ಕಲಬುರಗಿ: ದೇಶದಾದ್ಯಂತ ಅ.13ರಿಂದ ಆ.15ರ ವರೆಗೆ ‘ಹರ್ ಘರ್ ತಿರಂಗಾ’ ಅಭಿಯಾನ ಮತ್ತು ಆ.14ರಂದು ನಗರದಲ್ಲಿ ನಡೆಯಲಿರುವ ಧ್ವಜಾರೋಹಣ ಜಾಗೃತಿ ಯಾತ್ರೆಯಲ್ಲಿ ಎಲ್ಲರೂ ಶೃದ್ಧೆಯಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಭಾರತೀಯ ಜನತಾ ಪಾರ್ಟಿಯ ಕೈಗಾರಿಕಾ ಪ್ರಕೋಷ್ಠಕ ಸಹ ಸಂಚಾಲಕರಾದ ಮಲ್ಲಿಕಾರ್ಜುನ ಮರತೂರಕರ್ ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಜಾಗೃತರಾಗಿ ಶ್ರಮಿಸಬೇಕು.ಏಕ್ ಭಾರತ್ ಶ್ರೇಷ್ಠ ಭಾರತ್ ಎನ್ನುವ ನರೇಂದ್ರ ಮೋದಿ ಅವರ ಗುರಿ ಈಡೇರಿಸಲು ನಾವೆಲ್ಲ ಕೈಜೋಡಿಸಬೇಕು.ಈ ಅಭಿಯಾನದ ಮೂಲಕ ದೇಶಭಕ್ತಿ ಎಲ್ಲೆಡೆ ಮೊಳಗಬೇಕು ಎಂದು ಕರೆ ನೀಡಿದರು.ಈಗಾಗಲೇ ಜಿಲ್ಲೆಯಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದೆ.ಇದಕ್ಕೆ ಸಹಕರಿಸಿದ ಪ್ರತಿ ಕಾರ್ಯಕರ್ತರೂ ಅಭಿನಂದನಾರ್ಹರು. ಹರ್ ಘರ್ ತಿರಂಗಾ ಕಾರ್ಯಕ್ರಮ ಯಶಸ್ವಿಗೊಳಿಸಬೇಲು ಎಂದು ಅವರು ಮನವಿ ಮಾಡಿಕೊಂಡರು.