Shubhashaya News

18.23 ಲಕ್ಷ ಗಣತಿ ನಮೂನೆ ಡಿಜಿಟಲೀಕರಣ: ಇಕ್ರಮ್ ಶರೀಫ್

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಜಿಲ್ಲೆಯಾದ್ಯಂತ ಶನಿವಾರದ ಅಂತ್ಯಕ್ಕೆ ಒಟ್ಟು 23,71,542 ಮತದಾರರ ಪೈಕಿ 18,23,335 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.

ಬಿ.ಎಲ್.ಓ. ಗಳು ಮನೆ-ಮನೆ ಭೇಟಿ ಕೊಟ್ಟಾಗ ಇಲ್ಲಿಯವರೆಗೆ 70,938 ಜನ ಮತದಾರರು ನಿಧನ ಹೊಂದಿರುವ ಬಗ್ಗೆ, 44,652 ಮತದಾರರು ಮನೆಯಲ್ಲಿ ಇಲ್ಲದಿರುವ (ಗೈರು), 3,34,458 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, ಇತರೆ 15,674 ಹಾಗೂ 31,502 ಮತದಾರರು ಈಗಾಗಲೆ ನೋಂದಣಿಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.