ಕಲಬುರಗಿ: ಚಿತ್ರಕಲೆ ಪ್ರಕಾರವು ಅದ್ಭುತ ಕ್ಷೇತ್ರವಾಗಿದೆ. ಪ್ರತಿಯೊಬ್ಬ ವ್ಯಕ್ತಿ ಪ್ರಾಮಾಣಿಕತೆ ಮತ್ತು ಗೌರವದಿಂದ ತಮ್ಮ ಆಸಕ್ತಿಯ ಕ್ಷೇತ್ರನ್ನು ಪ್ರವೇಶಿಸಿ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ಯುವ ಚಿತ್ರಕಲಾವಿದೆ ಲಕ್ಷ್ಮೀ ಆರ್. ಪೊದ್ದಾರ ಅವರು ಚಿತ್ರಕಲಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಹಲವು ಚಿತ್ರಕಲಾಕೃತಿಗಳನ್ನು ರಚಿಸಿ ಚಿತ್ರಕಲಾವಿದೆಯಾಗಿ ಹೊರಹೊಮ್ಮಿರುವುದು ಹೆಮ್ಮೆಯ ವಿಷಯ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಚಿತ್ರಕಲಾವಿದ ಬಸವರಾಜ ಎಲ್. ಜಾನೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಅಡಿಯಲ್ಲಿ ನಗರದ ಬಿಸಿಲು ಆರ್ಟ ಕಲಾ ಗ್ಯಾಲರಿಯಲ್ಲಿ ಆಯೋಜಿಸಿದ ಯುವ ಚಿತ್ರಕಲಾವಿದೆ ಲಕ್ಷ್ಮೀ
ಆರ್. ಪೊದ್ದಾರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಕಲಾವಿದರು ರೂಪಬೇದ, ಪ್ರಮಾಣ, ಭಾವ, ಲಾವಣ್ಯ ಯೋಜನೆ, ಸಾದೃಶ್ಯ ಮತ್ತು ವರ್ಣಿಕಾಭಂಗ ಎಂಬ ಆರು ಅಂಗಗಳನ್ನು ಅರಿತು ಕಲಾಕೃತಿಗಳನ್ನು ರಚಿಸಬೇಕು. ಅಚಲ ನಂಬಿಕೆ, ಕಲಾಸಕ್ತಿ, ಗುರಿ ನಿರ್ಣಯದೊಂದಿಗೆ ಕಲಾಕ್ಷೇತ್ರವನ್ನು ಪ್ರವೇಶಿ ಭವಿಷ್ಯ ರೂಪಿಸಿಕೊಳ್ಳಲು ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ಲಕ್ಷ್ಮೀ
ಅವರು ಚಿತ್ರಕಲಾ ಕೃತಿಗಳಲ್ಲಿ ಚಿತ್ರಾತ್ಮಕ ಸಂಯೋಜನೆಯನ್ನು ಕಾಣಬಹುದಾಗಿದೆ. ಕಲಾಕೃತಿ ರಚನೆಗೆ ಕಲಾವಿದನ ಜೀವನಾನುಭವ ಬಹಳ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
ಕೃತಿಕಾ ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಬಿ. ಜಾನೆ ಮುಖ್ಯ ಅತಿಥಿಯಾಗಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಹಿಳಾ ಕಲಾವಿದೆಯರಿಗೆ ಸಾಕಷ್ಟು ಅವಕಾಶಗಳು ಮತ್ತು ಪ್ರೋತ್ಸಾಹ ಸಿಗುತ್ತಿದ್ದು, ತಮ್ಮ ಸ್ವಸಾಮರ್ಥ್ಯ, ಸಮರ್ಪಣಾ ಮನೋಭಾವದಿಂದ ಶ್ರೇಷ್ಠ ಮಟ್ಟದ ಕಲಾಕೃತಿಗಳ್ನು ರಚಿಸಿ ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರ ಮಾತನಾಡಿ ಲಕ್ಷ್ಮೀ
ಅವರ ಕಲಾಕೃತಿಗಳಲ್ಲಿ ಬದಲಾವಣೆ ಮತ್ತು ಹೊಸತನವಿದೆ. ನಿಸರ್ಗದದಿಂದ ಪ್ರೇರಿತಗೊಂಡು ರಚಿಸಿದ ಚಿತ್ರಕಲೆಯಲ್ಲಿ ಸೌಂದರ್ಯವಿದೆ. ಇವರ ಕಲಾಕೃತಿಗಳಲ್ಲಿ ಪ್ರಕೃತಿ ಪ್ರೇಮವಿದ್ದು, ಪ್ರಕೃತಿಯನ್ನು ಉಳಿಸಿ-ಬೆಳೆಸಿ ಎಂಬ ಸಂದೇಶದೊAದಿಗೆ ಬರಗಾಲ, ಅತಿವೃಷ್ಠಿ, ಪರಿಸರ ನಾಶ ಹೀಗೆ ಹತ್ತಾರು ಸಮಸ್ಯೆಗಳನ್ನು ಕಲಾಕೃತಿಗಳ ಮೂಲಕ ಬಿಂಬಿಸಿದ್ದಾರೆ ಎಂದರು.
ವ್ಹಿ.ಬಿ. ಬಿರಾದಾರ ಕಲಾ ಪ್ರತಿಷ್ಠಾನದ ಉಪಾಧ್ಯಕ್ಷೆ ಶ್ರೀಮತಿ ಶೈಲಜಾ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಚಿತ್ರಕಲೆ ಮತ್ತು ಕಲಾವಿದರ ಕೊಡುಗೆ ಅಪಾರವಾಗಿದೆ. ಸ್ತ್ರೀಯರು ಕುಟುಂಬ ನಿರ್ವಹಣೆಯೊಂದಿಗೆ ಕಲಾಕ್ಷೇತ್ರವನ್ನು ಪ್ರವೇಶಿಸಿ ಸಾಧನೆ ಮಾಡುತ್ತಿರುವುದು ಪ್ರಸಂಶನೀಯ. ಕಲೆಯಿಂದ ಮಾನಸಿಕ ನೆಮ್ಮದಿ, ಆರೋಗ್ಯ ಮತ್ತು ಸೌಂದರ್ಯ ಪ್ರಜ್ಞೆ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಂಬಾರಾಯ ಚಿನಮಳ್ಳಿ, ಚಂದ್ರಹಾಸ ಜಾಲಿಹಾಳ, ಡಾ. ಪರಶುರಾಮ ಪಿ, ಡಾ. ಕೆ. ಎಂ. ಕುಮಾರಸ್ವಾಮಿ, ಕುಪೇಂದ್ರ, ಜಲಜಾಕ್ಷಿ, ಕುಲಕರ್ಣಿ, ರಾಜು ತಳವಾರ, ಗೋಪಾಲ್ ಕೆ.ಪಿ, ಮಲ್ಲಿಕಾರ್ಜುನ ಮುಗಳಿ, ಹಣಮಂತ ತಳವಾರ ಸೇರಿದಂತೆ ಮುಂತಾದವ ರಿದ್ದರು. ಶಿವಪ್ಪ ಎನ್. ಪೂಜಾರಿ ಅತಿಥಿ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.