Shubhashaya News

ಸೆ.೨೩ ರಂದು ಮಂದಿರ ಉದ್ಘಾಟನೆ, ಅಡ್ಡಪಲ್ಲಕ್ಕಿ ಮಹೋತ್ಸವ- ಸುಭಾಷ್ ಆರ್ ಗುತ್ತೇದಾರ

ಆಳಂದ ತಾಲೂಕಿನ ತಡಕಲ ಗ್ರಾಮದಲ್ಲಿ ಸೆ.೨೩ರ ಬುಧುವಾರದಂದು ತಮ್ಮ ತಾಯಿಯ ಸ್ಮರಣಾರ್ಥ ನಿರ್ಮಿಸಿರುವ ಅಂಬಾ ಭವಾನಿ ಮಂದಿರ ಉದ್ಘಾಟನೆ ಹಾಗೂ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ತಿಳಿಸಿದ್ದಾರೆ.

ಪಟ್ಟಣದ ಸ್ವಗೃಹದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸೆ. ೨೩ರಂದು ಬೆಳಿಗ್ಗೆ ೧೦ ಗಂಟೆಗೆ ಅಂಬಾ ಭವಾನಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ೧೧ ಗಂಟೆಗೆ ಧರ್ಮಸಭೆ, ೧೦೦೮ ಮುತ್ತೆöÊದೆಯರಿಗೆ ಉಡಿ ತುಂಬುವುದು, ಪುರವಂತರ ಕುಣಿತ, ಡೊಳ್ಳು ಹಾಗೂ ಸಕಲ ವಾದ್ಯಗಳೊಂದಿಗೆ ಪಂಚ ಪೀಠದ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವದ ಭವ್ಯ ಮೆರವಣಿಗೆ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ಇದರ ಅಂಗವಾಗಿ ಈಗಾಗಲೇ ಸೆ. ೧೮ರಿಂದ ಮಲ್ಲಿಕಾರ್ಜುನ ಶಾಸ್ತಿçà ಐನಾಪೂರ ಹಾಗೂ ಕುಮಾರ ಯೋಗಿರಾಜೇಂದ್ರ ಶಾಸ್ತಿçà ಖಾನಾಪೂರ ಅವರಿಂದ ದೇವಿ ಪುರಾಣ ಜರುಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ರಂಭಾಪುರಿ, ಉಜ್ಜೆಯನಿ, ಕೇದಾರ, ಶ್ರೀಶೈಲ, ಕಾಶಿ ಪೀಠದ ಉಭಯ ಪೂಜ್ಯರು ವಹಿಸಲಿದ್ದು ನೇತೃತ್ವವನ್ನು ಕಡಗಂಚಿಯ ವೀರಭದ್ರ ಶಿವಾಚಾರ್ಯರು ವಹಿಸಲಿದ್ದು. ಸಮ್ಮುಖವನ್ನು ಹಾರಕೂಡನ ಚೆನ್ನವೀರ ಶಿವಾಚಾರ್ಯರು, ಜಿಡಗಾದ ಮುರುಘರಾಜೇಂದ್ರ ಸ್ವಾಮಿ, ನಂದಗಾAವನ ರಾಜಶೇಖರ ಸ್ವಾಮಿ, ನಿಂಬಾಳದ ಜಡೆ ಶಾಂತಲಿAಗ ಸ್ವಾಮಿ, ಮುತ್ತಾö್ಯನ ಬಬಲಾದನ ಗುರುಪಾದಲಿಂಗ ಸ್ವಾಮಿ, ಶರಣಬಸವೇಶ್ವರ ಸಂಸ್ಥಾನದ ಚಿರಂಜೀವಿ ದೊಡ್ಡಪ್ಪ ಅಪ್ಪ ವಹಿಸಲಿದ್ದಾರೆ.

