ಕಲಬುರಗಿ: ಈ ವರ್ಷ ಭಾರತದಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು “ಸ್ವಾತಂತ್ರ್ಯಕ್ಕೆ ಗೌರವ, ಭವಿಷ್ಯಕ್ಕೆ ಸ್ಫೂರ್ತಿ” ಎಂಬ ಆಶಯದೊಂದಿಗೆ ನಗರದಲ್ಲಿ ಸ್ವಚ್ಛತೆ, ರಾಷ್ಟ್ರಪ್ರೇಮ ಹಾಗೂ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲು ಇದೇ ಆಗಸ್ಟ್ 14ರಂದು ಕಲಬುರಗಿ ಮಹಾನಗರ ಪಾಲಿಕೆಯ ವತಿಯಿಂದ ಬೃಹತ್ “ರನ್ ಫಾರ್ ಶತಾಭಿಷೇಕಂ” ಓಟ ಹಾಗೂ ಮಕ್ಕಳಿಗಾಗಿ ಚಿತ್ರಕಲಾ ಮತ್ತು ಟಾಯ್‍ಕಥಾನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 7.30ಕ್ಕೆ ಸ್ವಚ್ಛ ಭಾರತಕ್ಕಾಗಿ “ರನ್ ಫಾರ್ ಶತಾಭಿಷೇಕಂ” (ರಾಷ್ಟ್ರಪ್ರೇಮದ ನಡಿಗೆ) ಓಟ ಕಾರ್ಯಕ್ರಮಕ್ಕೆ ಗಣ್ಯರಿಂದ ಚಾಲನೆ ನೀಡಲಾಗುತ್ತದೆ. ಈ ಓಟವು ಕಲಬುರಗಿ ಕೋಟೆಯಿಂದ ಆರಂಭವಾಗಿ, ಜಗತ್ ವೃತ್ತದ ಮೂಲಕ ಸಾಗಿ ತಿಮ್ಮಾಪುರ ವೃತ್ತಕ್ಕೆ ಬಂದು ಮುಕ್ತಾಯಗೊಳ್ಳಲಿದೆ. ಇದಕ್ಕೂ ಮೊದಲು ಅಂದು ಬೆಳಿಗ್ಗೆ 6.30 ಗಂಟೆಯಿಂದ ನೋಂದಣಿ ಹಾಗೂ ಕ್ಯಾಪ್, ಟಿ-ಶರ್ಟ್ ವಿತರಿಸಲಾಗುತ್ತದೆ. ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ.
ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಮಕ್ಕಳಿಗಾಗಿ ಸ್ಪರ್ಧೆಗಳು ಹಾಗೂ ಸ್ವಚ್ಛತಾ ಗೋಷ್ಠಿ ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ‘ಸ್ವಚ್ಛ ಭಾರತ ಮತ್ತು ಸ್ವಾತಂತ್ರ್ಯ ದಿನಾಚರಣೆ’ ವಿಷಯ ಕುರಿತು ಚಿತ್ರಕಲಾ ಸ್ಪರ್ಧೆ ಹಾಗೂ ಬೆಳಿಗ್ಗೆ 11.30 ಗಂಟೆಗೆ ‘ಕಲಬುರಗಿಯಲ್ಲಿ ಸ್ವಚ್ಛ ಭಾರತದ ಮಾದರಿಗಳು ಹಾಗೂ ತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಸ್ವಚ್ಛ ಭಾರತದ ಮಾದರಿಗಳು’ ವಿಷಯ ಕುರಿತು ಆಟಿಕೆ ತಯಾರಿಕಾ ಸ್ಪರ್ಧೆ (ಟಾಯ್‍ಕಥಾನ್) ಆಯೋಜಿಸಲಾಗಿದೆ.
ಅಂದು ಮಧ್ಯಾಹ್ನ 12 ಗಂಟೆಗೆ (ಸ್ವಚ್ಛ ಭಾರತ ಮಿಷನ್ ತಜ್ಞರಿಂದ ತ್ಯಾಜ್ಯ ವಿಂಗಡಣೆ, ಮರುಬಳಕೆ ಮತ್ತು ಸ್ವಚ್ಛತೆ ಕುರಿತು ಸಂವಾದ) ಸ್ವಚ್ಛ ಭಾರತ ಜಾಗೃತಿ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1.30 ಗಂಟೆಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಗಂಟೆಯವರೆಗೆ ಸಾರ್ವಜನಿಕರಿಗೆ ಕಲಾಕೃತಿಗಳ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
“ಸ್ವಾತಂತ್ರ್ಯದ ಮೌಲ್ಯಗಳನ್ನು ಗೌರವಿಸುವುದರ ಜೊತೆಗೆ, ಸ್ವಚ್ಛ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಯುವಜನತೆ ಮತ್ತು ಮಕ್ಕಳನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
2026ರ ಪ್ರಮುಖ ಆದ್ಯತೆಗಳು: ಸ್ವದೇಶಿ ತಂತ್ರಜ್ಞಾನ: 6ಜಿ ಪ್ರಯೋಗ, ಕೃತಕ ಬುದ್ಧಿಮತ್ತೆ (ಎಐ) (AI) ಹಾಗೂ ಸೆಮಿಕಂಡಕ್ಟರ್ ಮಿಷನ್‍ಗೆ ವಿಶೇಷ ಒತ್ತು. ಹಸಿರು ಪರಿವರ್ತನೆ: ಮಿಷನ್ ಲೈಫ್, ಸೌರಶಕ್ತಿ ಆಧಾರಿತ ಗ್ರಾಮಗಳು ಮತ್ತು ಹಸಿರು ಹೈಡೋಜನ್ ಮಿಷನ್ ಪ್ರಚಾರ.ಆತ್ಮನಿರ್ಭರ ರಕ್ಷಣೆ: ದೇಶೀಯ ರಕ್ಷಣಾ ಸಾಮಥ್ರ್ಯ ಮತ್ತು ಉತ್ಪಾದನೆಗೆ ಉತ್ತೇಜನ.ಡಿಜಿಟಲ್ ಒಳಗೊಳ್ಳುವಿಕೆ: ‘ಭಾಷಿಣಿ’ ತಂತ್ರಜ್ಞಾನದ ಮೂಲಕ 22 ಭಾμÉಗಳಲ್ಲಿ ನೈಜ ಸಮಯದ ಅನುವಾದ ಹಾಗೂ ನವೋದ್ಯಮಗಳಿಗೆ ಬೆಂಬಲ.