Shubhashaya News

ಆಳಂದನಲ್ಲಿ ಶ್ರಾವಣ ಸಂಜೆ ಉಪನ್ಯಾಸ ಉದ್ಘಾಟನೆ

ಶರಣರ ಚಿಂತನೆಗಳಿAದ ವೈಚಾರಿಕ ಪರಿವರ್ತನೆ: ಮಹೇಶ್ವರಿ ವಾಲಿ

ಆಳಂದ: ಪಟ್ಟಣದ ಶರಣ ಏಕಾಂತರಾಮಯ್ಯ ಮಂದಿರದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಮಾತನಾಡಿದರು. ಶ್ರೀ ವಿಶ್ವನಾಥ ಶ್ರೀ, ಶರಣಬಸಪ್ಪ ಪಾಟೀಲ, ಚನ್ನಬಸವ ಕೊರಳ್ಳಿ ಇತರರು ಇದ್ದರು.

ಆಳಂದ: ಜಾತಿ ಭೇದವಿಲ್ಲದೆ, ಬಡವ ಶ್ರೀಮಂತ ಎನ್ನದೆ ಸರ್ವರು ಸಮಾನರು ಎಂದು ನಡೆ, ನುಡಿ, ಕಾಯಕ ಮತ್ತು ದಾಸೋಹ ಮೂಲಕ ಸ್ವತಃ ಆಚರಣೆಗೆ ತಂದ ಬಳಿಕ ಅದನ್ನು ವಚನಗಳ ಮೂಲಕ ಬರೆದ ನುಡಿಯೇ ನಮಗೆ ಮಂತ್ರಗಳಾಗಿವೆ ಎಂದು ಜಿಲ್ಲಾ ಜೆಡಿ(ಎಸ್) ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರು ಹೇಳಿದರು.
ಪಟ್ಟಣದ ಶರಣ ಏಕಾಂತರಾಮಯ್ಯ ಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ೧೪ನೇ ವರ್ಷದ ಶ್ರಾವಣ ಸಂಜೆ ಸರಣಿ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ಕೈಗೊಂಡ ಸಾಮಾಜಿಕ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದ್ದು, ಜಾತಿ, ಲಿಂಗ ಮತ್ತು ಮೇಲು-ಕೀಳು ಎಂಬ ಭೇದಗಳನ್ನು ತೊರೆದು ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಶರಣರ ನಡೆ-ನುಡಿ, ಆಚಾರ-ವಿಚಾರ ಹಾಗೂ ಕಾಯಕದ ತತ್ವಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸಮಾನತೆಯ ವಾತಾವರಣ ನಿರ್ಮಿಸಲು ಸಾಧ್ಯ. ಶರಣರ ವಚನಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿದ್ದು, ಅವುಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದು ಮಹೇಶ್ವರಿ ವಾಲಿ ಹೇಳಿದರು.
ಬಸವಣ್ಣನವರು ಕಟ್ಟಿದ ವಿಶ್ವದ ಮೊದಲು ಪಾರ್ಲೆಮಿಂಟ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ, ಮುಕ್ತಾಯಕ್ಕ ಸೇರಿ ಹಲವು ಮಹಿಳಾ ವಚನಕಾರರಿಗೆ ವಿಚಾರ ವ್ಯಕ್ತಪಡಿಸಲು ಸ್ವತಂತ್ರ ಅವಕಾಶ ದೊರೆತಿರುವುದು ಶರಣರ ಸಮಾನತೆಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ, ಮಹಿಳೆಯರನ್ನು ಕೇವಲ ಕುಟುಂಬದ ಜವಾಬ್ದಾರಿಗೆ ಸೀಮಿತಗೊಳಿಸದೆ, ಅವರಲ್ಲಿರುವ ಜ್ಞಾನ, ಪ್ರತಿಭೆ ಮತ್ತು ಚಿಂತನಾ ಶಕ್ತಿಗೆ ಗೌರವ ನೀಡಬೇಕು ಎಂಬ ಸಂದೇಶವನ್ನು ಶರಣರು ತಮ್ಮ ಬದುಕಿನ ಮೂಲಕವೇ ಸಾರಿದರು.
