ಆಳಂದ: ಸಿಪಿಐ (ಎಂ)ಪಕ್ಷದ ಕಾರ್ಯಕರ್ತರು ಬೇಡಿಕೆಗೆ ಒತ್ತಾಯಿಸಿ ಮೋಘಾ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದರು.
ಆಳಂದ: ತಾಲ್ಲೂಕಿನ ಮೋಘಾ-ಕೆ ಗ್ರಾಮ ಪಂಚಾಯತ್ ಕಚೇರಿ ಎದುರು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕಾರ್ಯಕರ್ತರು ಪಂಚಾಯತ್ ವ್ಯಾಪ್ತಿಯಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಹಿನ್ನೆಲೆಯಾಗಿ ಬರ ಪರಿಹಾರ ಕಾಮಗಾರಿಗಳನ್ನು ತುರ್ತಾಗಿ ಆರಂಭಿಸುವAತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಆಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜೂರ ಪಟೇಲ್ ಅವರಿಗೆ ಮನವಿ ಸಲಿಸಿ ಬೇಡಿಕೆಗೆ ಒತ್ತಾಯಿಸಿದ ಪ್ರಮುಖರು, ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ತಕ್ಷಣ ಆರಂಭಿಸುವುದು, ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಎಲ್ಲ ಅರ್ಹರಿಗೆ ಉದ್ಯೋಗ ಕಲ್ಪಿಸುವುದು, ಜಾಬ್ ಕಾರ್ಡ್ ವಿತರಿಸುವುದು, ನೀರಿನ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳುವುದು, ಇಕ್ಕಳಕಿ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವುದು ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು.
ಸಿಪಿಐ(ಎಂ) ಆಳಂದ ತಾಲೂಕು ಕಾರ್ಯದರ್ಶಿ ಸಲ್ಮಾನ್ ಖಾನ್, ತಾಲೂಕು ಸಮಿತಿ ಸದಸ್ಯ ಪ್ರಮೋದ್ ಪಾಂಚಾಳ್ ಮಾತನಾಡಿ, ಜಿಲ್ಲಾ ಸಮಿತಿ ಸದಸ್ಯ ಪಾಂಡುರAಗ ಮಾವಿನ್ಕರ್ ಮಾತನಾಡಿ,
ಪಂಚಾಯತ್ ಆಡಳಿತಕ್ಕೆ ಆಗಸ್ಟ್ ೧೫ರವರೆಗೆ ಗಡುವು ನೀಡಲಾಗಿದೆ. ಆ ಅವಧಿಯೊಳಗೆ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಿ ಸಾರ್ವಜನಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸದಿದ್ದರೆ, ಸಿಪಿಐ(ಎಂ) ನೇತೃತ್ವದಲ್ಲಿ ಮತ್ತಷ್ಟು ವ್ಯಾಪಕ ಹಾಗೂ ಪ್ರಬಲ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
“ಈ ವರ್ಷ ಸಮರ್ಪಕ ಮಳೆಯಾಗದ ಕಾರಣ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣ ಈ ಪ್ರದೇಶವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಸೂಕ್ತ ಹಾಗೂ ಸಮರ್ಪಕ ಬರ ಪರಿಹಾರವನ್ನು ಘೋಷಿಸಬೇಕು” ಎಂದು ಆಗ್ರಹಿಸಿದರು.
ಇಕ್ಕಳಕಿ ಶಾಖಾ ಕಾರ್ಯದರ್ಶಿ ರೂಪಾ ಇಕ್ಕಳಕಿ ಸೇರಿದಂತೆ ನೀಲಮ್ಮ ಉಕ್ಳೆ, ಶಾಂತಾ ನಡಗೇರಿ, ಶಾಣಮ್ಮ ಶೇಳ್ಕೆ, ಗುಂಡಮ್ಮ ನಡಗೇರಿ, ಗುರುನಾಥ ಶೇಳ್ಕೆ, ಬಸವರಾಜ್ ಫುಲಾರ್, ಮಲ್ಲಣ್ಣ ಉಕ್ಳೆ, ಅಣ್ಣಪ್ಪ ನಡಗೇರಿ, ಸಿದ್ದಾರ್ಥ್ ಹಸೂರೆ ಹಾಗೂ ಇಕ್ಕಳಕಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು.