Shubhashaya News

ಕಮ್ಮಾರ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಪ್ರತ್ಯೇಕ ನಿಗಮಕ್ಕೆ: ಲೋಹಾರ ಆಗ್ರಹ

ಆಳಂದ: ಕಮ್ಮಾರ ಸಮುದಾಯ ಬೇಡಿಕೆಗೆ ಒತ್ತಾಯಿಸಿ ಬೆಂಗಳೂರನಲ್ಲಿ ನಡೆದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಎಸ್‌ಟಿ ಇಲಾಖೆ ಜಂಟಿ ನಿರ್ದೇಶಕರ ಮೂಲಕ ರಮೇಶ ಲೋಹಾರ ಹಾಗೂ ಜಿ.ಟಿ.ರಂಗಸ್ವಾಮಿ ನೇತೃತ್ವದಲ್ಲಿ ಸಮುದಾಯ ಬಾಂಧವರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಆಳಂದ: ರಾಜ್ಯಾದ್ಯಂತದ ಕಮ್ಮಾರ ಸಮುದಾಯದ ನೂರಾರು ಬಾಂಧವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜಮಾಯಿಸಿ, ತಮ್ಮ ದಶಕಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನಾಟಕ ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟದ ರಾಜ್ಯ ಗೌರವ ಅಧ್ಯಕ್ಷ ರಮೇಶ ಲೋಹಾರ ಅವರು ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಬೇಡಿಕೆಯ ವಿಶೇಷ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಇಲಾಖೆಯ ರಾಜ್ಯ ಜಂಟಿ ನಿರ್ದೇಶಕ ರೆಡ್ಡಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಒಕ್ಕೂಟದ ರಾಜ್ಯ ಗೌರವ ಅಧ್ಯಕ್ಷ ರಮೇಶ ಲೋಹಾರ ಅವರು ಮಾತನಾಡಿ, ‘ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮ’ದಿಂದ ಕಮ್ಮಾರ ಸಮುದಾಯವನ್ನು ಬೇರ್ಪಡಿಸಿ, ಪ್ರತ್ಯೇಕವಾಗಿ ‘ಕರ್ನಾಟಕ ರಾಜ್ಯ ಕಮ್ಮಾರ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಬಸವಣ್ಣನವರ ಕಾಯಕ ಸಿದ್ಧಾಂತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಈ ಸಮುದಾಯ, ಇಂದಿಗೂ ರಾಜ್ಯಾದ್ಯಂತ ಸುಮಾರು ೫ ಲಕ್ಷಕ್ಕೂ ಅಧಿಕ ಕುಟುಂಬಗಳನ್ನು ಹೊಂದಿದ್ದು, ಗ್ರಾಮೀಣ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಪ್ರಸ್ತುತ ಕಮ್ಮಾರ ಸಮುದಾಯವನ್ನು ವಿಶ್ವಕರ್ಮ ನಿಗಮದ ವ್ಯಾಪ್ತಿಗೆ ಸೇರಿಸಲಾಗಿದ್ದು, ಈ ನಿಗಮದಡಿ ಐದು ವಿವಿಧ ಕುಶಲಕರ್ಮಿ ಸಮುದಾಯಗಳು ಒಟ್ಟಾಗಿರುವುದರಿಂದ ಅನುದಾನ ಹಂಚಿಕೆ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ತಮಗೆ ಅನ್ಯಾಯವಾಗುತ್ತಿದೆ ಎಂದು ಅವರು
ದಕ್ಷಿಣ ಕನ್ನಡ ಮತ್ತು ಚಾಮರಾಜ ಜಿಲ್ಲೆಗಳಲ್ಲಿ ಈಗಾಗಲೇ ಕಮ್ಮಾರ ಸಮುದಾಯವನ್ನು ಪರಿಶಿಷ್ಟ ಪಂಗqದಲ್ಲಿ (ಎಸ್‌ಟಿ)ಕ್ಕೆ ಇದ್ದಂತೆ, ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಇರುವ ಕಬ್ಬಿಣ ಕೆಲಸ ಮಾಡುವ ಕಮ್ಮಾರರನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ರಾಜ್ಯ ಕಮ್ಮಾರ ಸಂಘದ ಅಧ್ಯಕ್ಷ ಜಿ.ಟಿ.ರಂಗಸ್ವಾಮಿ ಮಾತನಾಡಿ, ಕಮ್ಮಾರರ ವೃತ್ತಿ ಮತ್ತು ಸವಾಲುಗಳು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ವಿಶಿಷ್ಟವಾಗಿರುವುದರಿಂದ ಸಾಮಾನ್ಯ ಯೋಜನೆಗಳಿಂದ ತಮ್ಮ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂಬುದು ಅವರ ವಾದಿಸಿದರು.
