Shubhashaya News

ಸ್ಕೌಟ್ಸ್–ಗೈಡ್ಸ್ ಗೀತಗಾಯನ ಸ್ಪರ್ಧೆ: ವಿಜೇತರಿಗೆ ಪ್ರಮಾಣಪತ್ರ ವಿತರಣೆ

ಆಳಂದ: ಭಾರತ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಗೀತ ಗಾಯನ ಸ್ಪರ್ಧೆ ವಿಜೇತರಿಗೆ ಹಿರಿಯ ಪತ್ರಕರ್ತ ಮಹಾದೇವ ವಡಗಾಂವ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು. ವೆಂಕಟೇಶ ಮರಾಠೆ ಇತರರು ಇದ್ದರು.

ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಹಾಗೂ ವಿದ್ಯಾರ್ಥಿಗಳ ಗೀತಗಾಯನ ಸ್ಪರ್ಧೆ
ಆಳಂದ: ಪಟ್ಟಣದ ವಿವೇಕವರ್ಧಿನಿ ಸಿಬಿಎಸ್‌ಇ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಘಟಕದ ವತಿಯಿಂದ ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಹಾಗೂ ವಿದ್ಯಾರ್ಥಿಗಳ ಗೀತಗಾಯನ ಸ್ಪರ್ಧೆ ಅರ್ಥಪೂರ್ಣವಾಗಿ ನಡೆಯಿತು.
ಶಾಲೆಯ ಆಡಳಿತಾಧಿಕಾರಿ ಸಂತೋಷ ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ತಂಡಗಳಿಗೆ ಹಿರಿಯ ಪತ್ರಕರ್ತ ಮಹಾದೇವ ವಡಗಾಂವ ಅವರು ಪ್ರಮಾಣಪತ್ರ ವಿತರಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಬಿಎಸ್‌ಜಿ ರಾಜ್ಯ ಆಯುಕ್ತ ಶರೀಫ್ ಹತ್ತಿಮೂಡ ಹಾಗೂ ಉದ್ಯಮಿ ರಾಜೇಶ ಕೇಶವಾನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಘಟಕದ ಕಾರ್ಯದರ್ಶಿ ವೆಂಕಟೇಶ ಎನ್. ಮರಾಠೆ, ಶರಣಬಸಪ್ಪ ವಡಗಾಂವ, ರತ್ನಕುಮಾರ ದೊಳಕರ್, ಡಾ. ನೂರಜಾಹನ್, ಸುರೇಶ ಕವಲಗಿ, ಬಸವರಾಜ ಬಿ. ಸಫಳೆ, ಧರ್ಮಣ್ಣ ಸಾವಳಗಿ, ಕಾವೇರಿ ವಠಾರಕರ್, ಶುಭಂ ಪವಾರ, ಪೀರಪ್ಪ ಎಸ್. ಹರಳಯ್ಯಾ, ಶಶಿಕಾಂತ ರಾಠೋಡ, ಜಗದೀಶ ಮರಡಿ, ನಿರ್ಮಲಾ ಚವ್ಹಾಣ, ಜಯಶ್ರೀ ಹಣವಶೆಟ್ಟಿ ಹಾಗೂ ಪ್ರೇಮಾ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave A Reply

Your email address will not be published.