ತೋಂಟದಾರ್ಯ ಅನುಭವ ಮಂಟಪದ ಸಂಚಾಲಕ ಶ್ರೀ ಕೋರಣೇಶ್ವರ ಸ್ವಾಮೀಜಿ ಅವರು ಉದ್ಘಾಟಿಸಿ ಮಾತನಾಡಿ,À ಮಾನವೀಯತೆಯ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ. ಯುವಜನತೆ ಶರಣರ ವಿಚಾರಧಾರೆಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪರಿಷತ್ತಿನ ಅಧ್ಯಕ್ಷ ಸಂಜಯ ಪಾಟೀಲ ಅಧ್ಯಕ್ಷತೆ ಕಾರ್ಯಕ್ರಮದ ವಿವರಣೆ ನೀಡಿದರು.
ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಬಸಪ್ಪ ಪಾಟೀಲ ಮಾತನಾಡಿದರು. ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಚನ್ನಬಸವ ಕೊರಳ್ಳಿ ವಿದ್ಯಾರ್ಥಿಗೆ ಸನ್ಮಾನಿಸಲಾಯಿತು.
ರಫೀಕ್ ಇನಾಮದಾರ ಆಗಮಿಸಿದ್ದರು. ವೈಶಾಲಿ ಪಾಟೀಲ, ಬಾಬುರಾವ ಮಡ್ಡೆ, ಪ್ರಭಾಕರ ಸಲಗರ, ರಮೇಶ ಮಾಡ್ಯಾಳಕರ್, ಅಪ್ಪಾಸಾಹೇಬ ತೀರ್ಥೆ, ಎಲ್.ಎಸ್. ಬೀದಿ, ಭೀಮಾಶಂಕರ ಜಮಗಿ, ಮಲ್ಲಿನಾಥ ಯಲಶೆಟ್ಟಿ, ಸುಭಾಷ ಪಾಟೀಲ, ಮಹಾದೇವಪ್ಪ ಪಾಟೀಲ, ಸಾಹೇಬಗೌಡ ಪಾಟೀಲ, ರಾಜೇಂದ್ರ ಗುಂಡೆ, ಗುರಪ್ಪ ಶಹಾಪುರ, ಸತೀಶ ಸನ್ಮುಖ, ಲಿಂಗರಾಜ ಪಾಟೀಲ, ಶಿವಲಿಂಗಪ್ಪ ಮಂಟಗಿ, ಮಹಾದೇವ ಜಿಡ್ಡೆ, ಸುಖಮನಿ ಪಾಟೀಲ, ಸಿದ್ದರಾಮ ನಂದಗಾAವ, ಎಂ.ಎಸ್. ವಾಲಿ, ಸಂತೋಷ ವೇದಪಾಠಕ, ಧಾನಮ್ಮ ಶಹಾಪುರ, ಸುರೇಖಾ ಸ್ವಾಮಿ, ಮಹಾನಂದ ತುಕಾಣಿ, ವೀರಭದ್ರಪ್ಪ ಹಾರಕೆ, ಲಕ್ಷ್ಮಿಕಾಂತ ಕೋಣೆ ಉಪಸ್ಥಿತರಿದ್ದರು. ಜೆಪಿ ಪ್ರೌಢಶಾಲೆ ಹಾಗೂ ಪ್ರಾರ್ಥನಾ ಕನ್ನಡ ಶಾಲೆಯ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
ಶರಣರ ವಚನಗಳ ಪುಸ್ತಕಗಳನ್ನು ಹಿಡಿದು ವಚನ ಜಾಗೃತಿ ಜಾಥಾ ನಡೆಯಿತು. ಕಾರ್ಯದರ್ಶಿ ರಾಮಣ್ಣ ಸುತಾರ ನಿರೂಪಿಸಿದರು. ಅಪ್ಪಾಸಾಹೇಬ ತೀರ್ಥೆ ಸ್ವಾಗತಿಸಿದರು. ಮಲ್ಲಿನಾಥ ವಚ್ಚೆ ವಂದಿಸಿದರು.

Leave A Reply

Your email address will not be published.