Shubhashaya News

ಕರಾಟೆಯಲ್ಲಿ ಮನೋಹರ ಬೀರನೂರ ವಿದ್ಯಾರ್ಥಿಗಳ ಸಾಧನೆ

ಕಲಬುರಗಿ: 29ನೇ ಆಲ್ ಇಂಡಿಯಾ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ್ ಕುಮಾರ್ ಬೀರನೂರ ರವರ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಜುಲೈ 25 ಮತ್ತು 26ರಂದು ಮೈಸೂರಿನ ಚಾಮುಂಡಿ ವಿಹಾರ ಒಳ ಕ್ರೀಡಾಂಗಣದಲ್ಲಿ ನಡೆದ 29ನೇ ಆಲ್ ಇಂಡಿಯಾ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಉಪಾಧ್ಯಕ್ಷರು (ರಾಜ್ಯ ಸಚಿವ ದರ್ಜೆ) ಕರ್ನಾಟಕ ಸರ್ಕಾರ ಕ್ರೀಡಾ ಪ್ರಾಧಿಕಾರ ಬೆಂಗಳೂರು, ಮಾಜಿ ವಿಧಾನ ಪರಿಷತ್ ಸದಸ್ಯರು, ಅಧ್ಯಕ್ಷರು AISKU ಮತ್ತುAKSKA ರವರ ನೇತೃತ್ವದಲ್ಲಿ AKSKA ಸಂಸ್ಥೆಯ ಸ್ಪೋರ್ಟ್ಸ್ ಕಮಿಷನ್ ಚೇರ್ಮನ್ ಮತ್ತು ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ ಬೀರನೂರ ರವರ ಕರಾಟೆ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ 4 ಬಂಗಾರ , 5ಬೆಳ್ಳಿ, ಮತ್ತು 12ಕಂಚು ಸೇರಿ ಒಟ್ಟು 21 ಪದಕ ಪ್ರಶಸ್ತಿ ಪತ್ರ ಗಳನ್ನು ಪಡೆದು ರಾಜ್ಯಕೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಮತು ಕಲಬುರಗಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಈ ಸಾಧನೆಗೆ ಅಧಿಕಾರಿಗಳ ವರ್ಗ, ರಾಜಕೀಯ ಮುಖಂಡರು ಕ್ರೀಡಾ ಅಭಿಮಾನಿಗಳು ಮತ್ತು ಸಂಸ್ಥೆಯ ಪದಾಧಿಕಾರಿಗಳಾದ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಸಂಸ್ಥೆಯ ಪದಾಧಿಕಾರಿಗಳಾದ ಮಂಜುನಾಥ ನಾಲವಾರಕರ್, ಅಭಯ್ ಚವ್ಹಾಣ ಮತ್ತು ಶರಣ ರೆಡ್ಡಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

ಪದಕ ಪಡೆದ ವಿದ್ಯಾರ್ಥಿಗಳ ವಿವರ
ಸಹನಾ ಕೋಳಕುರ(1 ಕಂಚು),ಶ್ರೇಷ್ಠ ಬೀರನೂರ(ಕಂಚು) ಆರವ (1ಬೆಳ್ಳಿ,1ಕಂಚು),ಅಭಿಷೇಕ (2ಬಂಗಾರ), ಹರ್ಷಿತ್ (2 ಬೆಳ್ಳಿ) ಪ್ರಣವ(1ಬಂಗಾರ 1 ಕಂಚು),ಮಿತಾಕ್ಷಿ (1ಕಂಚು) ಇಜಯ ರಾಜ(1ಕಂಚು),ಶ್ರೀಶೈಲ(1ಬಂಗಾರ.1ಬೆಳ್ಳಿ), ದೇವಾಂಕ(1ಬೆಳ್ಳಿ),ಸಂಜಯ್ ಎನ(1ಕಂಚು), ಭೀಮಾಶಂಕರ(1 ಕಂಚು),ಶ್ರೀದೇವಿ ಬಿ.(1 ಕಂಚು)
ತನುಶ್ರೀ(1 ಕಂಚು)ಸಾನವಿಕ್ .ಎನ್(1 ಕಂಚು)

Leave A Reply

Your email address will not be published.