Shubhashaya News

ವಿದ್ಯಾರ್ಥಿಗಳಿಗೆ ಸಾಮಗ್ರಿ ವಿತರಣೆ: ನಿವೃತ್ತ ಶಿಕ್ಷಕರ ಸನ್ಮಾನ

ಶತಕೋತ್ತರ ರಜತೋತ್ಸವ

ಆಳಂದ: ಪಟ್ಟಣದ ಜೈನಪಾಠ ಶಾಲೆಯಲ್ಲಿ ಮರಾಠಿ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮಮದಲ್ಲಿ ನಿವೃತ್ತ ಶಿಕ್ಷಕರಿಗೆ ಮನೋಜ್ ಶಾ, ಡಾ. ಪಿ.ಎನ್. ಶಾ. ಪರಿಷತ್ತು ಅಧ್ಯಕ್ಷ ಗುರುಯ್ಯ ಸ್ವಾಮಿ, ಮಿಲಿಂದ್ ಉಮಾಳಕರ ಸನ್ಮಾನಿಸಿದರು.

ಆಳಂದ: ಕಳೆದ ೪೫ ವರ್ಷಗಳಿಂದ ಕರ್ನಾಟದಲ್ಲಿನ ಮರಾಠಿ ಸಾಹಿತ್ಯ ಪರಿಷತ್ತು ಕನ್ನಡ ಮತ್ತು ಮರಾಠಿ ಭಾಷೆಯ ಕೃತಿಗಳನ್ನು ಪರಸ್ಪರ ಅನುವಾದನೆ ಜೊತೆಗೆ ಭಾಷಾ ಬಾಂಧವ್ಯಕ್ಕೆ ಒತ್ತು ನೀಡುವ ಕೆಲಸ ಮುಂದುವರೆಯಲಿದೆ ಎಂದು ಮರಾಠಿ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಅಧ್ಯಕ್ಷ ಗುರಯ್ಯಾ ಆರ್. ಸ್ವಾಮಿ ಅವರು ಹೇಳಿದರು.
ಪಟ್ಟಣದ ಶ್ರೀ ದಿಗಂಬರ ಜೈನ ಜ್ಞಾನ ಸ್ವಾಸ್ಥö್ಯ ಪ್ರಸಾರಕ ಮಂಡಳಿಯ ಮರಾಠಿ ಮಾಧ್ಯಮ ಶಿಕ್ಷಣ ಸಂಸ್ಥೆಯ ಶತಕೋತ್ತರ ರಜತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯ ಕಲಬುರಗಿ ಮರಾಠಿ ಸಾಹಿತ್ಯ ಪರಿಷತ್ ಹಾಗೂ ಮುಂಬೈ ರಾಜ್ಯ ಮರಾಠಿ ಅಭಿವೃದ್ಧಿ ಸಂಸ್ಥೆ, ಆಶ್ರಯದಲ್ಲಿ ನಡೆದ ಪ್ರಬಂಧ, ಭಾಷಣ, ನಾಟಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ ಹಾಗೂ ಶಾಲೆಯ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನಿಂದ ಮರಾಠಿ ಸಾಹಿತ್ಯ ಪರಿಷತ್ತಿನಿಂದ ರಾಜದಲ್ಲಿ ಸೇವಾ ನಿವೃತ್ತ ಶಿಕ್ಷಕರಿಗೆ ಶಿಕ್ಷಕರಿಗೆ ಸಾಹಿತಿಗಳಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಮಾಡಲಾಗುತ್ತಿದೆ. ಕನ್ನಡ ಕೃತಿಗಳ ಮರಾಠಿ ಅನುವಾದ ಮರಾಠಿಯಿಂದ ಕನ್ನಡ ಅನುವಾದ ಮಾಡಲಾಗುತ್ತಿದೆ. ಎರಡೂ ಭಾಷೆಗಳ ಮಧ್ಯೆ ಪರಿಷತ್ತು ಸೇತುವೆ ಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳೀದ ಅವರು
ಕಳೆದ ಫೆ. ೨೭ರಂದು ಮಹಾರಾಷ್ಟçದಲ್ಲಿ ನಾಶೀಕನಲ್ಲಿ ನಡೆದ ೪ನೇ ವಿಶ್ವ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿಗೆ ಕವಿ ಮಂಗೇಶ ಪಾಡಗಾಂವಕರ್ ಭಾಷಾ ಸಂವಾರ್ಧನೆ ಹೆಸರಿನ ೨ ಲಕ್ಷ ರೂಪಾಯಿ ಒಳಗೊಂಡ ಪ್ರಥಮ ಪುರಸ್ಕಾರ ದೊರೆತ್ತಿರುವುದು ಕರ್ನಾಟಕದಲ್ಲಿ ಸಾಹಿತ್ಯ ಕ್ಷೇತ್ರದ ಕಾರ್ಯಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುಯ್ಯ ಆರ್ ಮಾತನಾಡಿ, ಈ ಮರಾಠಿ ಶಾಲೆಯಲ್ಲಿ ಓದುವ ಬಡ ಮಕ್ಕಳ ಅನುಕೂಲಕ್ಕಾಗಿ ಶೈಕ್ಷಣಿಕ ಸಾಮಗ್ರಿಗಳ ಸಹಾಯರ್ಥವಾಗಿ ವಿತರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿಗಂಬರ ಜೈನ ಸಂಸ್ಥೆಯ ಅಧ್ಯಕ್ಷ ಮನೋಜ್ ಶಾ, ಕಾರ್ಯದರ್ಶಿ ಸುಜಾತಾ ಶಾ ಹಾಗೂ ಸಮಾಜಸೇವಕ ಡಾ. ಪಿ.ಎನ್. ಶಾ ಅವರನ್ನು ಹಾಗೂ ನಿವೃತ್ತ ಶಿಕ್ಷಕರಾದ ಪಿ.ಎನ್. ಮೆಹತಾ, ಪ್ರಭಾಕರ ಸಲಗರೆ, ಆಶಾಬಾಯಿ ಆಳಂದಕರ, ಭಾನು ದಾಸ ಕಠಾರೆ, ಮಹಾನಂದಾ ರಾಚೋಟಿ, ಕೆ.ಎ. ಮೊಮೀನ್ ಹಾಗೂ ನಿವೃತ್ತ ಸಿಬ್ಬಂದಿ ಪದ್ಮಕುಮಾರ ಬೇಲ್‌ಸೂರೆ ಅವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪರಿಷತ್ತಿನ ಕೋಶಾಧಿಕಾರಿ ಮಿಲಿಂದ್ ಉಮಾಳಕರ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಧನಂಜಯ ಡೋಲೆ, ಶಿಕ್ಷಕರಾದ ರಾಹುಲ್ ಜಾವಳೆ, ಸುರೇಖಾ ಸ್ವಾಮಿ, ಸತೀಶ್ ಚವ್ಹಾಣ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave A Reply

Your email address will not be published.