ಅಧಿಕಾರಿಗಳಿಗೆ ಬೇಡಿಕೆಯ ಕುರಿತು ಮುಖಂಡರು, ವಿಶ್ವಕರ್ಮ ನಿಗಮದಿಂದ ಬೇರ್ಪಡಿಸಿ ಪ್ರತ್ಯೇಕ ಬಜೆಟ್ ಹಾಗೂ ಆಡಳಿತ ಮಂಡಳಿ ರಚನೆ, ಪವರ್ ಹ್ಯಾಮರ್, ವೆಲ್ಡಿಂಗ್ ಯಂತ್ರ, ಇಂಡಕ್ಷನ್ ಫರ್ನೇಸ್ ಖರೀದಿಗೆ ಶೇ. ೮೦ರಷ್ಟು ಸಬ್ಸಿಡಿ, ಶೇ. ೩-೪ರ ಬಡ್ಡಿದರದಲ್ಲಿ ೧೦ ಲಕ್ಷದಿಂದ ೨೫ ಲಕ್ಷದವರೆಗೆ ಸಾಲ; ಹೊಸ ಪಟಸಾಲೆ ಸ್ಥಾಪನೆಗೆ ಶೇ. ೫೦ ಸಬ್ಸಿಡಿಯೊಂದಿಗೆ ೧೦ ಲಕ್ಷದವರೆಗೆ ಸಾಲ; ಕಚ್ಚಾ ಸಾಮಗ್ರಿ ಖರೀದಿಗೆ ಶೂನ್ಯ ಬಡ್ಡಿ ಸಾಲ, ೫ ಲಕ್ಷದ ಉಚಿತ ಆರೋಗ್ಯ ವಿಮೆ ಹಾಗೂ ೬೦ ವರ್ಷ ಮೇಲ್ಪಟ್ಟ ಕುಶಲಕರ್ಮಿಗಳಿಗೆ ಮಾಸಿಕ ೪,೦೦೦ ಪಿಂಚಣಿ, ಕೃಷಿ, ಅರಣ್ಯ, ನೀರಾವರಿ ಹಾಗೂ ಸಾರಿಗೆ ಇಲಾಖೆಗಳು ಅಗತ್ಯವಿರುವ ಕಬ್ಬಿಣದ ಸಾಮಗ್ರಿಗಳನ್ನು ನೋಂದಾಯಿತ ಕಮ್ಮಾರರಿಂದಲೇ ಖರೀದಿಸುವ ಕಡ್ಡಾಯ ಆದೇಶ, ಬೆಳಗಾವಿ, ಬಳ್ಳಾರಿ, ಮೈಸೂರು, ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಐದು ‘ಕಮ್ಮಾರ ಸಿಎನ್‌ಸಿ ಕ್ಲಸ್ಟರ್’ ಸ್ಥಾಪನೆಯಾಗಬೇಕು. ಐಟಿಐ, ಡಿಪ್ಲೊಮಾ, ಮೆಕ್ಯಾನಿಕಲ್ ಎಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಮಾಸಿಕ ೮,೦೦೦ ಶಿಷ್ಯವೇತನ; ಐಐಟಿ, ಎನ್‌ಐಟಿ ಅಥವಾ ವಿದೇಶಿ ವಿಶ್ವವಿದ್ಯಾಲಯ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ೧೫ ಲಕ್ಷದವರೆಗೆ ಪ್ರೋತ್ಸಾಹಧನ, ‘ಕರ್ನಾಟಕ ಮೆಟಲ್ ಆರ್ಟ್’ ಬ್ರ‍್ಯಾಂಡ್ ಹೆಸರಿನಡಿ ಇ-ಕಾಮರ್ಸ್ ವೇದಿಕೆಗಳಲ್ಲಿ (ಅಮೆಜಾನ್, ಫ್ಲಿಪ್‌ಕಾರ್ಟ್) ಕೈಉತ್ಪನ್ನ ಪ್ರದರ್ಶನಕ್ಕೆ ಡಿಜಿಟಲ್ ವೇದಿಕೆ ನಿರ್ಮಾಣ, ಚಾಮರಾಜನಗರ ಮತ್ತು ರಾಜ್ಯಾದ್ಯಂತ ಹಂಚಿಹೋಗಿರುವ ಲಕ್ಷಾಂತರ ಕಮ್ಮಾರ ಕುಟುಂಬಗಳ ಅಸ್ತಿತ್ವ ಮತ್ತು ಆರ್ಥಿಕ ಪುನಶ್ಚೇತನಕ್ಕಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ ಅಗತ್ಯ ಅನುದಾನ ಕಾಯ್ದಿರಿಸಬೇಕೆಂದು ಸಮಸ್ತ ಸಮುದಾಯದ ಪರವಾಗಿ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿ ಸರ್ಕಾರ ತಮ್ಮ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಬೇಕೆAದು ಪ್ರತಿಭಟನಾಕಾರರು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಈ ಬಂತೇ ಅಮರಜ್ಯೋತಿ ಅವರು ಪ್ರತಿಭಟನೆಗೆ ಬೆಂಬಲಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾತನಾಡಿದರು.
ಕಮ್ಮಾರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಮಹಾರುದ್ರ ಕಮ್ಮಾರ, ಮೈಸೂರು ಜಿಲ್ಲಾಧ್ಯಕ್ಷ ಮಂಜುನಾಥ, ಪ್ರಧಾನ ಕಾರ್ಯದರ್ಶಿ ಮಹಾದೇವ, ಡಾ. ದಾಕ್ಷಾಯಣಿ ಮದ್ದುರ್, ರವಿಕುಮಾರ, ಶೇಖರ ಮೈಸೂರು, ಬೆಳ್ಳ ಶೆಟ್ಟರು, ಬಿ. ವಿಜಯಸಿಂಹ, ಗೋಪಾಲ, ಲಿಂಗರಾಜ ಕಮ್ಮಾರ, ಡಾ. ಮಹೇಶ, ಶಂಕರ, ಲಿಂಗರಾಜ್ ಕೊಳ್ಳೇಗಾಲ, ಸೋನುಕುಮಾರ್,ಸಿದ್ದರಾಜು,ರಾಚಪ್ಪ ಉಡಿಗಾಲ, ರಾಜು ಟಿ ನರಸೀಪುರ, ಸಿದ್ದಪ್ಪ ಟಿ ನರಸೀಪುರ, ಮಾಯಿ ಮೈಸೂರ್, ನಂಜುAಡ ಶೆಟ್ಟಿ, ಗೋವಿಂದಪ್ಪ ನಂಜನಗೂಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಮುದಾಯ ಬಾಂಧವರು ಭಾಗವಹಿಸಿದ್ದರು ಎಂದು ಕಮಾರ ಒಕ್ಕೂಟು ತಿಳಿಸಿದೆ.

Leave A Reply

Your email address will not be published.