Shubhashaya News

ಸಹಕಾರ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಒಗ್ಗಟ್ಟಿನ ಶ್ರಮ ಅಗತ್ಯ: ಸುಭಾಷ ಗುತ್ತೇದಾರ

ಶ್ರೀ ಧನಲಕ್ಷಿö್ಮÃ ಸೌಹಾರ್ದನಿಂದ ಗ್ರಾಹಕರಿಗೆ ಸೌಲಭ್ಯ ವಿತರಣೆ

ಆಳಂದ: ಶ್ರೀ ಧನಲಕ್ಷಿö್ಮÃ ಸೌಹಾದ ಸಹಕಾರಿ ಸಂಘದ ೨೪ನೇ ವಾಷಿರ್ಕ ಮಹಾಸಭೆಯನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ ಉದ್ಘಾಟಿಸಿದರು. ಗುರುನಾಥ ಜಾಂತೀಕರ್, ರತ್ನಾಬಾಯಿ ಆಲೂರೆ, ಮಹಾಂತಪ್ಪ ಆಲೂರೆ, ಸೋಮನಾಥ ಕವಲಗಿ ಇತರರು ಇದ್ದರು.

ಆಳಂದÀ: ಶ್ರೀ ಧನಲಕ್ಷಿö್ಮÃ ಸೌಹಾರ್ದ ಸಹಕಾರಿ ಸಂಘವು ಕಳೆದ ಹಲವು ವರ್ಷಗಳಿಂದ ರೈತರು, ಬಡವರು, ಮಧ್ಯಮ ವರ್ಗದವರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದು, ಸಂಸ್ಥೆಯ ಬೆಳವಣಿಗೆಯನ್ನು ಮುಂದುವರಿಸಿಕೊAಡು ಇನ್ನಷ್ಟು ಜನಮುಖಿಯಾಗಿ ರೂಪಿಸಬೇಕು ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಹೇಳಿದರು.
ತಾಲೂಕಿನ ಸಾವಳೇಶ್ವರ ಗುರುಕೃಪಾ ಸಾಂಸ್ಕೃತಿಕ ಭವನದಲ್ಲಿ ನಡೆದ ಸರಸಂಬಾ ಶ್ರೀ ಧನಲಕ್ಷಿö್ಮÃ ಸೌಹಾರ್ದ ಸಹಕಾರಿ ಸಂಘದ ೨೪ನೇ ಸರ್ವ ಸದಸ್ಯರ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.
ಸುಮಾರು ೨೫ ವರ್ಷಗಳ ಹಿಂದೆ ಯುವ ಸಹಕಾರಿ ಧುರೀಣರಾಗಿದ್ದ ಮಹಾಂತಪ್ಪ ಆಲೂರೆ ಅವರು ಸರಸಂಬಾದಲ್ಲಿ ಕೇವಲ ೩೦೦ ಸದಸ್ಯರು ಹಾಗೂ ೩ ಲಕ್ಷ ಬಂಡವಾಳದೊAದಿಗೆ ಶ್ರೀ ಧನಲಕ್ಷಿö್ಮÃ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿದ್ದರು. ಸಹಕಾರಿ ಕ್ಷೇತ್ರದ ಭೀಷ್ಮರೆಂದೇ ಗುರುತಿಸಿಕೊಂಡ ಸಿದ್ಧಣ್ಣಗೌಡ ಅವರ ಸಾಧನೆಯಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಹಂತ ಹಂತವಾಗಿ ಈಗ ಬೆಳದ ಬೆಳೆಸಿದ ಅವರು, ರೈತರು ಹಾಗೂ ಬಡವರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವAತಹ ಸಹಕಾರಿ ವ್ಯವಸ್ಥೆಯನ್ನು ಕಟ್ಟಿಕೊಟ್ಟಿದ್ದರ ಫಲವಾಗಿ ೯೧.