ಕಲಬುರಗಿ: ಮೂರನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಲಬುರಗಿ ವಿಭಾಗದ ಉಪಾಧ್ಯಕ್ಷ ಪಿಡ್ಡಪ್ಪ ಜಾಲಗಾರ್ ಸುರಪುರ ಅವರ ನೇತೃತ್ವದಲ್ಲಿ ಗೃಹ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬಳಿಕ ನಿವೃತ್ತ ಪ್ರಾಂಶುಪಾಲ ಎಸ್.ಡಿ. ಕಟ್ಟಿಮನಿ, ಗಂಗಾಧರ ಸುರಪುರ, ಬಾಲಕೃಷ್ಣ ಸಲವಡಗಿ, ವೆಂಕಟೇಶ ಅವಧಾನಿ, ವಿಜಯಕುಮಾರ ಬೈಚ, ಬಾಳತೇನ ಸಿಂಗ ಹಜಾರೆ, ವೆಂಕಟೇಶ ಕುಲಕರ್ಣಿ, ಪಾಪಣ್ಣ ಇಟಗೀಕರ, ಲಕ್ಷ್ಮೀನಾರಾಯಣ ಜಾಲಗಾರ ಸುರಪುರ, ಬಾಬುರಾವ ಕುಲಕರ್ಣಿ, ನಾಗರಾಜ ಸುರಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.