ಎಸ್‌ಐಆರ್ ಪ್ರಕ್ರಿಯೆ ಜವಾಬ್ದಾರಿಯಿಂದ ಪೂರ್ಣಗೊಳಿಸಿ
ಅರ್ಹ ಮತದಾರರ ಹೆಸರು ಮತಪಟ್ಟಿಯಿಂದ ಕೈಬಿಡದಂತೆ ಡಾ. ಫಾರುಕ್ ಎಚ್ಚರಿಕೆ
ಆಳಂದ: ಪಟ್ಟಣದಲ್ಲಿ ಎಸ್‌ಐಆರ್ ಜಾಗೃತಿ ಸಭೆಯಲ್ಲಿ ಕಲಬುರಗಿ ಮಣ್ಣೂರ ಆಸ್ಪತ್ರೆಯ ಸ್ಥಾಪಕ ಡಾ. ಫಾರುಕ್ ಮಣ್ಣೂರ ಮಾತನಾಡಿದರು. ನಿವೃತ್ತ ತಹಸೀಲ್ದಾರ ಸೈಯದ್ ನಿಸಾರ್ ವಜೀರ್, ಪಾಶಾ ಗುತ್ತೇದಾg ಇತರರು ಇದ್ದರು.
ಆಳಂದ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಪೂರ್ಣಗೊಳಿಸಬೇಕು. ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಕಲಬುರಗಿಯ ಮಣ್ಣೂರ ಆಸ್ಪತ್ರೆಯ ಸ್ಥಾಪಕ ಹಾಗೂ ಸಮಾಜಸೇವಕ ಡಾ. ಫಾರುಕ್ ಮಣ್ಣೂರ ಕರೆ ನೀಡಿದರು.
ಪಟ್ಟಣದಲ್ಲಿ ಅವರು ಆಯೋಜಿಸಿದ್ದ ಎಸ್‌ಐಆರ್ ಜಾಗೃತಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ, ಎಸ್‌ಐಆರ್ ಅರ್ಜಿ ಭರ್ತಿ ವಿಧಾನ, ಅಗತ್ಯ ದಾಖಲೆಗಳು ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಎಸ್‌ಐಆರ್ ಮೂಲಕ ಕೇವಲ ಮುಸಿಂ ಸಮುದಾವನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆತಂಕ ಹೊರಹಾಕಿದವರು, ಎಸ್‌ಐಆರ್ ಅರ್ಜಿಯನ್ನು ಪ್ರತಿಯೊಬ್ಬ ಮತದಾರರು ಸ್ವತಃ ಪರಿಶೀಲಿಸಿ, ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು. ತಮ್ಮ ಹೆಸರಿನ ಜೊತೆಗೆ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾರೊಬ್ಬರ ಹೆಸರೂ ಅನಗತ್ಯವಾಗಿ ಕೈಬಿಡದಂತೆ ಜಾಗೃತಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಫಾರಂ ಭರ್ತಿ ಮಾಡುವ ಜವಾಬ್ದಾರಿಯನ್ನು ಇತರರ ಮೇಲೆ ಹಾಕದೆ ಸ್ವತಃ ಪರಿಶೀಲಿಸಿ ಸಲ್ಲಿಸಬೇಕು. ಹೆಸರು, ಜನ್ಮ ದಿನಾಂಕ, ವಿಳಾಸ, ಕುಟುಂಬದ ವಿವರ ಸೇರಿದಂತೆ ಯಾವುದೇ ಮಾಹಿತಿಯಲ್ಲಿ ತಪ್ಪು ಕಂಡುಬAದರೆ ಮುಂದೆ ಮತದಾರರ ಪಟ್ಟಿಯಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಈ ಹಿಂದೆ ಜಾಗೃತಿಯ ಕೊರತೆ ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳಿಂದ ಹಲವಾರು ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿರುವ ಉದಾಹರಣೆಗಳಿವೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಎಸ್‌ಐಆರ್ ಅರ್ಜಿ ಭರ್ತಿ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದ ಡಾ. ಮಣ್ಣೂರ, ಎಸ್‌ಐಆರ್ ಕೇವಲ ಮತದಾನ ಗುರುತಲ್ಲ ದೇಶದ ನಾಗರಿಕತ್ವ ಸಾಬೀತಪಡಿಸುಂತಾಗಿದೆ. ಈ ನಿಟ್ಟಿನಲ್ಲಿ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ನಿವೃತ್ತ ತಹಶೀಲ್ದಾರ್ ಸೈಯದ್ ನಿಸಾರ್ ವಜೀರ್, ಇಕ್ಬಾಲ್ ಸಾಹೇಬ್, ಹಿದಾಯತ್ ಅಲಿ, ಜಾಕೀರ್, ರಫೀಕ್ ಇನಾಮದಾರ್, ಮೊಹಸಿನ್ ಗುತ್ತೇದಾರ್, ಸಯ್ಯದ್ ಯೂಸುಫ್ ಖಾಜಿ, ಯೂನಸ್ ಬಾಗ್ಬಾನ್, ಸಯ್ಯದ್ ಜಾಕಿರ್ ಅಹ್ಮದ್, ಅಜ್ಗರ್ ಅಲಿ ಹವಾಲ್ದಾರ, ತಯ್ಯಬ್ ಶೇಖ, ಮಶಾಕ್, ಮೊಹಮ್ಮದ್ ಹುಸೇನ್ ನಾಯ್ಕವಾಡಿ, ಪಾಶಾ ಗುತ್ತೇದಾರ, ಅಬ್ದಲ್ ಖಾದರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವದಂತಿಗಳಿಗೆ ಬೇಡ, ಬಿಎಲ್‌ಒಗೆ ಸಹಕರಿಸಿ:
ಎಸ್‌ಐಆರ್ ಅನಗತ್ಯ ಭಯ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದೆ. ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನೇ ನಂಬಬೇಕು. ಪ್ರಕ್ರಿಯೆ ವೇಳೆ ಬಿಎಲ್‌ಒಗೆ ಅಗತ್ಯ ದಾಖಲೆಗಳು ಸಮರ್ಪಕ ಮಾಹಿತಿಯನ್ನು ಒದಗಿಸಿ ಪರಿಶೀಲನೆಗೆ ಸಹಕರಿಸಬೇಕು. ಪ್ರತಿಯೊಬ್ಬರೂ ತಮ್ಮ ಮತದಾರರ ಹಕ್ಕು ಸುರಕ್ಷಿತವಾಗಿರುವಂತೆ ಜಾಗರೂಕರಾಗಿ ನಡೆದುಕೊಳ್ಳಬೇಕು.
ಡಾ. ಫಾರುಕ್ ಮಣ್ಣೂರ ಕಲಬುರಗಿ