೮೦ ಕೋಟಿ ವಹಿವಾಟು ನಡೆಸಿ ೫೭.೬೪ ಲಕ್ಷ ನಿವ್ವಳ ಲಾಭ ತಂದುಕೊAಡಿದ್ದು ಸಾಧನೆ ಮೆಚ್ಚುವಂತಾದ್ದಾಗಿದೆ ಎಂದರು. ಸಂಸ್ಥೆಯು ಇಂದು ಐದು ಶಾಖೆಗಳನ್ನು ಹೊಂದಿ ವಿಸ್ತಾರಗೊಂಡಿರುವುದು ಸದಸ್ಯರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಶಿಕ್ಷಣ, ವಿವಾಹ ಸೇರಿದಂತೆ ವಿವಿಧ ಅಗತ್ಯಗಳಿಗೆ ಸಾಲ ಸೌಲಭ್ಯ ಕಲ್ಪಿಸುವುದರ ಜತೆಗೆ ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೊಳಿಸಿ, ಸ್ವಂತ ಕಟ್ಟಡ ಸೇರಿದಂತೆ ಜನಮುಖಿ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಮಹಾAತಪ್ಪ ಆಲೂರೆ ಅವರು ಎರಡು ವರ್ಷಗಳ ಹಿಂದಷ್ಟೇ ಅಗಲಿದ್ದರೂ, ಅವರು ಬಿತ್ತಿದ ಸಹಕಾರದ ಆಶಯಗಳನ್ನು ಮುಂದುವರಿಸಿಕೊAಡು ಹೋಗುತ್ತಿರುವ ಹಾಲಿ ಆಡಳಿತ ಮಂಡಳಿಯ ಕಾರ್ಯವೈಖರಿ ಮೆಚ್ಚುವಂತಿದೆ. ಸಂಸ್ಥೆ ಪ್ರಸ್ತುತ ೫೭.೬೪ ಲಕ್ಷ ನಿವ್ವಳ ಲಾಭ ಗಳಿಸಿರುವುದು ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ಒಗ್ಗಟ್ಟಿನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ ಎಂದು ಗುತ್ತೇದಾರ ಪ್ರಶಂಸಿಸಿದರು.
ಸಾನ್ನಿಧ್ಯ ವಹಿಸಿದ್ದ ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸೌಹಾರ್ದ ಸಹಕಾರಿಗಳ ನಿರ್ದೇಶಕ ಬೆಂಗಳೂರಿನ ಗುರುನಾಥ ಜಾಂತೀಕರ್ ಅವರು, ಸಹಕಾರಿ ಸಂಸ್ಥೆಗಳ ಬೆಳವಣಿಗೆ, ಸದಸ್ಯರ ಜವಾಬ್ದಾರಿ ಹಾಗೂ ಆರ್ಥಿಕ ಶಿಸ್ತಿನ ಕುರಿತು ಮಾತನಾಡಿದರು. ಸೌಹಾರ್ದ ಸಂಘಗಳ ವೃತ್ತಿಪರ ನಿರ್ದೇಶಕ ಸಂಜೀವ ಮಹಾಜನ್, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ, ಕಲಬುರಗಿ ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷ ಕೆ.ಬಿ. ಶೆಟಗಾರ ಮಾತನಾಡಿದರು.
