ಕಲಬುರಗಿ: ಕನ್ನಡ ಚಿತ್ರರಂಗದ ಹಿರಿಯ ಹಾಗೂ ದಿಗ್ಗಜ ನಟ ಅನಂತನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಸಮಸ್ತ ಕನ್ನಡಿಗರಿಗೆ ಹಾಗೂ ಚಲನಚಿತ್ರ ಪ್ರೇಮಿಗಳಿಗೆ ಅಪಾರ ಸಂತಸ ತಂದಿದೆ ಎಂದು ಮಹಾಗಾಂವ ಭಾರತೀಯ ಜನತಾ ಪಾರ್ಟಿಯ ಕೈಗಾರಿಕಾ ಪ್ರಕೋಷ್ಠಕ ಸಹ ಸಂಚಾಲಕರಾದ ಮಲ್ಲಿಕಾರ್ಜುನ ಮರತೂರಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಅನಂತನಾಗ್ ಅವರಂತಹ ಶ್ರೇಷ್ಠ ನಟನಿಗೆ ದಾದಾಸಾಹೇಬ್ ಫಾಲ್ಕೆ ಗೌರವ ಸಿಕ್ಕಿರುವುದು ಇಡೀ ಕನ್ನಡ ನಾಡಿಗೆ ಮತ್ತು ಭಾಷೆಗೆ ಸಿಕ್ಕ ದೊಡ್ಡ ಮನ್ನಣೆಯಾಗಿದೆ ಎಂದು ಹೇಳಿದರು.ಕೇವಲ ನಟರಾಗಿ ಅಷ್ಟೇ ಅಲ್ಲದೆ, ನಾಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರ ಈ ಸಾಧನೆ ಮುಂಬರುವ ಯುವ ಕಲಾವಿದರಿಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅನಂತನಾಗ ಅವರು, ತಮ್ಮ ಸಹಜ ಅಭಿನಯ ಹಾಗೂ ವೈವಿಧ್ಯಮಯ ಪಾತ್ರಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸಾಮಾಜಿಕ ಸಂದೇಶ ಹಾಗೂ ವಾಣಿಜ್ಯ ಸಿನಿಮಾಗಳೆರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಮಾಲ್ಗುಡಿ ಡೇಸ್, ಮಿಂಚಿನ ಓಟ, ಗಣೇಶನ ಮದುವೆಯಂತಹ ಕಾಲಾತೀತ ಕೃತಿಗಳ ಮೂಲಕ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ.ಡಾ ರಾಜಕುಮಾರ್ ಅವರ ನಂತರ ಈ ಅಪರೂಪದ ಗೌರವಕ್ಕೆ ಭಾಜನರಾದ ಎರಡನೇ ಕನ್ನಡದ ನಟ ಎಂದು ಅವರು ಹೇಳಿದರು
Prev Post