Shubhashaya News

ದಲಿತ ಸೇನೆ ಆರ್‌ಗೆ ಅಧ್ಯಕ್ಷರಾಗಿ ಮಲ್ಲಿನಾಥ ಚಿಂಚೋಳಿ ಆಯ್ಕೆ

ಡಾ. ಅಂಬೇಡ್ಕರ್ ತತ್ವ ಸಿದ್ಧಾಂತದಡಿ ಸಂಘಟನೆ ಬಲಪಡಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ: ಮಲ್ಲಿನಾಥ ಚಿಂಚೋಳಿ

ಆಳಂದ: ಪಟ್ಟಣದಲ್ಲಿ ದಲಿತ ಸೇನೆ (ಆರ್) ಘಟಕದ ಅಧ್ಯಕ್ಷ ಮಲ್ಲಿನಾಥ ಚಿಂಚೋಳಿ ಸೇರಿ ಪದಾಧಿಕಾರಿಗಳನ್ನು ಅಧಿಕಾರ ವಹಿಸಿ ಗೌರವಿಸಲಾಯಿತು.

ಆಳAದ: ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ ಹಾಗೂ ಆಶಯಗಳನ್ನು ಮುಂದಿಟ್ಟುಕೊAಡು ದಲಿತ ಸೇನೆ ರಾಮ ವಿಲಾಸ್ ಸಂಘಟನೆಯನ್ನು ತಾಲೂಕಿನಲ್ಲಿ ಮತ್ತಷ್ಟು ಬಲಪಡಿಸಲಾಗುವುದು. ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಮಾಜದ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಂಘಟಿತ ಹೋರಾಟ ನಡೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಸಂಘಟನೆಯ ನೂತನ ತಾಲೂಕು ಅಧ್ಯಕ್ಷ ಮಲ್ಲಿನಾಥ ಚಿಂಚೋಳಿ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸೇನೆ ರಾಮ ವಿಲಾಸ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶ್ರಾವಣಕುಮಾರ ಮೋಸಲಗಿ ಅವರ ಆದೇಶದ ಮೇರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳಣಿ ಹಾಗೂ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ನೂತನ ತಾಲೂಕು ಪದಾಧಿಕಾರಿಗಳ ನೇಮಕಾತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾತನಾಡಿದರು.
ಸಂಘಟನೆಯ ಜವಾಬ್ದಾರಿ ವಹಿಸಿಕೊಂಡಿರುವ ಎಲ್ಲ ಪದಾಧಿಕಾರಿಗಳು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಂಘಟನೆಯ ಆಶಯಗಳನ್ನು ಸಾಕಾರಗೊಳಿಸಬೇಕು ಎಂದರು.
ಸಮಾಜದ ಎಲ್ಲ ವರ್ಗಗಳ ಹಕ್ಕುಗಳ ರಕ್ಷಣೆ, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಹಾಗೂ ಅರ್ಹರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸಲಿದೆ. ತಾಲೂಕಿನಲ್ಲಿ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಿ, ಗ್ರಾಮೀಣ ಭಾಗದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲಾಗುವುದು. ಸಂಘಟನೆಯ ಎಲ್ಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸರ್ವಾನುಮತದಿಂದ ಪ್ರಧಾನ ಕಾರ್ಯದರ್ಶಿಯಾಗಿ ಜೈಭೀಮ ಕಂಟೆಕುರಿ, ಯುವ ಘಟಕದ ಅಧ್ಯಕ್ಷರಾಗಿ ಸುದೀಪ ನಡಗೇರಿ, ಉಪಾಧ್ಯಕ್ಷರಾಗಿ ಬಸವರಾಜ ಕಾಟೆ ಹಾಗೂ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಪ್ರದೀಪ ಮೇಲಿನಕೇರಿ ಅವರನ್ನು ನೇಮಕ ಮಾಡಲಾಯಿತು.
ಸಮಾರಂಭದಲ್ಲಿ ಬಾಬುರಾವ ಅರಣೋದಯ, ದತ್ತಾ ಕಟ್ಟಿಮನಿ, ವಿಆರ್‌ಡಬ್ಲ್ಯು ಶರಣು ಕವಲಗಾ, ಮಹೇಶ ಕೋಚಿ, ಸೈಬಣ್ಣ ನಾಗಲೆಗಾಂವ, ರಾಜಶೇಖರ ಕಾಮನಳ್ಳಿ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘಟನೆಯ ಉಪಾಧ್ಯಕ್ಷ ದಿಲೀಪ ಮಂಟಗಿ, ಶೇಶಿಕಾಂತ ಕಾಂಬ್ಳೆ, ಮಂಜುನಾಥ ಸಿಂಗೆ, ಖಾಸಿನಾಥ ಕಾಮನಕರ, ಲಕ್ಷಿö್ಮÃಬಾಯಿ ರುದ್ರಾವಡಿ, ಸುವರ್ಣ ಬಂಗಾರಗಾ, ಸದಾಶಿವ ಕುಮ್ಮೆ, ಲಕ್ಷಣ ಸಂಗೊಳ್ಳಗಿ, ಸಂದೀಪ ಜಿಡಾಗ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.