Shubhashaya News

ಬೆಳೆ ವಿಮೆ ೨ನೇ ಹಂತದ ಪರಿಹಾರ ಪಾವತಿಸುವಂತೆ ಒತ್ತಾಯ

ಆಳಂದವನ್ನು ಬರಪೀಡಿತ ತಾಲೂಕು ಘೋಷಿಸಿ: ರೈತ ಸಂಘಟನೆಗಳ ಆಗ್ರಹ

ಆಳಂದ: ತಾಲೂಕು ಬರ ಘೋಷಣೆ ಸೇರಿ ಇತರ ಬೇಡಿಕೆಗಾಗಿ ರೈತ ಜಾಗೃತ ಸಂಘದಿAದ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ತಹಸೀಲ್ದಾರ ಅಣ್ಣಾರಾವ್ ಪಾಟೀಲ ಮೂಲಕ ಸರ್ಕಾರಕ್ಕೆ ಮಹಾದೇವ ಹತ್ತಿ, ದತ್ತರಾಜ ಗುತ್ತೇದಾರ ಸೇರಿದಂತೆ ಪ್ರಮುಖರು ಮನವಿ ಸಲ್ಲಿಸಿದರು.

ಆಳಂದ: ಪ್ರಸಕ್ತ ಮುಂಗಾರು ಮಳೆ ವೈಫಲ್ಯದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ರೈತ ಜಾಗೃತ ಸಂಘದ ಆಶ್ರಯದಲ್ಲಿ ರೈತ ಸಂಘಟನೆಗಳ ಒಕ್ಕೂಟದಿಂದ ಮುಖಂಡರು ತಾಲೂಕು ಆಡಳಿತ ಸೌಧದ ಮುಂದೆ ಧರಣಿ ಸತ್ಯಾಗ್ರಹ ಕೈಗೊಂಡು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಂಘದ ಅಧ್ಯಕ್ಷ, ನ್ಯಾಯವಾದಿ ಮಹಾದೇವ ಹತ್ತಿ ಅವರ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಮಳೆ ಕೈಕೊಟ್ಟು ಬಿತ್ತನೆ ಬೆಳೆಗಳು ಒಣಗುತ್ತಿವೆ. ಮಳೆಯ ನಿರೀಕ್ಷೆಯಲ್ಲಿ ರೈತರು ಎರಡು ಬಾರಿ ಬಿತ್ತನೆ ಮಾಡಿ ನಷ್ಟ ಅನುಭವಿಸಿದ್ದು, ಬೀಜ, ರಸಗೊಬ್ಬರ ಹಾಗೂ ಕೃಷಿ ವೆಚ್ಚಕ್ಕಾಗಿ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಗ್ರಾಮಗಳ ರೈತರಿಗೆ ಬೆಳೆ ವಿಮೆಯ ಎರಡನೇ ಹಂತದ ಪರಿಹಾರ ಪಾವತಿಯಾಗಿಲ್ಲ. ಕಬ್ಬಿಗೆ ಸರ್ಕಾರದಿಂದ ದೊರೆಯಬೇಕಾದ ಪ್ರೋತ್ಸಾಹ ಧನ, ಬೆಂಬಲ ಬೆಲೆಯ ಬಾಕಿ ಹಣವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ದತ್ತರಾಜ ಗುತ್ತೇದಾರ, ಮಲ್ಲಿಕಾರ್ಜುನ ವಣದೆ, ಸಂಘದ ಕಾರ್ಯದರ್ಶಿ ಸಚೀನ ಎಸ್. ಬಂಡಗರ, ನಾಗರಾಜ ಕುಂಬಾರ, ಸದ್ರೋದ್ದೀನ್ ಅನ್ಸಾರಿ, ರಘಪ್ಪಾ ಹತ್ತರಕಿ, ಸುಭಾಷ ಪಾಟೀಲ, ವಿವೇಕಾನಂದ ಹತ್ತಿ, ಸಂತೋಷ ವಾಲೆ, ಸಂತೋಷ ಹತ್ತಿ, ಮಲ್ಲಿನಾಥ ಪಾಟೀಲ ಜಮಗಾ, ಬಸವರಾಜ ಲಾವಣಿ, ಕಾಶಿನಾಥ ಪಾಟೀಲ, ಸೋಮಶೇಖರ ಹತ್ತರಕಿ, ಲಕ್ಷಿö್ಮÃಂಪುತ್ರ ಕುಂಬಾರ, ಶಿವುಪುತ್ರ ಹತ್ತಿ, ಹಣಮಂತ ಕಲಶೆಟ್ಟಿ ಮತ್ತಿತರರು ಧರಣಿಯಲ್ಲಿ ಭಾಗವಹಿಸಿ ಬೇಡಿಕೆಗೆ ಒತ್ತಾಯಿಸಿದರು.
ಜಾನುವಾರುಗಳಿಗೂ ಮೇವಿನ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಮೇವು ಒದಗಿಸುವ ಕೇಂದ್ರಗಳನ್ನು ಸ್ಥಾಪಿಸಬೇಕು. ಜನರು ಗುಳೆ ಹೋಗುವುದನ್ನು ತಡೆಯಲು ಉದ್ಯೋಗ ಒದಗಿಸುವ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.
ರೈತರ ಸಾಲ ಮನ್ನಾ ಮಾಡಬೇಕು, ಎಕರೆಗೆ ೨೫ ಸಾವಿರ ಪರಿಹಾರ, ಬೆಳೆ ವಿಮೆಯ ಎರಡನೇ ಹಂತದ ಪರಿಹಾರವನ್ನು ಶೀಘ್ರ ಪಾವತಿಸಬೇಕು ಹಾಗೂ ರೈತರ ಹಿತ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಆದ್ದರಿಂದ ಸರ್ಕಾರ ಕೂಡಲೇ ಸ್ಪಂದಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಸಲ್ಲಿಸಲಾಯಿತು.

Leave A Reply

Your email address will not be published.