Shubhashaya News

ರಾಜಕೀಯದಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಮನವಿ

ಕಲಬುರಗಿ: ಶೈಕ್ಷಣಿಕ,ಉದ್ಯೋಗದ ಜೊತೆಯಲ್ಲಿ ರಾಜಕೀಯದಲ್ಲಿ ಸಂಪೂರ್ಣವಾಗಿ ಒಳ ಮೀಸಲಾತಿ ಜಾರಿ ಮತ್ತು ಈ ವರ್ಷ ಮಳೆಯ ಕೊರತೆಯಿಂದಾಗಿ ಮುಂಗಾರು ಬೆಳೆ ಸಂಪೂರ್ಣ ನಾಶವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಇದರ ಕುರಿತು ಸರಿಯಾದ ವರದಿ ಕೂಡ ಸಂಬಂದಿಸಿದ ಅಧಿಕಾರಿಗಳು ಸರ್ಕಾರಕ್ಕೆ ನೀಡುವಲ್ಲಿ ವಿಫಲರಾಗಿದ್ದು ಈ ಕೂಡಲೇ ಸರಕಾರಕ್ಕೆ ಸರಿಯಾದ ವರದಿ ನೀಡದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕೆಂದು ಮಾದಿಗ ದಂಡೋರಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸುಂದರ ಡಿ ಸಾಗರ ಅವರು ಸಿಎಂ ಡಿಕೆ ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಈಗಾಗಲೇ ಪರಿಶಿಷ್ಟ ಜಾತಿಯ ಪ್ರವರ್ಗ ‘ಎ’ ಜಾತಿಗೆ ಸಂಬಂದಿಸಿದ ಎಲ್ಲಾ ಉಪಜಾತಿಗಳು ಶೈಕ್ಷಣಿಕ ಉದ್ಯೋಗದ ಜೊತೆ ರಾಜಕೀಯವಾಗಿ ಅಸಮಾನತೆ ಶೋಷಣೆಗೆ ಒಳಪಟ್ಟಿರುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಬಹುಸಂಖ್ಯಾತ ಜನಾಂಗದವರಾಗಿದ್ದು ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಕ್ಷೇತ್ರದಲ್ಲಿ ನಮಗೆ ಅವಕಾಶ ದೊರೆತಿಲ್ಲ ಎಂದರು.ತಾವುಗಳು ಪರಿಶಿಷ್ಟ ಜಾತಿಯ ಪ್ರವರ್ಗ ‘ಎ’ ಜಾತಿಗೆ ಸಂಬಂದಿಸಿದ ಎಲ್ಲಾ ಉಪ ಜಾತಿಗಳಿಗೆ ಶೈಕ್ಷಣಿಕ ಉದ್ಯೋಗದ ಜೊತೆ ರಾಜಕೀಯ ಸಮಾನತೆ ಕಲ್ಪಿಸಲು ಸಂಪೂರ್ಣ ಒಳಮೀಸಲಾತಿ ಜಾರಿಗೆ ಮಾಡಬೇಕು.ಮತ್ತು ಈ ಭಾಗ ಅತಿ ಹಿಂದುಳಿದ ಭಾಗ ಆಗಿರುವುದರಿಂದ ಬೆಳೆ ಸಮೀಕ್ಷೆಯನ್ನು ಸರಿಯಾದ ರೀತಿಯಲ್ಲಿ ವರದಿ ಮಾಡಿ ಅದರ ವರದಿಯನ್ನು ಪಡೆದುಕೊಂಡು ಕಾಳಗಿ ತಾಲೂಕು, ಹಾಗೂ ಚಿಂಚೋಳಿ ತಾಲೂಕುಗಳ ರೈತರಿಗೆ ಬರ ಪರಿಹಾರ ಘೋಷಣೆ ಮಾಡಬೇಕೆಂದು ಅವರು ಸಿಎಂ ಡಿಕೆ ಶಿವಕುಮಾರ ಅವರ ಬಳಿ‌ ಮನವಿ ಮಾಡಿಕೊಂಡರು.

Leave A Reply

Your email address will not be published.