ಶ್ರೀ ಧನಲಕ್ಷಿö್ಮÃ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಸೋಮಲಿಂಗ ಎಸ್. ಕವಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸ್ಥಾಪನೆಯಿಂದ ಇಲ್ಲಿಯವರೆಗಿನ ಬೆಳವಣಿಗೆ, ಸದಸ್ಯರಿಗೆ ಕಲ್ಪಿಸಿರುವ ವಿವಿಧ ಸೌಲಭ್ಯಗಳು ಹಾಗೂ ಸಂಸ್ಥೆಯ ಮುಂದಿನ ಯೋಜನೆಗಳ ಕುರಿತು ವಿವರಿಸಿದರು.
ವೇದಿಕೆಯಲ್ಲಿ ಪ್ರಕಾಶ ಮುತ್ತಾö್ಯ ನೇತೃತ್ವ ವಹಿಸಿದ್ದರು. ಸಂಘದ ಅಧ್ಯಕ್ಷೆ ರತ್ನಾಬಾಯಿ ಮಹಾಂತಪ್ಪ ಆಲೂರೆ ಅಧ್ಯಕ್ಷತೆ ವಹಿಸಿದ್ದರು.
ಚಂದ್ರಶೇಖರ ಪೂಜಾರಿ, ನಿರ್ದೇಶಕ ಶಿವಶರಣಪ್ಪ ಮುಳೆಗಾಂವ, ಜಗನಾಥ ದೇಶಮುಖ, ಸೂರ್ಯಕಾಂತ ಪಾಟೀಲ, ಶ್ರೀಕಾಂತ ದೇಶೆಟ್ಟಿ, ವಿಜಯಾನಂದ ಕೆ. ಮಾಶಾಳೆ, ಕುಪೇಂದ್ರ ಪಾಟೀಲ, ಬೆನಕ್ಪ ಸೋಸಟ್ಟಿ, ವಿಠ್ಠಲ ಖಾನಾಪೂರ, ಪ್ರಕಾಶ ಕುಂಬಾರ, ಸಂಜುಬಾಯಿ ಬಿ. ಮೈಂದರ್ಗಿ,ಕವಿತಾ ಎಂ. ಹಿರೇಮಠ, ದೀಪಾ ಯೋಗಿರಾಜ ಮಾಡಿಯಾಳೆ, ವಿಜಯಲಕ್ಷಿö್ಮÃ ಬಿ. ಕೊರಳ್ಳಿ, ಜ್ಯೋತಿ ಡಿ. ಶಿಂಧೆ, ಈರಣ್ಣಾ ಎಸ್. ಮುಗಳೆ ಹಾಗೂ ನಾಗೇಂದ್ರಪ್ಪ ಸಿ. ಹಳ್ಳೆ, ಶ್ರೀಶೈಲ ಮಾಡಿಯಾಳೆ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಸದಸ್ಯರಿಗೆ ಸಹಾಯಧನ ಪ್ರೋತ್ಸಾಹಧನ ವಿತರಿಸಲಾಯಿತು.
ಸಿಇಒ ಸೋಮನಾಥ ನಿಂಬರ್ಗಿ ವಾರ್ಷಿಕ ವರದಿ ಮಂಡಿಸಿ ಸಂಘವು ೨೦೨೫–೨೬ನೇ ಸಾಲಿನಲ್ಲಿ ೯೧.೮೦ ಕೋಟಿ ವಹಿವಾಟು ನಡೆಸಿ ೫೭.೬೪ ಲಕ್ಷ ನಿವ್ವಳ ಲಾಭ ಗಳಿಸಿದೆ. ಮಾರ್ಚ್ ೩೧, ೨೦೨೬ರ ವೇಳೆಗೆ ಸಂಘದಲ್ಲಿ ೩,೮೬೪ ಸದಸ್ಯರು ಇದ್ದು, ೧೭.೫೨ ಕೋಟಿ ದುಡಿಯುವ ಬಂಡವಾಳ, ೧೨.೯೪ ಕೋಟಿ ರೇವಣಿ ಹಾಗೂ ೨.೩೬ ಕೋಟಿ ನಿಧಿಗಳಿವೆ. ಸದಸ್ಯರು ಹಾಗೂ ಗ್ರಾಹಕರಿಗೆ ೧೧.೯೬ ಕೋಟಿ ಸಾಲ ವಿತರಿಸಿದ್ದು, ೩.೬೬ ಕೋಟಿ ಹೂಡಿಕೆ ಹೊಂದಿದೆ ಎಂದರು. .
ಯೋಗಿರಾಜ ಮಾಡಿಯಾಳೆ ನಿರೂಪಿಸಿದರು. ಕಲಾವಿದ ಶಂಕರ ಹೂಗಾರ ಸಂಗೀತ ನಡೆಸಿಕೊಟ್ಟರು.

Leave A Reply

Your email address will not be published.