದಕ್ಕೂ ಕಿವಿಗೊಡದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ನ್ಯಾಯವಾದಿ ಬಾಬಾಸಾಹೇಬ್ ವಿ ಪಾಟೀಲ್ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಆನಂದ್ ಪಾಟೀಲ್, ಮುಖಂಡ ಸಂತೋಷ್ ಹಾದಿಮನಿ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದುಗುಳೆ, ಹನುಮಂತ್ ರಾವ್ ಮಾಲಾಜಿ, ನಿವೃತ ಸೈನಿಕ ಬಸವರಾಜ್ ಬಿರಾದಾರ್ ನೆಲ್ಲೂರ್, ಸಚಿನ್ ಪಾಟೀಲ್, ಉಮೇಶ್ ಕಡ್ಗಂಚಿ, ಮಹೇಶ್ ಗೌಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave A Reply

Your email address will not be published.