ಬಡದಾಳದ ಚೆನ್ನಮಲ್ಲ ಶಿವಾಚಾರ್ಯ, ಮಾದನಹಿಪ್ಪರ್ಗಾದ ಅಭಿನವ ಶಿವಲಿಂಗ ಸ್ವಾಮಿ, ಅಫಜಲಪೂರನ ಮಳೇಂದ್ರ ಶಿವಾಚಾರ್ಯ, ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜ, ಮಹಾಂತೇಶ್ವರ ಹಿರೇಮಠದ ಮಹಾಂತಲಿAಗ ಶಿವಾಚಾರ್ಯ, ಅಚಲೇರನ ಬಸವರಾಜೇಂದ್ರ ಸ್ವಾಮಿ, ಚಿಂಚನಸೂರಿನ ಸಿದ್ಧಮಲ್ಲ ಶಿವಾಚಾರ್ಯ, ಮಾಡಿಯಾಳದ ಮರುಳಸಿದ್ಧ ಸ್ವಾಮಿ, ಮಾದನಹಿಪ್ಪರ್ಗಾ ಹಿರೇಮಠನ ಶಾಂತವೀರ ಶಿವಾಚಾರ್ಯ, ನರೋಣಾದ ಗುರುಮಹಾಂತ ಸ್ವಾಮಿ, ಚಿಂಚನಸೂರ ಹಿರೇಮಠನ ಗಂಗಾಧರ ಶಿವಾಚಾರ್ಯ, ಕೇಸರ ಜವಳಗಾದ ವೀರಂತೇಶ್ವರ ಸ್ವಾಮಿ, ನಿಂಬರ್ಗಾದ ನೀಲಕಂಠ ಶಿವಾಚಾರ್ಯ, ಶಿವಲಿಂಗೇಶ್ವರ ಸ್ವಾಮಿ, ಗೋಳಾದ ಚೆನ್ನಮಲ್ಲೇಶ್ವರ ಸ್ವಾಮಿ, ಅಕ್ಕಲಕೋಟನ ಬಸವಲಿಂಗ ಸ್ವಾಮಿ, ಬಂಗರಗಾದ ಶಿವಾನಂದ ಶಿವಾಚಾರ್ಯ, ಹಡಲಗಿಯ ಶಾಂತಬಸವ ಶಿವಾಚಾರ್ಯ, ಪಡಸಾವಳಿಯ ಶಂಭುಲಿAಗ ಶಿವಾಚಾರ್ಯ, ಗೋಳಾ ಬಿಯ ಶರಣ ಮುತ್ತಾö್ಯ, ತಡಕಲನ ಸಿದ್ಧಮಲ್ಲ ಶಿವಾಚಾರ್ಯ, ಹಿರೋಳಿಯ ಶಿವಬಸವ ಸ್ವಾಮಿ, ವಿಕೆ ಸಲಗರನ ಸಾಂಬಶಿವ ಶಿವಾಚಾರ್ಯ, ಕವಲಗಾದ ಶಾಂತಲಿAಗೇಶ್ವರ ಸ್ವಾಮಿ, ದೇವಂತಗಿಯ ರೇಣುಕಾ ಶಿವಾಚಾರ್ಯ, ಲಾಡ ಚಿಂಚೋಳಿಯ ಶಾಂತಲಿAಗೇಶ್ವರ ಸ್ವಾಮಿ, ಭೂಸನೂರಿನ ಶಂಭು ಶಿವಶಾಂತಲಿAಗ ಶಿವಾಚಾರ್ಯ, ಬಿಲಗುಂದಾದ ಚಿದಾನಂದ ಸ್ವಾಮಿ, ಕಿಣ್ಣಿಸುಲ್ತಾನನ ಶಿವಶಾಂತಲಿAಗ ಶಿವಾಚಾರ್ಯ, ಧುತ್ತರಗಾಂವನ ಸಿದ್ಧಮಾಂಬೆ, ಆಳಂದ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ, ಶರಣನಗರದ ಚಿಕ್ಕ ರೇವಣಸಿದ್ಧ ದೇವರು, ಬೋಳಣಿಯ ಆನಂದಮಯಿ ತಾಯಿ, ತೋಂಟದಾರ್ಯ ಮಠದ ಕೋರಣ್ಣೆಶ್ವರ ಸ್ವಾಮಿ, ಸಾಲೇಗಾಂವನ ಸುಂದರಮ್ಮ ತಾಯಿ, ಯಳಸಂಗಿಯ ಪರಮಾನಂದ ಸ್ವಾಮಿ, ಖಾನಾಪೂರಿನ ಯೋಗಿರಾಜೇಂದ್ರ ಶಾಸ್ತಿçà ಹಾಗೂ ಚಿಣಮಗೇರಿಯ ವೀರಮಹಾಂತ ಶಿವಾಚಾರ್ಯರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಜಕೀಯ ಧುರೀಣರಾದ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವ ಭಗವಂತ ಖುಬಾ, ಮಾಜಿ ಸಂಸದರಾದ ಉಮೇಶ ಜಾಧವ, ರವೀಂದ್ರ ಗಾಯಕವಾಡ, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ, ರೇವುನಾಯಕ ಬೆಳಮಗಿ, ಸುನೀಲ ವಲ್ಯಾಪೂರೆ, ರಾಜುಗೌಡ, ಬಾಬುರಾವ ಚವ್ಹಾಣ, ಬಸವರಾಜ ಪಾಟೀಲ ಮುರುಮ, ಶಾಸಕರಾದ ಬಸವರಾಜ ಮತ್ತಿಮಡು, ಅವಿನಾಶ ಜಾಧವ, ಶಶೀಲ ನಮೋಶಿ, ಬಿ ಜಿ ಪಾಟೀಲ, ಜಗದೇವ ಗುತ್ತೇದಾರ, ಪ್ರಭು ಚವ್ಹಾಣ, ಶರಣು ಸಲಗರ, ಸಿದ್ದು ಪಾಟೀಲ, ಶೈಲೇಂದ್ರ ಬೆಲ್ದಾಳೆ, ಸಚೀನ ಕಲ್ಯಾಣಶೆಟ್ಟಿ, ಶಿವರಾಜ ಪಾಟೀಲ, ಮಾಜಿ ಶಾಸಕರಾದ ಅಪ್ಪುಗೌಡ ಪಾಟೀಲ ರೇವೂರ, ದೊಡ್ಡಪ್ಪಗೌಡ ಪಾಟೀಲ, ಅಮರನಾಥ ಪಾಟೀಲ, ಜ್ಞಾನರಾಜ ಚೌಗುಲೆ, ಪ್ರಕಾಶ ಖಂಡ್ರೆ, ಅರುಣ ಶಹಾಪೂರ, ರಾಜಕೀಯ ಧುರೀಣರಾದ ಚಂದು ಪಾಟೀಲ, ನಿತೀನ ಗುತ್ತೇದಾರ, ಅಶೋಕ ಬಗಲಿ, ಸೋಮನಾಥ ಪಾಟೀಲ, ಸುಭಾಷ್ ರಾಠೋಡ, ಅಂಬಾರಾಯ ಅಷ್ಟಗಿ, ಬಸವರಾಜ ಬೆಣ್ಣೂರ, ಲಿಂಗರಾಜ ಬಿರಾದಾರ, ಈಶ್ವರಸಿಂಗ್ ಠಾಕೂರ, ಅವ್ವಣ್ಣಾ ಮ್ಯಾಕೇರಿ, ಶರಣಪ್ಪ ತಳವಾರ, ಗುರುನಾಥ ಜ್ಯಾಂತಿಕರ್, ಧರ್ಮಣ್ಣಾ ಈಟಗಾ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಸದರಿ ಕಾರ್ಯಕ್ರಮದಲ್ಲಿ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜಗದ್ಗುರುಗಳ ಆಶೀರ್ವಾದ ಪಡೆದು, ಪ್ರಸಾದ ಸೇವಿಸಿ, ತಾಯಿ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಮುಖಂಡ ಅಪ್ಪಾಸಾಹೇಬ್ ಗುಂಡೆ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಪ್ರ. ಕಾರ್ಯದರ್ಶಿಗಳಾದ ಸೀತಾರಾಮ ಜಮಾದಾರ, ಪ್ರಕಾಶ ಮಾನೆ, ಪುರಸಭೆ ಮಾಜಿ ಸದಸ್ಯ ಶಿವಪುತ್ರ ನಡಗೇರಿ, ಫಯ್ಯಾಜ್ ಪಟೇಲ, ಹುಸೇನಯ್ಯ ಗುತ್ತೇದಾರ, ಜಗದೀಶ ಕಿಣಗಿ ಸೇರಿದಂತೆ ಇತರರು ಇದ್ದರು.

Leave A Reply

Your email address will not be published.